ಹಾಸನ: ಓದುವ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಆಸೆ, ಆಕಾಂಕ್ಷಿಗಳನ್ನು ಬದಿಗಿಟ್ಟು, ಯಾವುದೇ ಆಕರ್ಷಣೆಗೆ ಒಳಗಾಗದೇ ಜೀವನ ರೂಪಿಸಿಕೊಳ್ಳಬೇಕು ಎಂದು ಜಾನಪದ ವಿದ್ವಾಂಸ, ನಿವೃತ್ತ ಪ್ರಾಧ್ಯಾಪಕ ಡಾ. ಹಂಪನಹಳ್ಳಿ ತಿಮ್ಮೇಗೌಡ ಹೇಳಿದರು.

ನಗರದ ಆರ್.ಸಿ. ರಸ್ತೆಯ ಗಂಧದ ಕೋಠಿ ಆವರಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ 2024-25ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ತಂತ್ರಜ್ಞಾನದಿಂದ ದಿನೇ ದಿನೆ ಹೊಸ ಅವಿಷ್ಕಾರಗಳು ಬರುತ್ತಿದ್ದು, ಯುವಕರು ಸರಿಯಾದ ಶಿಕ್ಷಣ ಪಡೆದುಕೊಂಡರೆ ಯಾವುದೇ ಕ್ಷೇತ್ರದಲ್ಲಾದರೂ ಕೆಲಸ ಮಾಡಬಹುದಾಗಿದೆ. ಮನೆ ಮನೆಗೆ ಸುದ್ದಿ ಪತ್ರಿಕೆ ಹಂಚುತ್ತಿದ್ದ ವ್ಯಕ್ತಿ, ಈ ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಗೆ ಏರುವ ಮೂಲಕ ಶ್ರೇಷ್ಠ ವಿಜ್ಞಾನಿಯಾದರು. ರಾಕೆಟ್ ಸಂಶೋಧನೆ ಅವರ ಕೊಡುಗೆ ಅಪಾರವಾದದ್ದು. ಏನೂ ಸೌಲಭ್ಯವಿಲ್ಲದೇ ಸಾಧನೆ ಮಾಡಿದ ಇಂತಹವರು ನಮ್ಮ ಆದರ್ಶವಾಗಬೇಕು ಎಂದು ಹೇಳಿದರು.

ಇಂದಿನ ಯುವಕರಿಗೆ ಎಲ್ಲ ಸೌಲಭ್ಯವಿದ್ದರೂ, ಸಾಧನೆ ಮಾಡಲು ಕಷ್ಟವಾಗುತ್ತಿದೆ. ಪ್ರಪಂಚದಲ್ಲಿ ಅತ್ಯಂತ ಶಕ್ತಿಶಾಲಿಯಾದುದು ಎಂದರೆ ಶಿಕ್ಷಣ. ಶಿಕ್ಷಕರು ಈ ಸಮಾಜದ ಬೆನ್ನೆಲುಬು. ಇಂದು ವಿದ್ಯೆ, ಶಿಕ್ಷಣಕ್ಕೆ ಹೆಚ್ಚು ಮೌಲ್ಯವಿದ್ದು, ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ನೀಡುವ ಬಹುದೊಡ್ಡ ಜವಾಬ್ದಾರಿ ಶಿಕ್ಷಕರು, ಅಧ್ಯಾಪಕರ ಮೇಲಿದೆ ಎಂದು ತಿಳಿಸಿದರು.

