ಆಲೂರು: ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಕಸಬಾ ಮರಸು ಗ್ರಾಮದ ತಿರುಮಲ ರಂಗನಾಥಸ್ವಾಮಿ ಮತ್ತು ಗ್ರಾಮ ದೇವತೆ ಉಡಿಸಲಮ್ಮ ದೇವಿಯ ಜಾತ್ರೆ ಆರಂಭಗೊಂಡಿತು.

ದೇವಸ್ಥಾನದಲ್ಲಿ ವಿವಿಧ ಪೂಜೆ, ಹೋಮ ಹವನಗಳು ಜರುಗಿದವು. ಭಾನುವಾರ ಸಂಜೆ ಗ್ರಾಮದ ದೊಡ್ಡಕೆರೆ ಗಂಗಾಸ್ಥಾನದಲ್ಲಿ ರಂಗನಾಥಸ್ವಾಮಿ ಮತ್ತು ಉಡುಸಲಮ್ಮ ಅಡ್ಡೆ ದೇವರ ಸಮ್ಮುಖದಲ್ಲಿ ಗಂಗಾಪೂಜೆ, ಮಹಾಗಣಪತಿ ಪೂಜೆಯೊಂದಿಗೆ ವಾಸುದೇವ ಪುಣ್ಯಾಹ ರಕ್ಷಾಬಂಧನ, ವಾಸ್ತುಶಾಂತಿ, ವಿಶ್ವಕ್ಷೇವ ಹೋಮ, ಇಂದ್ರಾದಿ ದಿಕ್ಷಾಪಕ ಹೋಮ, ಸಪರಿವಾರಹೋಮ, ಲಘು ಪೂರ್ಣಾಹುತಿ ನಂತರ ಮಹಾ ಮಂಗಳಾರತಿ ನೆರವೇರಿತು.

ಸೋಮವಾರ ಬೆಳಿಗ್ಗೆ ಪ್ರಾಯಶ್ಚಿತ ಹೋಮದ ಅಂಗವಾಗಿ ಪುಣ್ಯಾಹ ಕಲಸಾರಾಧನೆ, ಕುಂಭ, ಉಪಯಿಂಭ ಮಹಾಕುಂಭಾರಾದನೆ, ಯಾಗಶಾನೆಲೆ ಪ್ರವೇಶ, ನವಗ್ರಹ ಹೋಮ, ಮೃತ್ಯುಂಜಯ ಕ್ಷೇತ್ರಪಾಲಕ, ಬ್ರಹ, ವಿಷ್ಣು, ಮಹೇಶ್ವರ ಸಪರಿವಾರ ಹೋಮ, ಮೂಲಮೂರ್ತಿ ಹೋಮ, ಮಹಾ ಪೂರ್ಣಾಹುತಿ ಕುಭೋದ್ವಾಸನ ಪಂಚಾಮೃತ ಅಭಿಷೇಕ, ಅಲಂಕಾರ ನೈವೇದ್ಯ, ಅಷ್ಠಾವದಾನಸೇವೆ, ಅಷ್ಠೋತ್ತರ ಮಹಾಮಂಗಳಾರತಿ ನಡೆಯಿತು.

ಗ್ರಾಮಸ್ಥರ ಮನವಿ ಮೇರೆಗೆ ಸರ್ಕಾರದ ನಿರ್ದೇಶನದಂತೆ ಮಜರಾಯಿ, ಧಾರ್ಮಿಕ ದತ್ತಿ ಇಲಾಖೆ ಆಗಮ ಪಂಡಿತರಾದ ಜಿ.ಎ. ವಿಜಯಕುಮಾರ್ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕರಾದ ಎಂ.ಎಸ್. ಹರಿಪ್ರಸಾದ್ ಮತ್ತು ತಂಡದವರು ಭಾನುವಾರ ಸಂಜೆಯಿಂದ ರಂಗನಾಥಸ್ವಾಮಿ ದೇವಾಲಯದಲ್ಲಿ ವಿವಿಧ ಪೂಜೆ ಹೋಮ ನೆರವೇರಿಸಿದರು.

