ಹಾಸನ: ಕೋಡಿ ಬಿದ್ದ ಕೆರೆ– ಬೈಕಿನಲ್ಲಿ ಹೋಗುವಾಗ ನೀರಿನಲ್ಲಿ ಮುಳುಗಿ ಬಾಲಕಿ ಸಾವು

ಬಾಗೂರು (ಹಾಸನ): ಬಾಗೂರು ಹೋಬಳಿಯ ದಡ್ಡಿಹಳ್ಳಿ ಕೆರೆ ಕೋಡಿ ಬಿದ್ದಿದ್ದು, ಬೈಕ್ ನಲ್ಲಿ ಶಾಲೆಗೆ ತೆರಳುತ್ತಿದ್ದ ಬಾಲಕಿಯೊಬ್ಬಳು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾಳೆ.
ಗ್ರಾಮದ 5 ನೇ ತರಗತಿಯ ವಿದ್ಯಾರ್ಥಿನಿ ರಂಜಿತಾ ಮೃತಪಟ್ಟ ಬಾಲಕಿ.
ಗುರುವಾರ ಬೆಳಿಗ್ಗೆ ಹೊಲದಿಂದ ತನ್ನ ಸಂಬಂಧಿಯ ಜೊತೆಗೆ ಈ ಬಾಲಕಿ ಬೈಕ್ ನಲ್ಲಿ ಶಾಲೆಗೆ ತೆರಳುತ್ತಿದ್ದಳು. ಈ ವೇಳೆ ಕೆರೆಯ ಕೋಡಿ ನೀರು ಹರಿಯುತ್ತಿದ್ದು, ನೀರಿನ ರಭಸಕ್ಕೆ ಬೈಕ್ ಕೊಚ್ಚಿಕೊಂಡು ಹೋಗಿದೆ. ಇದನ್ನು ನೋಡಿದ ವೃದ್ಧೆಯೊಬ್ಬರು, ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಗ್ರಾಮಸ್ಥರು ಬೈಕ್ ಓಡಿಸುತ್ತಿದ್ದ ಯುವಕನನ್ನು ರಕ್ಷಿಸಿದ್ದಾರೆ. ಆದರೆ, ಬಾಲಕಿ ರಂಜಿತಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ.
ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಬಾರದು: ನಟ ಚೇತನ್ಗೆ ಉಪೇಂದ್ರ ಟಾಂಗ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.