ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಹಾಸನ | ದಿಕ್ಕಿಗೊಂದು ಸರ್ಕಾರಿ ಕಚೇರಿ: ತಪ್ಪದ ಜನರ ಅಲೆದಾಟ

Published : 18 ಡಿಸೆಂಬರ್ 2023, 6:34 IST
Last Updated : 18 ಡಿಸೆಂಬರ್ 2023, 6:34 IST
ಫಾಲೋ ಮಾಡಿ
Comments
ಹೊಳೆನರಸೀಪುರದ ಭೂದಾಖಲೆಗಳ ಇಲಾಖೆಯಲ್ಲಿ ಸರ್ವೇಯರ್‌ಗಳೂ ಕುಳಿತುಕೊಳ್ಳಲು ಜಾಗದ ಕೊರತೆ ಇದೆ
ಹೊಳೆನರಸೀಪುರದ ಭೂದಾಖಲೆಗಳ ಇಲಾಖೆಯಲ್ಲಿ ಸರ್ವೇಯರ್‌ಗಳೂ ಕುಳಿತುಕೊಳ್ಳಲು ಜಾಗದ ಕೊರತೆ ಇದೆ
ಹಿರೀಸಾವೆಯ ನಾಡಕಚೇರಿ
ಹಿರೀಸಾವೆಯ ನಾಡಕಚೇರಿ
ಶಿಥಿಲಾವಸ್ಥೆಯಲ್ಲಿರುವ ಹಳೇಬೀಡಿನ ನಾಡಕಚೇರಿ ಕಟ್ಟಡ
ಶಿಥಿಲಾವಸ್ಥೆಯಲ್ಲಿರುವ ಹಳೇಬೀಡಿನ ನಾಡಕಚೇರಿ ಕಟ್ಟಡ
ಹಾಸನದ ನಗರಸಭೆ ಆವರಣದ ಮಧ್ಯದಲ್ಲಿಯೇ ವಾಹನಗಳ ಪಾರ್ಕಿಂಗ್‌ ಮಾಡಲಾಗುತ್ತಿದೆ
ಹಾಸನದ ನಗರಸಭೆ ಆವರಣದ ಮಧ್ಯದಲ್ಲಿಯೇ ವಾಹನಗಳ ಪಾರ್ಕಿಂಗ್‌ ಮಾಡಲಾಗುತ್ತಿದೆ
ಹಾಸನದಲ್ಲಿ ಇರುವ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಶಿಥಿಲವಾಗಿದೆ
ಹಾಸನದಲ್ಲಿ ಇರುವ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಶಿಥಿಲವಾಗಿದೆ
ಹಾಸನ ತಾಲ್ಲೂಕು ಪಂಚಾಯಿತಿ ಕಚೇರಿಗೆ ಭೇಟಿ ನೀಡಲು ಮೆಟ್ಟಿಲು ಹತ್ತಬೇಕಿದೆ
ಹಾಸನ ತಾಲ್ಲೂಕು ಪಂಚಾಯಿತಿ ಕಚೇರಿಗೆ ಭೇಟಿ ನೀಡಲು ಮೆಟ್ಟಿಲು ಹತ್ತಬೇಕಿದೆ
ಚನ್ನರಾಯಪಟ್ಟಣ ತಾಲ್ಲೂಕು ಕಚೇರಿಯಲ್ಲಿ ರ‍್ಯಾಂಪ್‌ ಅಳವಡಿಸಲಾಗಿದೆ
ಚನ್ನರಾಯಪಟ್ಟಣ ತಾಲ್ಲೂಕು ಕಚೇರಿಯಲ್ಲಿ ರ‍್ಯಾಂಪ್‌ ಅಳವಡಿಸಲಾಗಿದೆ
ಶೌಚಾಲಯ ನಿರ್ಮಾಣ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬರುವ ಸಾರ್ವಜನಿಕರಿಗಾಗಿ ಮಂದಿನ ದಿನಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗುವುದು. ಹರೀಶ್ ಪಿಎಸಿಸಿ ಸಿಇಒ ಹಿರೀಸಾವೆ ಒಂದೇ ಸೂರಿನಡಿ ಕಂದಾಯ ಇಲಾಖೆ ವೇತನಗಳ ಮಂಜೂರಾತಿ ದೃಢೀಕರಣ ವಿತರಣೆ ಜಮೀನು ದಾಖಲೆಯ ಕೆಲಸ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಕಂದಾಯ ಇಲಾಖೆ ಪ್ರಮುಖ ಪಾತ್ರವಹಿಸಬೇಕು. ಕಂದಾಯ ನೌಕರರು ಒಂದೇ ಸೂರಿನಡಿ ಸಿಗುವಂತಾಗಬೇಕು.
ಶಿವಶಂಕರಪ್ಪ ರೈತ ರಾಜಗೆರೆ ಹಳೇಬೀಡು
ನೀರಿಗೆ ತೊಂದರೆ ಆಗದಂತೆ ಕ್ರಮ ನಾನು ಬಂದ ಕೂಡಲೇ ಕಚೇರಿಯ ಟ್ಯಾಂಕ್‌ಗಳಿಗೆ ನೀರು ತುಂಬಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ. ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದೇವೆ ಲೋಕೇಶ್ ಪ್ರಭಾರ ಗ್ರೇಡ್‌ 2 ತಹಶೀಲ್ದಾರ್ ಹೊಳೆನರಸೀಪುರ ಮೇಲಧಿಕಾರಿಗಳಿಗೆ ಮಾಹಿತಿ ನಮ್ಮ ಸರ್ವೇಯರ್‌ಗಳು ಕುಳಿತುಕೊಳ್ಳಲು ಅಗತ್ಯಕ್ಕೆ ತಕ್ಕಷ್ಟು ಸ್ಥಳಾವಕಾಶ ಹಾಗೂ ಪೀಠೋಕರಣಗಳ ಅವಶ್ಯಕತೆ ಇದೆ ಎಂಬುದನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದೇವೆ.
ಪರಶಿವನಾಯಕ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಹೊಳೆನರಸೀಪುರ
ಒಂದೇ ಶೌಚಾಲಯ ನಮಗಿರುವ ಸ್ಥಳಾವಕಾಶದಲ್ಲಿ ಒಂದು ಶೌಚಾಲಯದ ವ್ಯವಸ್ಥೆ ಕಲ್ಪಿಸಿದ್ದೇವೆ. ಅಗತ್ಯ ಇದ್ದಾಗ ತಾಲ್ಲೂಕು ಕಚೇರಿಯ ಶೌಚಾಲಯ ಬಳಸುತ್ತಾರೆ. ದಿವಾಕರ್ ನೋಂದಣಾಧಿಕಾರಿ ಬಳಕೆಗೆ ಅವಕಾಶ ಬೇಕು ಮಿನಿ ವಿಧಾನಸೌಧ ಕಾಂಪೌಂಡ್‍ಗೆ ಅಂಟಿಕೊಂಡಂತೆ ಸಾರ್ವಜನಿಕ ಶೌಚಾಲಯವಿದೆ. ಹಣ ಪಾವತಿಸಿ ಬಳಸಲು ಅವಕಾಶವಿದೆ. ವಿಧಾನಸೌಧ ಕಾಂಪೌಂಡ್ ಕಡೆಯಿಂದಲೂ ಗೇಟ್ ಅಳವಡಿಸಿದರೆ ಕಚೇರಿ ಸಿಬ್ಬಂದಿ ಮತ್ತು ಸಾರ್ವಜನಿಕರು ಬಳಸಲು ಅವಕಾಶವಾಗುತ್ತದೆ. ನಾರಾಯಣ ಆಲೂರು ನಾಗರಿಕ ಕಾಲಮಿತಿಯಲ್ಲಿ ಕಡತ ವಿಲೇವಾರಿ ತಾಲ್ಲೂಕು ಕಚೇರಿಯಲ್ಲಿ ಇ-ಕಚೇರಿ ಆರಂಭಿಸಲಾಗಿದ್ದು ಕಡತಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಎಲ್ಲಾ ಕೇಸ್ ವರ್ಕರ್‌ಗಳಿಗೆ ಕಂಪ್ಯೂಟರ್ ನೀಡಲಾಗಿದೆ.
ಬಿ.ಎಂ. ಗೋವಿಂದರಾಜು ಚನ್ನರಾಯಪಟ್ಟಣ ತಹಶೀಲ್ದಾರ್
ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆ ತಾಲ್ಲೂಕು ಕಚೇರಿಯಲ್ಲಿ ರ‍್ಯಾಂಪ್‌ ಹಾಗೂ ಲಿಫ್ಟ್ ಸೌಲಭ್ಯ ಇದೆ. ಕುಡಿಯುವ ನೀರಿನ ಸೌಲಭ್ಯವಿದ್ದು ಅದನ್ನು ದುರಸ್ತಿ ಮಾಡಬೇಕಿದೆ. ಅಂಗವಿಕಲರಿಗೆ ದಾಖಲೆಗಳನ್ನು ಪಡೆಯಲು ಪ್ರತ್ಯೇಕ ಸರದಿ ವ್ಯವಸ್ಥೆ ಒದಗಿಸಬೇಕಿದೆ.
