ಹಿರೀಸಾವೆ: ‘ಹೋಬಳಿಯ ಸೋರೆಕಾಯಿಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹರೀಶ್ ಪಾನಮತ್ತನಾಗಿ ಬರುತ್ತಿದ್ದು, ಆತನ ಪತ್ನಿ ಪೂರ್ಣಿಮಾ ತರಗತಿಯಲ್ಲಿ ಮಕ್ಕಳಿಗೆ ಥಳಿಸುತ್ತಿದ್ದಾರೆ’ ಎಂದು ಆರೋಪಿಸಿ ಪೋಷಕರು ಮತ್ತು ಗ್ರಾಮಸ್ಥರು ಸೋಮವಾರ ಶಾಲೆಯ ಎದುರು ಆಕ್ರೋಶ ವ್ಯಕ್ತಪಡಿಸಿದರು.

‘ಎರಡು ವರ್ಷದಿಂದ ಶಿಕ್ಷಕ ಹೀಗೆ ವರ್ತಿಸುತ್ತಿದ್ದು, ಆತನ ಜೊತೆಗೆ ಪತ್ನಿಯೂ ಬರುತ್ತಾರೆ’ ಎಂದು ಗ್ರಾಮಸ್ಥರು ಆರೋಪಿಸಿದರು.

ಮುಖ್ಯಶಿಕ್ಷಕಿ ಸವಿತಾ ಅವರು ಸೋಮವಾರ ಇಲಾಖೆಯ ತರಬೇತಿಗೆ ಹೋಗಿದ್ದ ವೇಳೆ ಶಿಕ್ಷಕನ ಪತ್ನಿ ತರಗತಿಗೆ ತೆರಳಿ ವಿದ್ಯಾರ್ಥಿನಿಯರನ್ನು ಥಳಿಸಿದ್ದಾರೆ ಎಂಬ ವಿಷಯ ತಿಳಿದ ಪೋಷಕರು ಮತ್ತು ಗ್ರಾಮಸ್ಥರು ಶಾಲೆಗೆ ಬಂದು ದಂಪತಿಯನ್ನು ತರಾಟೆಗೆ ತೆಗೆದುಕೊಂಡರು. ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ದೀಪಾ, ಬಿಆರ್ಸಿ ಅನಿಲ್, ಶಿಕ್ಷಣ ಸಂಯೋಜಕ ಶ್ರೀನಿವಾಸ್, ಸಿಆರ್ಪಿ ಪುಟ್ಟಸ್ವಾಮಿ, ಪೋಷಕರು, ಗ್ರಾಮಸ್ಥರಿಂದ ಲಿಖಿತ ದೂರು ಪಡೆದರು. ವಿದ್ಯಾರ್ಥಿಗಳಿಂದ ಪ್ರತ್ಯೇಕವಾಗಿ ಮಾಹಿತಿ ಪಡೆದರು.

‘ಶಿಕ್ಷಕನ ಪತ್ನಿ ಆಗಾಗ ಶಾಲೆಗೆ ಬಂದು ಪಾಠಗಳ ಬಗ್ಗೆ ಕೇಳಿ, ತೊಂದರೆ ಮಾಡುತ್ತಾರೆ’ ಎಂದು ವಿದ್ಯಾರ್ಥಿನಿಯೊಬ್ಬಳು ದೂರಿದಳು. ‘ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಸೇರಿ ಸರ್ಕಾರಿ ಶಾಲೆಗಳನ್ನು ಉಳಿಸುವ ಪ್ರಯತ್ನವನ್ನು ನಿತ್ಯ ಮಾಡುತ್ತಿದ್ದಾರೆ. ಆದರೆ ಈ ಶಿಕ್ಷಕ ನಮ್ಮೂರಿನ ಶಾಲೆಗೆ ಕೆಟ್ಟ ಹೆಸರು ತರುತ್ತಿದ್ದಾನೆ’ ಎಂದು ಎಸ್ಡಿಎಂಸಿ ಅಧ್ಯಕ್ಷ ಶ್ರೀನಿವಾಸ್, ಗ್ರಾಮದ ಚೇತನ್, ವೆಂಕಟೇಶ್ ದೂರಿದರು ಹೇಳಿದರು.

ಗ್ರಾಮಸ್ಥರು ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ಮಾಹಿತಿ ಪಡೆಯಲಾಗಿದೆ. ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು.
ಎಚ್.ಎನ್. ದೀಪಾ ಕ್ಷೇತ್ರ ಶಿಕ್ಷಣಾಧಿಕಾರಿ