ಅರಕಲಗೂಡು: ‘ರೈತರು ಬೆಳೆ ಬೆಳೆಯಲು ಮಾಡಿರುವ ವೆಚ್ಚಕ್ಕೆ ಹೋಲಿಸಿದರೆ ಸರ್ಕಾರ ನೀಡುತ್ತಿರುವ ಬೆಂಬಲ ಬೆಲೆ ಏನೇನು ಸಾಲದು’ ಎಂದು ಶಾಸಕ ಎ. ಮಂಜು ಅಭಿಪ್ರಾಯಪಟ್ಟರು.

ಪಟ್ಟಣದ ಎಪಿಎಂಸಿ ಯಾರ್ಡ್ನಲ್ಲಿ ಶನಿವಾರ ರಾಗಿ ಮತ್ತು ಭತ್ತದ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ರೈತರು ತಮ್ಮ ಆದಾಯವನ್ನು ದುಪ್ಟಟ್ಟು ಮಾಡಿಕೊಳ್ಳದಿದ್ದರೆ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಕೃಷಿ ಬದುಕು ಕಷ್ಟ ಹಾಗೂ ಅಗತ್ಯ ಸೌಲಭ್ಯಗಳಿಲ್ಲ ಎಂಬ ಕಾರಣಕ್ಕೆ ರೈತರ ಮಕ್ಕಳಿಗೆ ಹೆಣ್ಣುಕೊಡಲು ಯಾರೂ ಮುಂದೆ ಬರದ ಸ್ಥಿತಿ ಎದುರಾಗಿದೆ. ರೈತರು ನೆಮ್ಮದಿಯಿಂದ ಬದುಕಲು ತಮ್ಮಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳುವುದು ಅಗತ್ಯ’ ಎಂದರು.

‘ಪಟ್ಟಣದ ಎಪಿಎಂಸಿ ಯಾರ್ಡ್ ಮತ್ತು ರಾಮನಾಥಪುರ ರೇಷ್ಮೆ ಇಲಾಖೆ ತರಬೇತಿ ಕೇಂದ್ರಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಅರಕಲಗೂಡು ಕೇಂದ್ರದಲ್ಲಿ ರಾಗಿ 1267 ಮತ್ತು ಭತ್ತದ ಮಾರಾಟಕ್ಕೆ 64 , ರಾಮನಾಥಪುರದಲ್ಲಿ ರಾಗಿ 2263, ಭತ್ತಕ್ಕೆ 46 ಮಂದಿ ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ.

55005 ಕ್ವಿಂಟಾಲ್ ರಾಗಿ, 3426 ಕ್ವಿಂಟಲ್ ಭತ್ತ ಖರೀದಿಸಲು ನಿರ್ಧರಿಸಲಾಗಿದೆ. ರಾಗಿಗೆ ಕ್ವಿಂಟಲ್ ₹4290 ಹಾಗೂ ಭತ್ತಕ್ಕೆ ₹2320 ದರ ನಿಗದಿಗೊಳಿಸಿದೆ. ಅಧಿಕಾರಿಗಳು ಯಾವುದೇ ಲೋಪಕ್ಕೆ ಅವಕಾಶ ನೀಡದಂತೆ ಜಾಗ್ರತೆ ವಹಿಸಬೇಕು. ರೈತರು ಗುಣಮಟ್ಟದ ರಾಗಿ ಮತ್ತು ಭತ್ತ ಮಾರಾಟ ಮಾಡುವಂತೆ ಸಲಹೆ ಮಾಡಿದರು.

ಆಹಾರ ಇಲಾಖೆ ಶಿರಸ್ತೇದಾರ್ ಎಲ್.ಬಿ.ಮಂಜು, ಎಪಿಎಂಸಿ ಕಾರ್ಯದರ್ಶಿ ಸೋಮಶೇಖರ್, ಖರೀದಿ ಕೇಂದ್ರದ ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.

ಅಭಿವೃದ್ಧಿಯ ಬಜೆಟ್ ಅಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಅಭಿವೃದ್ಧಿಯ ಬಜೆಟ್ ಅಲ್ಲ, ಒಂದು ಸಮುದಾಯವನ್ನು ಓಲೈಕೆ ಮಾಡುವ ಬಜೆಟ್ ಎಂದು ಶಾಸಕ ಎ. ಮಂಜು ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಬಜೆಟ್ನಲ್ಲಿ ಆಸ್ಪತ್ರೆ, ರಸ್ತೆ, ಶಿಕ್ಷಣ ಮುಂತಾದ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಿಲ್ಲ. ಇದು ಬಡವರ, ರೈತರ ಪರ ಬಜೆಟ್ ಅಲ್ಲ. ಇದು ದೊಡ್ಡ ಬಜೆಟ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕೆ ಹಣ ನೀಡುವ ಅಂದರೆ ತೆರಿಗೆ ಕಟ್ಟುವ ಉದ್ಯಮಿಗಳು ಮತ್ತಿತರರಿಗೆ ಧನ್ಯವಾದ ಹೇಳಿಲ್ಲ. ಅವರು ಕಟ್ಟುವ ಟ್ಯಾಕ್ಸ್ ನಿಂದಲೇ ಅಭಿವೃದ್ಧಿಯಾಗೋದು. ಅವರಿಗೆ ಧನ್ಯವಾದ ಹೇಳದಿರುವುದಕ್ಕೆ ನನ್ನ ವಿರೋಧವಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.