ಸಿ.ಜಿ. ಸೋಮಶೇಖರ್ ಚನ್ನರಾಯಪಟ್ಟಣ
ಶೌಚಾಲಯ ಇಲ್ಲದ ಮಿನಿ ವಿಧಾನಸೌಧ
ಆಲೂರು ತಾಲ್ಲೂಕಿನಲ್ಲಿರುವ ಸರ್ಕಾರಿ ಕಚೇರಿಗಳಲ್ಲಿ ಅಂಗವಿಕಲರಿಗಾಗಿ ರ‍್ಯಾಂಪ್‌ ನಿರ್ಮಾಣ ಮಾಡಲಾಗಿದೆ. ಕುಡಿಯುವ ನೀರು ಶೌಚಾಲಯ ವ್ಯವಸ್ಥೆ ಪರವಾಗಿಲ್ಲ. ಆದರೆ ಮಿನಿ ವಿಧಾನಸೌಧದಲ್ಲಿ ಶೌಚಾಲಯವಿದ್ದರೂ ಬಳಕೆಗೆ ಬಾರದಾಗಿದೆ. ಪೈಪ್‌ಗಳು ಒಡೆದು ನೀರು ಸರಬರಾಜು ಇಲ್ಲದೇ ದುರ್ವಾಸನೆ ಬೀರುತ್ತಿರುವುದರಿಂದ ಶೌಚಾಲಯ ಮುಚ್ಚಲಾಗಿದೆ. ಕಚೇರಿಯಲ್ಲಿ ಕೆಲಸ ಮಾಡುವ ಮಹಿಳಾ ನೌಕರರ ಪಾಡು ಹೇಳತೀರದಾಗಿದೆ. ಸಮೀಪದ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿರುವ ಶೌಚಾಲಯ ಬಳಸುತ್ತಿದ್ದಾರೆ. ಅಲ್ಲಿಗೆ ಹೋಗಿ ಬರಲು ಕನಿಷ್ಠ 20 ನಿಮಿಷ ಸಮಯ ವ್ಯರ್ಥವಾಗುತ್ತಿದೆ. ಕಂದಾಯ ಪೊಲೀಸ್ ಶಿಕ್ಷಣ ಸೆಸ್ಕ್ ಇತರೆ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸ್ವೀಕರಿಸಿದ ಅರ್ಜಿಗಳನ್ನು ಒಂದು ವಾರದಲ್ಲಿ ಪರಿಶೀಲಿಸಿ ಮುಂದಿನ ಕ್ರಮಕ್ಕಾಗಿ ಸಂಬಂಧಿಸಿದ ವಿಭಾಗ ಅಥವಾ ಕಚೇರಿಗೆ ಕಳುಹಿಸಲಾಗುತ್ತದೆ. ಕೆಲ ಸಂದರ್ಭದಲ್ಲಿ ಅರ್ಹ ದಾಖಲಾತಿಗಳು ಸಕಾಲಕ್ಕೆ ದೊರಕದೇ ವಿಳಂಬವಾಗಬಹುದು ಎನ್ನುತ್ತಾರೆ ಕಚೇರಿ ಸಿಬ್ಬಂದಿ. ದಾಖಲೆಗಾಗಿ ನಿತ್ಯ ಅಲೆದಾಟ ನಗರಸಭೆ ಕಾರ್ಯಾಲಯದಲ್ಲಿ ಜನರಿಗೆ ಸಮಯಕ್ಕೆ ಸರಿಯಾಗಿ ಅಗತ್ಯ ದಾಖಲೆ ಒದಗಿಸುವಲ್ಲಿ ಮತ್ತು ತೆರಿಗೆ ಪಾವತಿ ಮಾಹಿತಿ ಖಾತೆ ಬದಲಾವಣೆ ಸೇರಿದಂತೆ ಇನ್ನಿತರ ಸೌಲಭ್ಯ ಪಡೆಯಲು ನಿತ್ಯ ಅಲೆದಾಡುವ ಪರಿಸ್ಥಿತಿ ಎದುರಾಗಿದೆ ಎಂದು ನಾಗರಿಕ ಪರಮೇಶ್ವರಪ್ಪ ಆರೋಪಿಸಿದ್ದಾರೆ. ಮೂರು ತಿಂಗಳ ಹಿಂದೆ ಕಡತ ನೀಡಿದ್ದು ಇಲ್ಲಿನ ಸಿಬ್ಬಂದಿ ಕಡತ ಕಾಣುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಕೆಲಸವಾಗದಿದ್ದರೆ ಪದೇ ಪದೇ ಕಚೇರಿಗೆ ಅಲೆಯುವ ಪರಿಸ್ಥಿತಿ ಇದ್ದು ಈ ವಯಸ್ಸಿನಲ್ಲಿ ಕಚೇರಿ ಅಲೆಯುವ ಪರದಾಟ ನಮ್ಮದಾಗಿದೆ ಎಂದು ಬಹುತೇಕ ನಾಗರಿಕರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT