ಹಾಸನ: "ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ವರದಿಯಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಏರಿಕೆ ಮಾಡಲು ಯತ್ನಿಸದಸಮುದಾಯದ ಶಾಸಕರೇ ಕಿವಿ ಮೇಲೆ ಹೂ ಇರಿಸುವ ಕೆಲಸ ಮಾಡುತ್ತಿದ್ದಾರೆ’ ಎಂದುರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಮೂರನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಸಿದ್ಧತೆ ಸಂಬಂಧ ಸಮುದಾಯದ ಮುಖಂಡರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.

‘ಶಾಸಕರೊಬ್ಬರು ತಮ್ಮ ಹೇಳಿಕೆಯನ್ನು ರಕ್ತದಲ್ಲಿ ಬರೆದು ಕೊಡುತ್ತೇನೆ ಎನ್ನುತ್ತಾರೆ. ನಮಗೆರಕ್ತ ಬೇಡ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಲೇಖನಿಯಿಂದ ನಾಗಮೋಹನದಾಸ್ ವರದಿ ಅನುಷ್ಠಾನಗೊಳಿಸುವ ಆದೇಶಕ್ಕೆ ಸಹಿ ಹಾಕಿಸಿಕೊಟ್ಟರೆ ಸಾಕು’ ಎಂದರು.

‘ಸಮುದಾಯದ ಶಾಸಕರೇ ಮೀಸಲಾತಿ ಹೆಚ್ಚಿಸುವ ಬೇಡಿಕೆ ಈಡೇರಿಸಲು ಯತ್ನಿಸುತ್ತಿಲ್ಲ.ಬದಲಾಗಿ ಸಮಾಜದ ಜನರ ಕಿವಿ ಮೇಲೆ ಹೂವು ಇರಿಸುತ್ತಿದ್ದಾರೆ. ಆದ್ದರಿಂದ ನಾವುಜಾಗೃತರಾಗಿ ಹಜ್ಜೆಯಿರಿಸಬೇಕು’ ಎಂದು ಹೇಳಿದರು.

‘2020ರ ಫ್ರೆಬ್ರವರಿ ತಿಂಗಳಲ್ಲಿ ನಡೆದ ವಾಲ್ಮೀಕಿ ಜಾತ್ರೆಯಲ್ಲಿ ಭಾಗವಹಿಸಿದ್ದಬಿ.ಎಸ್.ಯಡಿಯೂರಪ್ಪ, ಮೀಸಲಾತಿ ಏರಿಕೆ ಶಿಫಾರಸ್ಸು ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿದ್ದರು. ನಂತರದಲ್ಲಿ ಕೋವಿಡ್ ಕಾರಣದಿಂದ ಮಾರ್ಚ್ ವೇಳೆಗೆ ದೇಶವೇ ಲಾಕ್‌ಡೌನ್ಆಯಿತು. ನಾಗಮೋಹನ ದಾಸ್ ಅವರು ಜುಲೈನಲ್ಲಿ ತಮ್ಮ ವರದಿ ಸಲ್ಲಿಸಿದ್ದಾರೆ. ಅದರ
ಅನ್ವಯ ಮೀಸಲಾತಿ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

ಈ ವಿಚಾರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ನಿಲುವು ಸ್ಪಷ್ಟವಾಗಬೇಕು. ಅವರುಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿದ್ದಾರೆಯೇ? ಸಮಗ್ರವಾಗಿ ಅಧ್ಯಯನ ಮಾಡಿ,ವರದಿ ಜಾರಿ ಮಾಡಿ ಎಂದು ಸಿದ್ದರಾಮಯ್ಯ ಸೇರಿದಂತೆ ವಿರೋಧ ಪಕ್ಷದ ಯಾರೊಬ್ಬರೂಆಗ್ರಹಿಸಿಲ್ಲ. ಅವರಿಗೆಲ್ಲ ಸಮುದಾಯದ ಮತಗಳು ಬೇಕೇ ಹೊರತು ನೋವು, ಸಮಸ್ಯೆಗಳನ್ನುಬಗೆಹರಿಸುವ ಇಚ್ಛಾಶಕ್ತಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 36 ಎಸ್ಸಿ ಹಾಗೂ 15 ಎಸ್ಟಿ ಸಮುದಾಯದ ಶಾಸಕರಿದ್ದರೂ ಒಂದು ದಿನವೂ ಸದನದಲ್ಲಿ ಸಮುದಾಯದ ಸ್ಥಿತಿಗತಿಗಳ ಬಗ್ಗೆ ಮಾತನಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಖಿಲ ಕನಾಟಕ ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ಬಿ.ಎಸ್.ರವಿಕುಮಾರ್, ಜಿಲ್ಲಾ ಘಟಕದಅಧ್ಯಕ್ಷ ಜಿ.ಓ.ಮಹಾಂತಪ್ಪ, ಕೃಷ್ಣನಾಯಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.