ಭಾನುವಾರ, ಏಪ್ರಿಲ್ 18, 2021
33 °C
ರಾಮನಾಥಪುರ ಹೋಬಳಿಯ ಕಾಳೇನಹಳ್ಳಿಯಲ್ಲಿ ಗೌರಮ್ಮನ ವಿಸರ್ಜನೆಯನ್ನು ತೆಪ್ಪೋತ್ಸವದೊಂದಿಗೆ ನೆರವೇರಿಸಲಾಯಿತು.

ಗೌರಮ್ಮ ದೇವಿಗೆ ತೆಪ್ಪೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಾಥಪುರ (ಕೊಣನೂರು): ಹೋಬಳಿಯ ಕಾಳೇನಹಳ್ಳಿಯಲ್ಲಿ ಗೌರಮ್ಮನ ವಿಸರ್ಜನೆಯನ್ನು ತೆಪ್ಪೋತ್ಸವದೊಂದಿಗೆ ನೆರವೇರಿಸಲಾಯಿತು.

ಪ್ರತಿವರ್ಷ ಸ್ವರ್ಣ ಗೌರಿ ವ್ರತದ ದಿನದಿಂದು ಸಮೀಪದ ಬಸವನಹಳ್ಳಿಯ ಕಾವೇರಿನದಿ ದಂಡೆಯಲ್ಲಿರುವ ಈಶ್ವರ ದೇವಾಲಯದಲ್ಲಿ ತಯಾರಿಸಿದ ಗೌರಮ್ಮನ ಮೂರ್ತಿಯನ್ನು ಮೆರವಣಿಗೆಯ ಮೂಲಕ ಕಾಳೇನಹಳ್ಳಿಗೆ ತಂದು ಪ್ರತಿಷ್ಠಾಪಿಸಿ ತಿಂಗಳ ಕಾಲ ಪೂಜಿಸಿ ಮಹಾಲಯ ಅಮವಾಸ್ಯೆಯಂದು ವಿಸರ್ಜಿಸಲಾಗುತ್ತಿತ್ತು.

ಈ ವರ್ಷ ಕೊರೊನಾ ಲಾಕ್‌ಡೌನ್ ಕಾರಣದಿಂದ ಗೌರಿಹಬ್ಬ ಕಳೆದು 13 ದಿನಗಳ ನಂತರ ಕಾಳೇನಹಳ್ಳಿಯ ಗೌರಮ್ಮ ದೇವಿಯ ದೇವಾಲಯದಲ್ಲಿ ಮೂರ್ತಿ ತಯಾರಿಸಿ, ಪ್ರತಿಷ್ಠಾಪಿಸಿ ಗುರುವಾರ ವಿಸರ್ಜಿಸಲಾಯಿತು.

ಗುರುವಾರ ಬೆಳಿಗ್ಗೆ ಅಡ್ಡಪಲ್ಲಕ್ಕಿಯ ಮೇಲೆ ಗ್ರಾಮ ದೇವತೆ ದಿಡ್ಡಮ್ಮ ದೇವಿಯ ಉತ್ಸವ ಮೂರ್ತಿ ಮತ್ತು ಗೌರಮ್ಮ ದೇವಿಯರ ಮೂರ್ತಿಯ ಉತ್ಸವ ನಡೆಸಿ ಗ್ರಾಮದ ದೊಡ್ಡಕೆರೆಯಲ್ಲಿ ತೆಪ್ಪೋತ್ಸವವನ್ನು ಮಾಡಿ ವಿಸರ್ಜಿಸಲಾಯಿತು. ಗ್ರಾಮಸ್ಥರು, ಮಹಿಳೆಯರು ಮತ್ತು ಮಕ್ಕಳು ವಿಸರ್ಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.