ಮುಖ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ, ‘ ನೀವು ಯಾರಿಂದ ಅನುಮತಿ ಪಡೆದು ಪೈಪ್ ಅಳವಡಿಸುತ್ತಿದ್ದೀರಿ ಅನುಮತಿ ಪತ್ರ ತೋರಿಸಿ’ ಎಂದರು. ಬಳಿಕ ಪೈಪ್ ಅಳವಡಿಸುತ್ತಿದ್ದ ಕೆಲಸಗಾರರು, ಆಡಳಿತದ ಅನುಮತಿ ಪಡೆದಿ ಲ್ಲ ಎಂಬುದನ್ನು ದೃಢ ಪಡಿಸಿಕೊಂಡು ಕೆಲಸ ನಿಲ್ಲಿಸಲು ಸೂಚನೆ ನೀಡಿದರು. ‘ಆಡಳಿತದ ಅನುಮತಿ ಪಡೆದು ನಿಗದಿತ ಶುಲ್ಕ ಪಾವತಿಸಿದರೆ ನಿಯಮದಂತೆ ಪೈಪ್ ಅಳವಡಿಸಲು ಅನುಮತಿ ನೀಡಬಹುದೇ ಎಂಬುದನ್ನು ಪರಿಶೀಲಿಸುತ್ತೇನೆ’ ಎಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ.