ಹಾಸನದಲ್ಲಿ ಮನೆ, ತೋಟ ಖರೀದಿಸಿ ತಾಯಿ ಆಸೆ ಈಡೇರಿಸಿದ ನಟ ಯಶ್‌

7

ಹಾಸನದಲ್ಲಿ ಮನೆ, ತೋಟ ಖರೀದಿಸಿ ತಾಯಿ ಆಸೆ ಈಡೇರಿಸಿದ ನಟ ಯಶ್‌

Published:
Updated:

ಹಾಸನ: ಚಿತ್ರ ನಟ ಯಶ್ ಅವರು ಹುಟ್ಟೂರಿನಲ್ಲಿ ಮನೆ, ತೋಟ ಖರೀದಿಸುವ ಮೂಲಕ ತನ್ನ ತಾಯಿ ಆಸೆ ಈಡೇರಿಸಿದ್ದಾರೆ.

ವಿದ್ಯಾನಗರದಲ್ಲಿ 68*70 ವಿಸ್ತೀರ್ಣದ ಮನೆ ಹಾಗೂ ಹಾಸನದಿಂದ 20 ಕಿ.ಮೀ. ದೂರದ ಮಹದೇವರಹಳ್ಳಿಯಲ್ಲಿ 80 ಎಕರೆ ತೋಟ ಖರೀದಿಸಿದ್ದಾರೆ. 

ವಿದ್ಯಾನಗರದ ಮನೆಗೆ ₹ 2.50 ಕೋಟಿ ನೀಡಿದ್ದಾರೆ ಎನ್ನಲಾಗಿದೆ. ಹುಟ್ಟೂರಿನ ಮೇಲಿನ ಪ್ರೀತಿಯಿಂದ ಆಸ್ತಿ ಖರೀದಿಸಿದ್ದು, ತೋಟದಲ್ಲಿ ಮಾವು, ಸಪೋಟ, ಗೋಡಂಬಿ ಮರಗಳು ಹೆಚ್ಚಾಗಿದೆ.

‘ಯಶ್‌ ತಾಯಿ ಊರು ಹಾಸನ. ಬೆಳೆದಿದ್ದು ಮೈಸೂರು, ಇರುವುದು ಬೆಂಗಳೂರು. ಆದರೂ ಹುಟ್ಟೂರಿನ ಸುಂದರ ಪ್ರಕೃತಿ ನಡುವೆ ಕಳೆಯುವ ಆಸೆಯಿಂದ ಬಹಳ ಹಿಂದೆಯೇ ತೋಟ, ಮನೆ ಖರೀದಿಸಿದ್ದಾರೆ. ಕೃಷಿ ಬಗ್ಗೆ ಒಲವು ಇಟ್ಟುಕೊಂಡಿರುವುದು ಖುಷಿಯಾಗಿದೆ’ ಎಂದು ಯಶ್ ಅಭಿಮಾನಿ ಜೀವನ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 46

  Happy
 • 2

  Amused
 • 1

  Sad
 • 1

  Frustrated
 • 3

  Angry

Comments:

0 comments

Write the first review for this !