ಹೊಳೆನರಸೀಪುರ: ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ 75.63 ಹಾಗೂ ಖಾಸಗಿ ಶಾಲೆಗಳಿಗೆ ಶೇ 80.88 ಫಲಿತಾಂಶ ಲಭಿಸಿದೆ.

ತಾಲೂಕಿನ ಬನಕುಪ್ಪೆ ಸರ್ಕಾರಿ ಪ್ರೌಢಶಾಲೆ, ಮಾವನೂರಿನ ಸರ್ಕಾರಿ ಪ್ರೌಢಶಾಲೆ, ಹರದನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಗುಡ್ಡೇನಹಳ್ಳಿಯ ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಶೇ 100 ಫಲಿತಾಂಶ ಹಾಗೂ ಪಟ್ಟಣದ ಚೆನ್ನಾಂಬಿಕ ವೃತ್ತದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ಶೇ 81 ಹಾಗೂ ಮೈಸೂರು ರಸ್ತೆಯ ಸರ್ಕಾರಿ ಬಾಲಕರ ಪ್ರೌಢಶಾಲೆಗೆ ಶೇ 52.17 ಫಲಿತಾಂಶ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ವಿವರಿಸಿದ್ದಾರೆ.

‘ಈ ಬಾರಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನೆ ತರಗತಿಗಳನ್ನು ಪ್ರಾರಂಭಿಸಲು ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ. ಸಪ್ಲಿಮೆಂಟರಿ ಪರೀಕ್ಷೆಯೂ ಮೇ 26ರಿಂದ ಪ್ರಾರಂಭಗೊಂಡು ಜೂನ್ 2ಕ್ಕೆ ಮುಕ್ತಾಯವಾಗಲಿದೆ. ಸಪ್ಲಿಮೆಂಟರಿ ಪರೀಕ್ಷೆಗೆ ಮೇ 3ರಿಂದ ಹೆಸರು ನೊಂದಾಯಿಸಿಕೊಳ್ಳಲು ಅವಕಾಶವಿದ್ದು ನೊಂದಾಯಿಸಿಕೊಳ್ಳಲು ಯಾವುದೇ ಶುಲ್ಕ ಇರುವುದಿಲ್ಲ. ಆದ್ದರಿಂದ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ ಬರೆದು ತೇರ್ಗಡೆ ಹೊಂದಲು ದೊರೆತಿರುವ ಅವಕಾಶವನ್ನು ಬಳಸಿಕೊಂಡು ಉತ್ತೀರ್ಣರಾಗಿ’ ಎಂದು ಸಲಹೆ ನೀಡಿದರು.

ಪಟ್ಟಣದ ಖಾಸಗಿ ಶಾಲೆಗಳಲ್ಲಿ ಗ್ರೀನ್ ವುಡ್ ಆಂಗ್ಲ ಮಾಧ್ಯಮ ಶಾಲೆಗೆ ಶೇ 86.66, ಶ್ರೀ ಲಕ್ಷ್ಮಿನರಸಿಂಹ ಪ್ರೌಢಶಾಲೆಗೆ ಶೇ 79.99, ಶ್ರೀ ವೆಂಕಟೇಶ್ವರ ಪ್ರೌಢಶಾಲೆಗೆ ಶೇ 72.29, ಶ್ರೀ ವಾಸವಿ ಪ್ರೌಢಶಾಲೆ ಶೇ 70.7, ಕೆಎನ್ಎ ಪ್ರೌಢಶಾಲೆ ಶೇ 69.51, ಸ್ವರ್ಣ ಅಂಗ್ಲ ಮಾಧ್ಯಮ ಪ್ರಾಢಶಾಲೆಗೆಗ ಶೇ 69.47, ಪ್ರಿಯದರ್ಶಿನಿ ಪ್ರೌಢಶಾಲೆ ಶೇ. 63.4, ಸ್ವರ್ಣ ಪ್ರೌಢಶಾಲೆಗೆ 52.4 ಫಲಿತಾಂಶ ಲಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.