ಹಾಸನ: ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿದ್ದು, ಎಲ್ಲೆಡೆಯೂ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ಕೆಲ ತಾಲ್ಲೂಕುಗಳಲ್ಲಿ ರೈತರು ಬಿತ್ತನೆ ಮುಗಿಸಿದ್ದು, ಅರಸೀಕೆರೆ, ಚನ್ನರಾಯಪಟ್ಟಣ ತಾಲ್ಲೂಕುಗಳಲ್ಲಿ ರಾಗಿ ಬಿತ್ತನೆ ಕಾರ್ಯವೂ ಚುರುಕಿನಿಂದ ಸಾಗಿದೆ.

ಈ ಮಧ್ಯೆ ಜಿಲ್ಲೆಯಲ್ಲಿ ಬೇಡಿಕೆಗಿಂತ ಅಧಿಕ ಪ್ರಮಾಣದ ರಸಗೊಬ್ಬರ ಲಭ್ಯವಾಗಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ. ಬೇಡಿಕೆಗೆ ಅನುಗುಣವಾಗಿ ಜಿಲ್ಲೆಗೆ ರಸಗೊಬ್ಬರ ತರಿಸಲಾಗುತ್ತಿದ್ದು, ಅದೇ ಪ್ರಮಾಣದಲ್ಲಿ ರೈತರಿಗೆ ವಿತರಣೆ ಮಾಡಲಾಗುತ್ತಿದೆ. ಜೊತೆಗೆ ಸದ್ಯಕ್ಕೆ ಅಗತ್ಯವಿರುವಷ್ಟು ರಸಗೊಬ್ಬರವನ್ನು ದಾಸ್ತಾನು ಮಾಡಲಾಗಿದೆ.

ಜಿಲ್ಲೆಯಲ್ಲಿ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ ಒಟ್ಟು 1,38,683 ಟನ್ ರಸಗೊಬ್ಬರದ ಬೇಡಿಕೆ ಇದೆ. ಇದರಲ್ಲಿ ಜೂನ್ ತಿಂಗಳಲ್ಲಿ 64,524 ಟನ್, ಜುಲೈನಲ್ಲಿ 25,400 ಟನ್ ರಸಗೊಬ್ಬರದ ಬೇಡಿಕೆ ಇದೆ. ಈ ಪೈಕಿ ಈಗಾಗಲೇ 1,50,724 ಟನ್ ರಸಗೊಬ್ಬರ ಜಿಲ್ಲೆಗೆ ಪೂರೈಕೆಯಾಗಿದ್ದು, 1,07,708 ಟನ್ ಗೊಬ್ಬರವನ್ನು ರೈತರಿಗೆ ವಿತರಣೆ ಮಾಡಲಾಗಿದೆ. ಮಾರಾಟಗಾರರು, ಕೆಎಸ್ಸಿಎಂಎಫ್ ಹಾಗೂ ಕೆಎಸ್ಎಸ್ಸಿಯ ಬಳಿ ಒಟ್ಟು 43,589 ಟನ್ ರಸಗೊಬ್ಬರ ದಾಸ್ತಾನಿದೆ. ಈ ಪೈಕಿ ಮಾರಾಟಗಾರರ ಬಳಿಯೇ 43,016 ಟನ್ ಗೊಬ್ಬರ ಲಭ್ಯವಾಗಿದೆ.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 2,42,955 ಹೆಕ್ಟೇರ್ನಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, 1,13,456 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣವಾಗಿದೆ. ಶೇ 46.70 ರಷ್ಟು ಬಿತ್ತನೆ ಪೂರ್ಣಗೊಂಡಿದ್ದು, ಮುಂದಿನ ಕೃಷಿ ಚಟುವಟಿಕೆಗೆ ಅಗತ್ಯವಿರುವ ರಸಗೊಬ್ಬರವನ್ನು ದಾಸ್ತಾನು ಮಾಡಲಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಕೃತಕ ಅಭಾವ ಸೃಷ್ಟಿಸಿದರೆ ಕ್ರಮ: ‘ಬೇರೆ ಜಿಲ್ಲೆಗಳಲ್ಲಿ ಯೂರಿಯಾ ಕೊರತೆ ಉಂಟಾಗಿದ್ದು, ಜಿಲ್ಲೆಯಲ್ಲಿ ಕೃತಕ ಅಭಾವ ಸೃಷ್ಟಿಸಿದರೆ, ಅಂಥವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್ಕುಮಾರ್ ತಿಳಿಸಿದ್ದಾರೆ.

