ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕಮಾಂಡ್‌ಗೆ ನಿಷ್ಠನೇ ಹೊರತು, ಗುಲಾಮನಲ್ಲ: ರಾಜಣ್ಣ

Published 12 ಫೆಬ್ರುವರಿ 2024, 0:08 IST
Last Updated 12 ಫೆಬ್ರುವರಿ 2024, 0:08 IST
ಅಕ್ಷರ ಗಾತ್ರ

ಹಾಸನ: ‘ನಾನು ಹೈಕಮಾಂಡ್‌ಗೆ ನಿಷ್ಠನಾಗಿದ್ದು, ಆದೇಶವನ್ನು ಪಾಲಿಸುತ್ತೇನೆ. ಆದರೆ ಗುಲಾಮನಲ್ಲ’ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಹೇಳಿದರು.

ಬೇಲೂರಿನಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ‘ನನಗೆ ನಾನೇ ಹೈಕಮಾಂಡ್. ನಮ್ಮ ಮತದಾರರಿದ್ದಾರಲ್ಲ ಅವರು ನನಗೆ ಹೈಕಮಾಂಡ್. ರಾಜ್ಯ ಘಟಕದ ಅಧ್ಯಕ್ಷ, ರಾಷ್ಟ್ರೀಯ ಅಧ್ಯಕ್ಷರು ಇದ್ದಾರೆ. ಅವರಿಗೆ ಕೊಡಬೇಕಾದ ಗೌರವ ಕೊಡುತ್ತೇವೆ. ಅವರ ಮಾತು ಯಾವುದು ಕೇಳಬೇಕೋ ಅದನ್ನು ಕೇಳುತ್ತೇವೆ. ಅವರ ಮಾತನ್ನು ಧಿಕ್ಕರಿಸಲ್ಲ’ ಎಂದರು.

‘ರಾಜಣ್ಣ ಕೆಪಿಸಿಸಿ ಅಧ್ಯಕ್ಷರ ರೀತಿ ಆಡುತ್ತಿದ್ದಾರೆ’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಅವರ ಅಪ್ಪ ಅಂತ ಹೇಳಿ. ಅದಕ್ಕಿಂತ ಮೇಲೆ ಯಾರಾದರೂ ಇದ್ದರೆ, ಅದಕ್ಕೂ ಅಪ್ಪನೇ. ನನ್ನ ನಡವಳಿಕೆಯನ್ನು ಜನರು ಮೆಚ್ಚಬೇಕಷ್ಟೆ. ಮುಖಂಡರು ಮೆಚ್ಚಿಸುವ ನಡವಳಿಕೆ ನನಗೆ ಬೇಕಿಲ್ಲ’ ಎಂದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ‘ಯಾರು ಕಮಿಷನ್‌ ಕೇಳುತ್ತಿದ್ದಾರೆ ಎಂದು ದೂರು ಕೊಡಬೇಕಲ್ಲ ಅವರು?’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT