ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ: ದಾಖಲೆಯಿದ್ದರೆ ಕೋರ್ಟ್‌ಗೆ ಹೋಗಲಿ-ಪ್ರಜ್ವಲ್‌

ಭಾನುವಾರ, ಮೇ 26, 2019
28 °C
ಎ.ಮಂಜು ಆರೋಪಕ್ಕೆ ತಿರುಗೇಟು

ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ: ದಾಖಲೆಯಿದ್ದರೆ ಕೋರ್ಟ್‌ಗೆ ಹೋಗಲಿ-ಪ್ರಜ್ವಲ್‌

Published:
Updated:
Prajavani

ಹಾಸನ: ನಾಮಪತ್ರ ಸಲ್ಲಿಕೆ ವೇಳೆ ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಲಾಗಿದೆ ಎಂಬ ಬಿಜೆಪಿ ಅಭ್ಯರ್ಥಿ ಎ.ಮಂಜು ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮೈತ್ರಿ ಕೂಟದ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ, ದಾಖಲೆ ಇದ್ದರೆ ಕೋರ್ಟ್‌ಗೆ ಹೋಗಲಿ ಎಂದು ತಿರುಗೇಟು ನೀಡಿದರು.

‘ಚುನಾವಣೆ ಸಂದರ್ಭದಲ್ಲಿ ಕಪ್ಪು ಚುಕ್ಕಿ ತರುವ ಕೆಲಸ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಪ್ರಶ್ನಿಸುವ ಹಕ್ಕುಇದೆ. ನಾನು ಕಂಪನಿಗೆ ರಾಜೀನಾಮೆ ನೀಡಿ ಆರು ತಿಂಗಳಾಗಿದೆ. ಅದಕ್ಕೆ ನಿರಕ್ಷೇಪಣಾ ಪತ್ರ ಸಹ ಇದೆ. ಈಗಲೂ ಕಂಪನಿ ವೆಬ್‌ಸೈಟ್‌ನಲ್ಲಿ ನನ್ನ ಹೆಸರು ಇದ್ದರೆ ಅದಕ್ಕೆ ನಾನು ಹೊಣೆಯಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ ಜನಾರ್ಶೀವಾದ ಇಲ್ಲದ ಸಂದರ್ಭದಲ್ಲಿ ಅಭ್ಯರ್ಥಿ ಬೇರೆ ದಾರಿ ಹುಡುಕುತ್ತಾರೆ. ನ್ಯಾಯಾಲಯದ ಮುಂದೆ ಪ್ರತಿಯೊಬ್ಬರು ತಲೆ ಬಾಗಲೇಬೇಕು. ಅದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಕೋರ್ಟ್‌ಗೆ ನೀಡುತ್ತೇವೆ. ನನಗೆ ವಿಚಾರಣೆಗೆ ಹಾಜರಾಗುವಂತೆ ಜಿಲ್ಲಾ ಚುನಾವಣಾಧಿಕಾರಿ ನೋಟಿಸ್‌ ಸಹ ನೀಡಿಲ್ಲ. ಹೀಗಿರುವಾಗ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !