ಅರಸೀಕೆರೆ: ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಎ.ಜಿ.ಕಿರಣ್‌ಕುಮಾರ್, ಜಿಲ್ಲಾ ಉಪಾಧ್ಯಕ್ಷರಾಗಿ ತಾಲ್ಲೂಕು ಅಧ್ಯಕ್ಷರಾಗಿ ಹೇಮಂತ್‌ಕುಮಾರ್ ಆಯ್ಕೆಯಾಗಿದ್ದು, ನಗರದಲ್ಲಿ ಬುಧವಾರ ನಡೆದ ತಾಲ್ಲೂಕು ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಮನುಕುಮಾರ್ ನೇತೃತ್ವದಲ್ಲಿ ಅಧಿಕಾರ ಹಸ್ತಾಂತರನಡೆಯಿತು.

ಜಿಲ್ಲಾ ಘಟಕದ ಅಧ್ಯಕ್ಷ ಮನುಕುಮಾರ್ ಮಾತನಾಡಿ, ಗ್ರಾಮ ಶಾಖೆಗಳ ಮೂಲಕವು ಸಂಘಟನೆಯನ್ನು ಬಲಪಡಿಸಬೇಕು. ತಾಲ್ಲೂಕು ಘಟಕ ಮತ್ತಷ್ಟು ಪ್ರಬಲವಾಗಬೇಕು ಎಂದು ಹೇಳಿದರು. ನೂತನ ಅಧ್ಯಕ್ಷ ಎ.ಜಿ.ಕಿರಣ್‌ಕುಮಾರ್ ಮಾತನಾಡಿ,ತಾಲ್ಲೂಕು ಘಟಕವನ್ನು ಸಂಘಟಿಸಿ ಸಮಾಜಿಕ ಕಾರ್ಯಗಳು, ಜನಪರ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು.ನಾಡು ನುಡಿ ಜಲಕ್ಕಾಗಿ ಸದಾ ಹೋರಾಡುವ ರಾಜ್ಯಾಧ್ಯಕ್ಷರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ನಗರಸಭಾ ಮಾಜಿ ಅಧ್ಯಕ್ಷ ಗಿರೀಶ್ ಮಾತನಾಡಿ, ಸಂಘಟನೆಯ ರಾಜ್ಯ ಸಮಿತಿ ಅಧ್ಯಕ್ಷ ನಾರಾಯಣ ಗೌಡರನ್ನು ಒಗ್ಗೂಡಿ ವಿಧಾನ ಪರಿಷತ್‌ಗೆ ಆಯ್ಕೆ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಉಪಾಧ್ಯಕ್ಷ ಹೇಮಂತ್‌ಕುಮಾರ್ , ತುಳಸಿದಾಸ್ , ಗೌರವ ಅಧ್ಯಕ್ಷ ಲಕ್ಷ್ಮಿಶ್ , ಕಾರ್ಯದರ್ಶಿ ರವಿಶಂಕರ್ , ಮಹಿಳಾ ಘಟಕದ ಅಧ್ಯಕ್ಷೆ ಕಮಲಮ್ಮ , ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಭಿಗೌಡ , ಗ್ರಾಮಾಂತರ ಅಧ್ಯಕ್ಷ ಗಂಗಾಧರ್, ಯುವ ಘಟಕದ ಅಧ್ಯಕ್ಷ ದರ್ಶಿತ್ ಮುಖಂಡರಾದ ಸುಜಾತ ರಮೇಶ್, ಶ್ವೇತ ರಮೇಶ್, ಜಯರಾಂ, ಪರಮೇಶ್, ಉಷಾ, ದಿಲೀಪ್ ಕುಮಾರ್, ಪ್ರಸನ್ನಕುಮಾರ್ ,ದಿವಾಕರ್ , ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.