ಬಾಗೂರು (ನುಗ್ಗೇಹಳ್ಳಿ ): ಬಾಗೂರು ಹೋಬಳಿ ವ್ಯಾಪ್ತಿಯಲ್ಲಿ ನವಿಲೆ ಕಲ್ಲೇ ಸೋಮನಹಳ್ಳಿ ಬಾಗೂರು ಅಲಗೊಂಡನಹಳ್ಳಿ ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಹೋಬಳಿ ವ್ಯಾಪ್ತಿಯ ಬಹುತೇಕ ಕೆರೆಗಳನ್ನು ತುಂಬಿಸಲಾಗುತಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.

ಹೋಬಳಿಯ ಗೋವಿನಕೆರೆ ಗ್ರಾಮದಲ್ಲಿ ₹1 ಕೋಟಿ ವೆಚ್ಚದ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಚಾಲನೆ ನೆರವೇರಿಸಿ ಅವರು ಮಾತನಾಡಿದರು.

ಬಾಗೂರು ಏತ ನೀರಾವರಿ ಯೋಜನೆ ಗೋವಿನಕೆರೆ, ಬಿಹೊನ್ನೇನಹಳ್ಳಿ, ಓಬಳಾಪುರ, ದಡ್ಡಿಹಳ್ಳಿ ಸೇರಿದಂತೆ ಹಲವು ಕೆರೆಗಳನ್ನು ತುಂಬಿಸಲಾಗುತ್ತಿದೆ. ನವಿಲೆ ಏತ ನೀರಾವರಿ ಯೋಜನೆ ಮೂಲಕ ಅಣತಿ ಭಾಗದ ಕೆರೆಗಳು ಹಾಗೂ ನವಿಲೆ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ . ಕಳೆದ ವರ್ಷ ಚಾಲನೆ ನೀಡಲಾಗಿದ್ದ ಕಲ್ಲೇಸೋಮನಹಳ್ಳಿ ಏತ ನೀರಾವರಿ ಯೋಜನೆ ಮೂಲಕ ಎಂ.ಶಿವರ ಹಾಗೂ ಕೆಂಬಾಳು ಗ್ರಾಮ ಪಂಚಾಯಿತಿಯ 25 ಕೆರೆಗಳಿಗೆ ನೀರು ತುಂಬಿಸಲಾಗಿದೆ. ಅಲಗೊಂಡನಹಳ್ಳಿ ಏತ ನೀರಾವರಿಯಿಂದ ಕುಂಬಾರಹಳ್ಳಿ ಬ್ಯಾಡರಹಳ್ಳಿ ಭಾಗದ ಕೆರೆಗಳನ್ನು ತುಂಬಿಸಲಾಗಿದೆ. ಹೋಬಳಿಯಲ್ಲಿ ಶೇ ನೂರರಷ್ಟು ನೀರಾವರಿ ಯೋಜನೆ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಗೋವಿನಕೆರೆ ಗ್ರಾಮದ ಕೆರೆ ಏರಿ ರಸ್ತೆಯು ಕಲ್ಲೇ ಸೋಮನಹಳ್ಳಿ ಗ್ರಾಮಕ್ಕೆ ಸಂಪರ್ಕಿಸಲಿದೆ. ಲಕ್ಷ್ಮೀದೇವಿ ದೇವಾಲಯದ ಹೊರಗಿನ ರಸ್ತೆ ಅಭಿವೃದ್ಧಿಸಲಾಗುವುದು ಎಂದರು.

ಎಂ ಶಿವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಪಕ್ಷತೀತವಾಗಿ ಎಲ್ಲ ರೈತರಿಗೂ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗಿದ್ದು ಗ್ರಾಮದ ಹೊಸ ಶೇರುದಾರ ರೈತರಿಗೆ ಸದ್ಯದಲ್ಲೇ ಸಾಲ ಕೊಡಿಸುವುದಾಗಿ ಭರವಸೆ ನೀಡಿದರು.

ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮರಿ ದೇವೇಗೌಡ ಗೋವಿನಕೆರೆ ಗ್ರಾಮದಿಂದ ಓಬಳಾಪುರ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿಗೆ ಅನುದಾನ ನೀಡುವಂತೆ ಒತ್ತಾಯಿಸಿದರು.

ಪಂಚಾಯಿತಿ ಅಧ್ಯಕ್ಷರಾದ ನಯನ ಮಧು, ಅಣ್ಣೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ವಿ. ಎನ್. ಮಂಜುನಾಥ್ , ತಾ.ಪಂ .ಮಾಜಿ ಸದಸ್ಯ ಓಬಳಾಪುರ ಬಸವರಾಜ್, ಉದ್ಯಮಿ ಅಣತಿ ಯೋಗೀಶ್, ಗುತ್ತಿಗೆದಾರ ಬಾಗೂರು ಮನು ಕುಮಾರ್, ಮುಖಂಡರಾದ ಮರುವನಹಳ್ಳಿ ದೇವರಾಜ್, ವೈರಮುಡಿ ಗೌಡ, ತಮ್ಮಯ್ಯಣ್ಣ , ರಾಮು, ರಮೇಶ್, ಶಿವರ ರಾಜು, ನಂಜುಂಡೇಗೌಡ, ರಂಗಣ್ಣ, ಡೈರಿ ಮಾಲಿಂಗೇಗೌಡ, ಸುಧಾಕರ್, ವೆಂಕಟೇಶ್ ಬೋರೇಗೌಡ, ಹುಲಿಕೆರೆ ಸಂಪತ್ ಕುಮಾರ್, ಕಾವೇರಿ ನೀರಾವರಿ ನಿಗಮದ ಸಹಾಯಕ ಎಂಜಿನಿಯರ್ಗಳಾದ ಪುನೀತ್, ವಿಜಯಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.