ಚನ್ನರಾಯಪಟ್ಟಣ: ವಿದ್ಯಾರ್ಥಿ ದಿಸೆಯಲ್ಲಿ ವ್ಯಾಪಾರ, ವಹಿವಾಟು, ವ್ಯವಹಾರದ ಲೆಕ್ಕಾಚಾರವನ್ನು ತಿಳಿದುಕೊಳ್ಳಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಪಟ್ಟಣದ ನವೋದಯ ಶಿಕ್ಷಣ ಸಂಸ್ಥೆಯಲ್ಲಿ ಈಚೆಗೆ ಏರ್ಪಡಿಸಿದ್ದ ಆಹಾರಮೇಳ ಉದ್ಘಾಟಿಸಿ ಮಾತನಾಡಿದ ಅವರು, ‘ತರಗತಿಯಲ್ಲಿ ಪಾಠದ ಜೊತೆಗೆ ಪ್ರಾಪಂಚಿಕ ಜ್ಞಾನ ಅತ್ಯವಶ್ಯಕ. ಹಾಗಾಗಿ ಪಠ್ಯದ ಜತೆ ಆಹಾರಮೇಳ ಆಯೋಜಿಸಿದ್ದು, ಲಾಭ–ನಷ್ಟದ ಕುರಿತು ಮಾಹಿತಿ, ಆಹಾರ ತಯಾರಿಸುವ ಕುರಿತು ಪ್ರಾಯೋಗಿಕ ತಿಳುವಳಿಕೆ ಮೂಡುತ್ತದೆ. ಮನೆಯಲ್ಲಿ ಪೋಷಕರು ಅಡುಗೆ ತಯಾರಿಸುವ ಕೆಲಸದಲ್ಲಿ ವಿದ್ಯಾರ್ಥಿಗಳು ಬಿಡುವಿನ ವೇಳೆಯಲ್ಲಿ ಸಹಾಯ ನೀಡಬೇಕು. ಕಲಿಕೆಗೆ ಪೂರಕವಾದ ವಾತಾವರಣವನ್ನು ಆಹಾರಮೇಳ ಒದಗಿಸುತ್ತದೆ’ ಎಂದು ಹೇಳಿದರು.

‘ಇತ್ತೀಚಿನ ದಿನಗಳಲ್ಲಿ ಆಹಾರದಲ್ಲಿ ಕಲಬೆರಕೆ ಮಾಡುತ್ತಿರುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ’ ಎಂದು ತಿಳಿಸಿದರು.

ತಹಶೀಲ್ದಾರ್ ಜಿ.ಎಸ್. ಶಂಕರಪ್ಪ ಮಾತನಾಡಿದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೆ.ಎನ್. ಅನಿಲ್, ನವೋದಯ ವಿದ್ಯಾಸಂಘದ ಅದ್ಯಕ್ಷ ಸಿ.ಜೆ. ಮಂಜುನಾಥ್, ಗೌರವಾದ್ಯಕ್ಷ ಡಾ. ಸಿ.ಎಸ್. ಶೇಷಶಯನ, ಉಪಾದ್ಯಕ್ಷ ಡಾ.ಎಸ್. ಪ್ರಮೋದ್, ಕಾರ್ಯದರ್ಶಿ ಕೆ.ಪಿ. ಶರತ್, ಕೋಶಾಧ್ಯಕ್ಷ ಜಲೇಂದ್ರಕುಮಾರ್, ನಿರ್ದೇಶಕ ಆನಂದ ಕಾಳೇನಹಳ್ಳಿ, ಪ್ರಾಂಶುಪಾಲ ಎ.ಟಿ.ಸಂಜಯ ಕುಮಾರ್, ಪ್ರಾಂಶುಪಾಲ ಎಸ್.ಸಿ. ಸುರೇಶ್ ಭಾಗವಹಿಸಿದ್ದರು. ವಿದ್ಯಾರ್ಥಿಗಳು ವಿವಿಧ ಖಾದ್ಯಗಳನ್ನು ಮಾರಾಟ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.