ಹಾಸನ: ‘ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಡಿಜಿಪಿ ಆಗಿದ್ದಡಾ.ರವೀಂದ್ರನಾಥ್ ಅವರ ರಾಜೀನಾಮೆ ಅಂಗೀಕರಿಸದೆ, ಕರ್ತವ್ಯದಲ್ಲಿ ಮುಂದುವರಿಸಬೇಕು’ ಎಂದು ಆಗ್ರಹಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

‘ರವೀಂದ್ರನಾಥ್ ಅವರು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಕಿರುಕುಳದಿಂದಬೇಸರಗೊಂಡು ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದು ವಿಷಾದನೀಯ ಸಂಗತಿ.ಡಿಸಿಆರ್ಇ ನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರದ ಹಗರಣದಲ್ಲಿ ಭಾಗಿಯಾದವರಿಗೆನಡುಕ ಹುಟ್ಟಿಸಿದ್ದ ದಿಟ್ಟ ಅಧಿಕಾರಿಯನ್ನು ವಿನಾಕಾರಣ ವರ್ಗಾವಣೆ ಮಾಡಿರುವುದನ್ನುಖಂಡನೀಯ’ ಎಂದರು.

ಡಿಸಿಆರ್ಇನಲ್ಲಿ ಸುಳ್ಳು ಜಾತಿ ಪತ್ರ ಹಗರಣದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರ ವಿರುದ್ಧಕಠಿಣ ಕ್ರಮ ಕೈಗೊಂಡು ಶಿಕ್ಷಿಸಬೇಕು. ದಕ್ಷ ಅಧಿಕಾರಿಯನ್ನು ವಿನಾಕಾರಣ ವರ್ಗಾವಣೆಮಾಡಿರುವುದು ಸರಿಯಲ್ಲ. ಅದೆಷ್ಟೋ ಅಧಿಕಾರಿಗಳು ತೀವ್ರ ಕಿರುಕುಳ ಅನುಭವಿಸಿ ಈರೀತಿ ಬಲಿಪಶು ಆಗುತ್ತಿದ್ದಾರೆ ಎಂದು ದೂರಿದ ಅವರು, ಉನ್ನತ ಅಧಿಕಾರಿಗಳನಡವಳಿಕೆಯಿಂದ ಬೇಸತ್ತು ರಾಜೀನಾಮೆ ನೀಡಿರುವ ರವೀಂದ್ರನಾಥ ಅವರರಾಜೀನಾಮೆಯನ್ನು ಅಂಗೀಕರಿಸದೆ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಹುದ್ದೆಯಲ್ಲೇಮುಂದುವರಿಸಬೇಕು ಎಂದು ಒತ್ತಾಯಿಸಿ ಸರ್ಕಾರಕ್ಕೆ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರ ಮೂಲಕ ಮನವಿಸಲ್ಲಿಸಿದರು.

ಮುಖಂಡರಾದ ಕೃಷ್ಣದಾಸ್, ಕೆ.ಈರಪ್ಪ, ಆರ್. ಮರಿಜೋಸೆಫ್, ಜಿ.ಓ. ಮಹಾಂತಪ್ಪ,ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ಜಿಲ್ಲಾಧ್ಯಕ್ಷ ರವಿಕುಮಾರ್, ಶ್ರೀನಿವಾಸ್, ಶಂಕರಾಚಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.