‘ರೈತರಿಗೆ ಅಗತ್ಯದಷ್ಟು ಗೊಬ್ಬರ ಪೂರೈಕೆ ಮಾಡಬೇಕು. ರೈತರು ಪರದಾಡುವ ಸನ್ನಿವೇಶ ಸೃಷ್ಟಿ ಆಗಬಾರದು. ಜಿಲ್ಲೆಯಲ್ಲಿ ಗೊಬ್ಬರದ ಕೊರತೆ ಇಲ್ಲ. ಕೃತಕ ಅಭಾವದ ಮೂಲಕ ಗೊಂದಲ ಸೃಷ್ಟಿಸಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದ್ದಾರೆ.

ನಾಲೆಗೆ ನೀರು

ಜಿಲ್ಲೆಯ ಹೇಮಾವತಿ ವಾಟೆಹೊಳೆ ಯಗಚಿ ಜಲಾಶಯಗಳು ಭರ್ತಿಯಾಗಿದ್ದು ಜಲಾಶಯಗಳ ನೀರನ್ನು ಕಾಲುವೆಯ ಮೂಲಕ ಹರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಜು.16 ರಿಂದ ನ.30 ರವರೆಗೆ ಹೇಮಾವತಿ ಎಡದಂಡ ನಾಲೆ ಹಾಗೂ ನದಿ ಅಣೆಕಟ್ಟು ನಾಲೆಗಳಾದ ಶ್ರೀರಾಮದೇವರ ಉತ್ತರ ನಾಲೆ ಹೇಮಗಿರಿ ನಾಲೆ ಅಕ್ಕಿಹೆಬ್ಬಾಳು ನಾಲೆ ಮಂದಗೆರೆ ಎಡದಂಡೆ ಮತ್ತು ಬಲದಂಡೆ ನಾಲೆಗಳಲ್ಲಿ ಖುಷ್ಕಿ ಹಾಗೂ ಭತ್ತದ ಬೆಳೆಗಾಗಿ ನೀರನ್ನು ಹರಿಸಲಾಗುತ್ತದೆ. ವಾಟೆಹೊಳೆ ಜಲಾಶಯದಿಂದ ಮುಂಗಾರು ಹಂಗಾಮಿನ ಬೆಳೆಗೆ ಜು.17 ರಿಂದ ನ.16 ರವರೆಗೆ ಒಟ್ಟು 120 ದಿವಸಗಳು ಅವಶ್ಯಕತೆಗೆ ತಕ್ಕಂತೆ ಪೂರ್ಣ ಪ್ರಮಾಣದಲ್ಲಿ ನೀರನ್ನು ಬಿಡಲಾಗುತ್ತಿದೆ.

ಜಿಲ್ಲೆಯಲ್ಲಿ ಬೇಡಿಕೆಯಷ್ಟು ರಸಗೊಬ್ಬರದ ಪೂರೈಕೆಯಾಗಿದ್ದು ಯಾವುದೇ ಅಭಾವ ಉಂಟಾಗಿಲ್ಲ. ರೈತರು ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ..
–ರಮೇಶ್ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ

ಸದ್ಯಕ್ಕೆ ಕೃಷಿಯಲ್ಲಿ ಆಶಾದಾಯಕ ವಾತಾವರಣ ಇದೆ. ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ರಸಗೊಬ್ಬರಗಳನ್ನು ಸಕಾಲದಲ್ಲಿ ಪೂರೈಸಬೇಕು.
–ಷಣ್ಮುಖ ದುದ್ದ, ಗ್ರಾಮದ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.