ಮಂಗಳವಾರ, ಜನವರಿ 26, 2021
24 °C
ಗ್ರೀನ್‍ವುಡ್ ಆಂಗ್ಲ ಮಾಧ್ಯಮ ಶಾಲೆಯ ವಿರು‌ದ್ಧ ಪೋಷಕರ ಆಕ್ರೋಶ

ಆದೇಶ ಉಲ್ಲಂಘಿಸಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳೆನರಸೀಪುರ (ಹಾಸನ): ಪಟ್ಟಣದ ಹೌಸಿಂಗ್‌ ಬೋರ್ಡ್‌ ಕಾಲೊನಿಯಲ್ಲಿರುವ ಗ್ರೀನ್‌ವುಡ್‌ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅರ್ಧವಾರ್ಷಿಕ ಪರೀಕ್ಷೆ ನಡೆಸಲಾಗಿದ್ದು, ದ್ವಿತೀಯ ಅವಧಿಯ ಶುಲ್ಕ ಕಟ್ಟದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಬರೆಯಲು ಅವಕಾಶ ನೀಡದೇ ಹೊರಗೆ ನಿಲ್ಲಿಸಲಾಗಿತ್ತು ಎಂದು ತಿಳಿದುಬಂದಿದೆ.

'ಮೊದಲ ಕಂತಿನ ಹಣವನ್ನು ಪಾವತಿಸಿದ್ದೇವೆ. ಎರಡು ದಿನದಿಂದ ಪರೀಕ್ಷೆ ನಡೆಸಿ, ಇಂದು ಹೊರಗೆ ನಿಲ್ಲಿಸಿದ್ದಾರೆ. ಪರೀಕ್ಷೆ ಆರಂಭಿಸುವ ಮುನ್ನವೇ ತಿಳಿಸಿದ್ದರೆ ಹಣ ಕಟ್ಟುತ್ತಿದ್ದೆವು. ಆದರೆ, ಈ ಬಗ್ಗೆ ಒಂದು ಮೆಸೇಜ್ ಕೂಡ ಮಾಡಿಲ್ಲ. ಇನ್ನೊಂದು ವಾರದಲ್ಲಿ ಹಣ ಕಟ್ಟದೇ ಇದ್ದರೆ ಆನ್‍ಲೈನ್ ತರಗತಿಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದಾರೆ. ಆಡಳಿತ ಮಂಡಳಿಯ ಈ ರೀತಿಯ ವರ್ತನೆ ಸರಿಯಲ್ಲ’ ಎಂದು ಪೋಷಕರೊಬ್ಬರು ದೂರಿದರು.

ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರಿಂದ, ನಂತರ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಆಡಳಿತ ಮಂಡಳಿ ಸೂಚನೆ ಮೇರೆಗೆ ಪರೀಕ್ಷೆ ನಡೆಸಿದ್ದಾಗಿ ಶಾಲೆಯ ಮುಖ್ಯಶಿಕ್ಷಕಿ ಮಂಜುಳಾ ತಿಳಿಸಿದ್ದಾರೆ.

ಬಿಇಒ ಲೋಕೇಶ್ ಮಾತನಾಡಿ, ‘ಪರೀಕ್ಷೆ ನಡೆಸಲು ನಮ್ಮಿಂದ ಅನುಮತಿ ಪಡೆದಿಲ್ಲ. ಸರ್ಕಾರದ ಆದೇಶವನ್ನು ಕಡೆಗಣಿಸಿ, ಪರೀಕ್ಷೆ ನಡೆಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು