ಶ್ರವಣಬೆಳಗೊಳ: ‘ಪಟ್ಟಣದ ಸೆಸ್ಕ್ ಕಾರ್ಯಾಲಯದ ಆವರಣದಲ್ಲಿ ₹31 ಲಕ್ಷ ಅಂದಾಜು ವೆಚ್ಚದಲ್ಲಿ ದಾಖಲೆಗಳ ಕೊಠಡಿಯನ್ನು ನಿರ್ಮಿಸಲಾಗುತ್ತಿದೆ’ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಸೋಮವಾರ ಹೇಳಿದರು.

ಮುಂಬರುವ 2030ರ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕಿಂತ ಮೊದಲೇ ಶ್ರವಣಬೆಳಗೊಳ ಪಟ್ಟಣ ವ್ಯಾಪ್ತಿಯಲ್ಲಿ ಸುಸಜ್ಜಿತ ವಿದ್ಯುತ್ ಯು.ಜಿ. ಕೇಬಲ್ ಅಳವಡಿಕೆಗೆ ಅನುಮೋದನೆಯಾಗಿದ್ದು, ಕಾಮಗಾರಿಗೆ ಆದ್ಯತೆ ನೀಡಲಾಗುವುದು. ಮಂಜುನಾಥಪುರ ಶ್ರವಣಬೆಳಗೊಳ ವ್ಯಾಪ್ತಿಯ ಉಪ ಕೇಂದ್ರಗಳ ಸುರಕ್ಷತೆಯ ದೃಷ್ಟಿಯಿಂದ ಕಾಂಪೌಂಡ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದರು.

‘ಶ್ರವಣೇರಿ, ಪರಮ, ಜಿನನಾಥಪುರ, ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿಗೆ ತೊಂದರೆಯಾಗುತ್ತಿದ್ದು, ಫೀಡರ್ಗಳ ಮುಖಾಂತರ ಅದನ್ನೂ ಸರಿಪಡಿಸಲಿದ್ದು, ಬೇಸಿಗೆಯಲ್ಲಿ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಎಂಜಿನಿಯರ್ಗಳಿಗೆ ಸೂಚಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣ, ಸಹಾಯಕ ಎಂಜಿನಿಯರ್ ಚಲುವರಾಜು, ಸೆಕ್ಷನ್ ಆಫಿಸರ್ ಚಂದ್ರಶೇಖರ್, ಪಿಎಸಿಸಿ ಅಧ್ಯಕ್ಷ ಮಹೇಂದ್ರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಆರ್.ಲೋಕೇಶ್, ಎಸ್.ಎಂ.ಲಕ್ಷ್ಮಣ್, ರವಿ ನಂಜಪ್ಪ, ಗುತ್ತಿಗೆದಾರ ಜೆ.ನಂಜೇಶ್, ಸಿಬ್ಬಂದಿ ಹರ್ಷ, ಎಲ್ಲಪ್ಪ, ಶಿವಾನಂದ್, ತೀರ್ಥೇಶ್, ಪ್ರವೀಣ, ಹನುಮಂತ, ಸುಮಿತ್ರ, ದುಗ್ಗೇಶ್, ನಾಗರಾಜ್, ಶಿವಲಿಂಗಪ್ಪ, ಪ್ರಜ್ವಲ್, ವಿಮಲ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.