ಹಳ್ಳಿಮೈಸೂರು ಹೋಬಳಿಯ ನವೀನ್ ಕುಡುಗೋಲು ಹಿಡಿದು ಕೆಲಸ ಮಾಡುತ್ತಿದ್ದಾಗ ಮೇಲೆರಗಿದ ಚಿರತೆಯತ್ತ ಕುಡುಗೋಲಿನಿಂದ ಪ್ರತಿದಾಳಿ ನಡೆಸಿದ್ದರು, ಆಗ ಅವರ ಕಾಲಿಗೆ ಕಚ್ಚಿ ಗಾಯಗೊಳಿಸಿದೆ. ಅಕ್ಕಪಕ್ಕದ ರೈತರು ಬಂದಾಗ ಚಿರತೆ ಓಡಿ ಹೋಗಿದೆ. ನವೀನ್‌ಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ಮಾಡಿತಿ ಪಡೆದರು.