ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಮತಘಟ್ಟ ಗ್ರಾಮದಲ್ಲಿ ಮನೆಯ ಬೀಗ ಮುರಿದು ₹6 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹4.50 ಲಕ್ಷ ನಗದು ಕಳವು ಮಾಡಲಾಗಿದೆ.

ಗ್ರಾಮದ ಸುಜಾತಾ ಅವರು ಮನೆಗೆ ಬೀಗ ಹಾಕಿಕೊಂಡು ಮೇ 1 ರಂದು ಚನ್ನರಾಯಪಟ್ಟಣದ ಮಗಳ ಮನೆಗೆ ತೆರಳಿದ್ದರು. ಅನಾರೋಗ್ಯದಿಂದಾಗಿ ಅಲ್ಲಿಯೇ ಉಳಿದಿದ್ದರು. ಮೇ 5 ರಂದು ಗ್ರಾಮಕ್ಕೆ ಬಂದು ನೋಡಿದಾಗ, ಮನೆಯ ಡೋರ್ ಲಾಕ್ ಮತ್ತು ಬಾಗಿಲಿಗೆ ಹಾಕಿದ್ದ ಬೀಗ ಮುರಿದಿತ್ತು.

ರೂಮ್ನ ಮೂರು ಬೀರುಗಳಲ್ಲಿ ಇಟ್ಟಿದ್ದ ಒಟ್ಟು ₹4.50 ನಗದು, 50 ಗ್ರಾಂನ ಚಿನ್ನದ ಲಾಂಗ್ ಸರ, 20 ಗ್ರಾಂನ ಚಿನ್ನದ 4 ಬಳೆಗಳು, 25 ಗ್ರಾಂನ ಚಿನ್ನದ ನೆಕ್ಲೆಸ್, 10 ಗ್ರಾಂನ ಎರಡು ಜೊತೆ ಚಿನ್ನದ ಓಲೆಗಳು, 25 ಗ್ರಾಂನ ಚಿನ್ನದ ಓಲೆ ಜುಮುಕಿ, 10 ಗ್ರಾಂನ ಎರಡು ಚಿನ್ನದ ಉಂಗುರ ಸೇರಿದಂತೆ ₹6 ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿವೆ. ಹಿರಿಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.