108 ಕಳಸಗಳಿಗೆ ದೇವತೆಗಳನ್ನು ಆಹ್ವಾನ ಮಾಡಿ, ಶಾಂತಿ ಹೋಮ, ಕಲಾವೃದ್ಧಿ ಹೋಮ, ವಿಶೇಷವಾಗಿ ರಂಗನಾಥಸ್ವಾಮಿ ದೇವರ ತೇಜಬಲೋವೃದ್ಧಿಗಾಗಿ ಪ್ರಾಯಶ್ಚಿತ್ತ ಹೋಮ ನಡೆಯಿತು. ಗ್ರಾಮಸ್ಥರು ಪೂಜೆಯಲ್ಲಿ ಭಾಗಿಯಾಗಿ ಪೂರ್ಣಹುತಿ ಪೂಜೆ ನೆರವೇರಿಸಿದರು. ಕಳಸಗಳನ್ನು ಹೊತ್ತ ಮಹಿಳೆಯರು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಮಾಡಿ ಕಳಸ ವಿಸರ್ಜಿಸಿದರು.

ತಹಶೀಲ್ದಾರ್ ಮಲ್ಲಿಕಾರ್ಜುನ್, ಪೊಲೀಸ್ ಇನ್ಸ್ಪೆಕ್ಟರ್ ಮೋಹನರೆಡ್ಡಿ, ಕಸಬಾ ರಾಜಸ್ವನಿರೀಕ್ಷಕ ಜ್ಞಾನೇಂದ್ರ, ಗ್ರಾಮ ಆಡಳಿತಾಧಿಕಾರಿ ರವಿನಾಯಕ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪಟ್ಟಣ ಪಂಚಾಯಿತಿ ಸದಸ್ಯರಾದ ಧರ್ಮ, ನಿಂಗರಾಜು(ಅಪ್ಪು), ಧರ್ಮದರ್ಶಿ ಎಂ.ಪಿ.ಕುಮಾರ್, ವಿನಯಪ್ರಸಾದ್, ರಾಜಶೇಖರ್, ದೇವಾಲಯದ ಪ್ರಧಾನ ಅರ್ಚಕರಾದ ರವಿಕುಮಾರ್, ಉಡುಸಲಮ್ಮ ದೇವಿ ಅರ್ಚಕರಾದ ವೀರೇಶ್ ಸೇರಿದಂತೆ ನೂರಾರು ಗ್ರಾಮಸ್ಥರು ಪೂಜೆಯಲ್ಲಿ ಭಾಗವಹಿಸಿದ್ದರು.

ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಜಾತ್ರೆ ಭಾನುವಾರ ಸಂಜೆಯಿಂದಲೇ ಪೂಜೆ ಪ್ರಧಾನ ಅರ್ಚಕ ಹರಿಪ್ರಸಾದ್ ತಂಡದವರಿಂದ ಪೂಜೆ

ಸರ್ಕಾರದ ನಿರ್ದೇಶನದಂತೆ ಪೂಜೆ ಕಾರ್ಯಗಳು ಜರುಗಿವೆ. ಗ್ರಾಮಸ್ಥರು ಒಗ್ಗೂಡಿ ದೇವಸ್ಥಾನದ ಅಭಿವೃದ್ಧಿಯೊಂದಿಗೆ ಉತ್ಸವಗಳು ನಿರಂತರವಾಗಿ ನಡೆಯಲಿ
ಮಲ್ಲಿಕಾರ್ಜುನ ತಹಶೀಲ್ದಾರ್ ಆಲೂರು ತಾಲ್ಲೂಕು

ಆಗಮ ಶಾಸ್ತ್ರದಲ್ಲಿ ಇರುವಂತೆ ಯಾವುದೆ ರಥೋತ್ಸವ ಉತ್ಸವಾದಿ ಆಚರಣೆಗಳು ಅನೇಕ ದಿನಗಳಿಂದ ನಿಂತು ಹೋಗಿದ್ದರೆ ಪ್ರಾಯಶ್ಚಿತ್ತವಾಗಿ ಸಂಪ್ರೋಕ್ಷಣ ಕಾರ್ಯಕ್ರಮವೆಂದು ಪರಿಗಣಿಸಿ ಮಾಡಬೇಕು
ಎಂ.ಎಸ್.ಹರಿಪ್ರಸಾದ್ ಪ್ರಧಾನ ಅರ್ಚಕ

ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಜಾತ್ರೆಯನ್ನು ಈಗ ಗ್ರಾಮಸ್ಥರೆಲ್ಲ ಸೇರಿ ಸಂಬಂಧಿಸಿದ ಪ್ರಾಯಶ್ಚಿತ್ತ ಹೋಮ ನೆರವೇರಿಸಿದ್ದೇವೆ
ವಿನಯ್ ರಾಜಶೇಖರ್ ಮರಸು ಗ್ರಾಮಸ್ಥರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.