ಹಿಂದಿನ ಕಾಲದ ಶಿಕ್ಷಣಕ್ಕೂ ಇಂದಿನ ಶಿಕ್ಷಣಕ್ಕೂ ಹಲವು ಬದಲಾವಣೆಗಳು ಆಗಿವೆ. ಮೂಲಸೌಲಭ್ಯಗಳಿಂದ ಹಿಡಿದು ವೈಜ್ಞಾನಿಕವಾಗಿ ಹಲವು ಬದಲಾವಣೆ ಆಗಿವೆ. ಯುವಕರಿಗೆ ಶಿಕ್ಷಣ ಒಂದಿದ್ದರೆ ಸಾಲದು, ಬಹುಮುಖ್ಯವಾಗಿ ಸಂಸ್ಕಾರ ಇರಬೇಕು. ಸುತ್ತಮುತ್ತಲಿನ ಜನರನ್ನು ಗೌರವಿಸುವ, ಪ್ರೀತಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಜಾತಿ, ಧರ್ಮಗಳು ಎಂಬ ಅಡ್ಡ ಗೋಡೆ ಸಮಾಜದಲ್ಲಿದ್ದು, ಅದನ್ನು ಹೊಗಲಾಡಿಸುವ ನಿಟ್ಟಿನಲ್ಲಿ ಯುವ ಪೀಳಿಗೆ ಮುಂದಾಗಬೇಕು. ಎಲ್ಲರ ಮನೆಗಳು ದೊಡ್ಡದಾಗುತ್ತಿವೆ. ಆದರೇ ಮನಸುಗಳು ಸಂಕುಚಿತವಾಗುತ್ತಿವೆ ಎಂದು ತಿಳಿಸಿದರು.

ಸಮಾಜದಲ್ಲಿ ಅನಾಥಾಶ್ರಮಗಳು ಹೆಚ್ಚಾಗುತ್ತಿರುವುದು ಆತಂಕದ ವಿಷಯ. ನಮ್ಮ ಹಾಸನದಲ್ಲೇ ಇರುವ ಕೆಲವು ವೃದ್ಧಾಶ್ರಮಗಳಲ್ಲಿ ಇರುವ ಹಿರಿಯರನ್ನು ನೋಡಿದರೆ ಮನಸ್ಸಿಗೆ ನೋವಾಗುತ್ತದೆ. ಸಮಾಜದಲ್ಲಿ ಅತ್ಯುನ್ನತ ಹುದ್ದೆಯಲ್ಲಿ ಇರುವವರ ಮಕ್ಕಳೇ ತಮ್ಮ ತಂದೆ– ತಾಯಿಯರನ್ನು ಅನಾಥಾಶ್ರಮ ಇರಿಸುತ್ತಿದ್ದಾರೆ. ವಿದೇಶಗಳಲ್ಲಿ ವಾಸಿಸುತ್ತಿರುವ ಅನೇಕ ಯುವಕ– ಯುವತಿಯರು ಪೋಷಕರನ್ನು ಆಶ್ರಮಗಳಿಗೆ ತಳ್ಳಿದ್ದಾರೆ. ಮಕ್ಕಳಿಗೆ ಕೇವಲ ಶಿಕ್ಷಣ ಕೊಡಿಸಿ, ಸಂಸ್ಕಾರ ಕಲಿಸದೇ ಇರುವುದು ಇದಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟರು.

ಸಂಬಂಧಗಳಿಗೆ ಬೆಲೆ ಕೊಡುವುದನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಶಿಕ್ಷಣ ಎಂದರೆ ಕೇವಲ ಅಂಕ ಗಳಿಕೆ ಎಂಬುದಷ್ಟೇ ಆಗಿದ್ದು, ಅಂಕಗಳು ನೆಪ ಮಾತ್ರ. ಅಂಕ ಗಳಿಕೆಗೆ ಹೊರತಾದ ಜ್ಞಾನ, ಶಿಕ್ಷಣ ಪಡೆದುಕೊಳ್ಳಬೇಕು. ಹಣಕ್ಕೆ ಬೆಲೆಯಿಲ್ಲ. ಸಮಾಜದಲ್ಲಿ ಜ್ಞಾನಕ್ಕೆ ಶಾಶ್ವತವಾದ ಸ್ಥಾನವಿದೆ. ಕಾಲೇಜಿನ ಗ್ರಂಥಾಲಯವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಮಾಹಿತಿ ಕಲೆ ಹಾಕಲು ಅಂತರ್ಜಾಲ ಬಳಕೆ ಮಾಡಿಕೊಳ್ಳಬೇಕು ಎಂದರು.

ಸಾಂಸ್ಕೃತಿಕ ವೇದಿಕೆ ಸಂಚಾಲಕ ಜಿ.ಆರ್. ಮೋಹನ್ ಕುಮಾರ್, ಅಧ್ಯಾಪಕರಾದ ಎಂ.ವಿ. ಹೇಮಾವತಿ, ಡಾ. ಸುರೇಶ್ ಕುಮಾರ್, ಡಾ. ಸುನೀತಾ, ಸುರೇಶ್ ಹಾಗೂ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.