ಹಾಸನ: ಹಳಗನ್ನಡ, ನಡುಗನ್ನಡ, ಹೊಸಗನ್ನಡದ ಎಲ್ಲ ಕಾವ್ಯಗಳನ್ನು ಗಮಕ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಹಾಸನದಂತಹ ಪುಟ್ಟ ನಗರದಲ್ಲಿ 23 ವರ್ಷಗಳಿಂದ ಗಮಕ ಹಬ್ಬ ಕವಿನಮನ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಹಾಸನಕ್ಕೆ ಗಮಕ ಸಿಂಹಾಸನಪುರಿ ಎಂಬ ಹೆಸರಿನ್ನಿಟ್ಟರೆ ಹೆಚ್ಚು ಔಚಿತ್ಯಪೂರ್ಣವಾಗುತ್ತದೆ ಎಂದು ಕರ್ನಾಟಕ ಗಮಕ ಕಲಾಪರಿಷತ್ತಿನ ಸಲಹಾ ಸಮಿತಿ ಸದಸ್ಯೆ ಶಾಂತಾ ನಾಗಮಂಲ ತಿಳಿಸಿದರು.

ಕರ್ನಾಟಕ ಗಮಕ ಕಲಾ ಪರಿಷತ್ ಜಿಲ್ಲಾ ಘಟಕ, ಸಂಸ್ಕಾರ ಭಾರತೀ ಕರ್ನಾಟಕ ಜಿಲ್ಲಾ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸೀತಾರಾಮಾಂಜನೇಯ ಸೇವಾ ಸಮಿತಿ ಹಾಗೂ ಹಾಸನ ನಗರ ಗೃಹ ನಿರ್ಮಾಣ ಸಹಕಾರಿ ಸಂಘಗಳ ಆಶ್ರಯದಲ್ಲಿ ಈಚೆಗೆ ನಡೆದ ಗಮಕ ಹಬ್ಬ ಕವಿನಮನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ವೈದ್ಯಕೀಯ ಕ್ಷೇತ್ರದಲ್ಲಿದ್ದು ಸಮಾಜಸೇವೆ ಮಾಡುತ್ತಿರುವ ಶಸ್ತ್ರಚಿಕಿತ್ಸಕ ಡಾ.ಎನ್. ರಮೇಶ್ ಅವರಿಗೆ ‘ಸಮಾಜಸೇವಿ ರಾಷ್ಟ್ರಕ’, ಗಮಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ತುಮಕೂರಿನ ಲಕ್ಷ್ಮೀಜಯಪ್ರಕಾಶ್ ಅವರಿಗೆ ‘ಉಭಯಕಲಾಪ್ರಪೂರ್ಣೆ’, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೊಗಲುಗೊಂಬೆ ಕಲಾವಿದ ಗುಂಡೂರಾಜ್ ಅವರಿಗೆ ‘ಜಾನಪದ ಕಲಾಭೂಷಣ’ ಬಿರುದುಗಳನ್ನು ನೀಡಿ ಸನ್ಮಾನಿಸಲಾಯಿತು.

ಪರಿಷತ್ತಿನ ಜಿಲ್ಲಾ ಘಟಕದ ಉಪಾಧ್ಯಕ್ಷೆ ರುಕ್ಮಿಣಿ ನಾಗೇಂದ್ರ, ಗಮಕ ಹಬ್ಬ ಕವಿನಮನ ಕಾರ್ಯಕ್ರಮ ನಡೆದು ಬಂದ ದಾರಿಯನ್ನು ತಿಳಿಸಿದರು.

ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ್ ಉಡುಪ ಮಾತನಾಡಿ, ಗಮಕ ಹಬ್ಬಕ್ಕೆ ಏಳು ದಿನಗಳ ಕಾಲ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಹಕರಿಸಿದ ಹಾಗೂ ಪ್ರಾಯೋಜನೆಯನ್ನು ನೀಡಿದ ಗಮಕಕಲಾ ಪೋಷಕರನ್ನು ಸ್ಮರಿಸಿದರು.

ಶ್ರೀರಂಜಿನಿ ಹರೀಶ್ ಆಚಾರ್ಯ ಪ್ರಾರ್ಥಿಸಿದರು. ಪ್ರೊ.ಜಿ ಎನ್ ಅನಸೂಯ ಸ್ವಾಗತಿಸಿದರು. ರಂಗಭೂಮಿ ಕಲಾವಿದೆ ಪೂಜಾ ರಘುನಂದನ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.