ಭಾನುವಾರ, ಜನವರಿ 17, 2021
26 °C

31ಕ್ಕೆ ಮಿಸ್‌, ಮಿಸ್ಟರ್‌ ಹಾಸನ್‌ ಆಡಿಷನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಐಎಂ ಪವರ್‌ಫುಲ್‌ ಸಂಸ್ಥೆ ವತಿಯಿಂದ ನಗರದ ಪೋದಾರ್‌ ಇಂಟರ್‌ ನ್ಯಾಷನಲ್‌ ಸ್ಕೂಲ್‌ನಲ್ಲಿ ಜ. 31ರಂದು ಮಿಸ್‌ ಹಾಸನ್‌ ಮತ್ತು ಮಿಸ್ಟ್‌ರ್‌ ಹಾಸನ ಆಡಿಷನ್‌ ಆಯೋಜಿಸಲಾಗಿದೆ ಎಂದು ಆಯೋಜಕಿ ಧವಳಶ್ರೀ ತಿಳಿಸಿದರು.

ಗೃಹಿಣಿಯರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರು ಈ ಆಡಿಷನ್‌ನಲ್ಲಿ ಭಾಗವಹಿಸಬಹುದು. ಕಳೆದ ನಾಲ್ಕು ವರ್ಷಗಳಿಂದ ನಮ್ಮ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ರೋಟರಿ ರಾಯಲ್ಸ್‌ ಸಹಯೋಗದಲ್ಲಿ ನಡೆಯುವ ಮಿಸ್‌ ಹಾಸನ್‌, ಮಿಸಸ್‌ ಹಾಸನ್‌ ಹಾಗೂ ಮಿಸ್ಟರ್‌ ಹಾಸನ್‌ ಆಡಿಷನ್‌ನಲ್ಲಿ ಆಯ್ಕೆಯಾದವರನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಸಂಸ್ಥೆ ವತಿಯಿಂದ ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು. ಸಿನಿಮಾಗಳಲ್ಲಿ ನಟಿಸಲು ಅವಕಾಶವಿದೆ. ನೋಂದಣಿಗೆ ಒಬ್ಬರಿಗೆ ₹1000 ಶುಲ್ಕವಿದ್ದು, ನೋಂದಾಯಿಸಿಕೊಳ್ಳಲು ಮೊ. 7019413069 ಸಂಖ್ಯೆಗೆ ಕರೆ ಮಾಡಬಹುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರೋಟರಿ ರಾಯಲ್ಸ್‌ನ ಶ್ವೇತಾ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.