ಸೋಮವಾರ, ಜನವರಿ 17, 2022
18 °C
ಅರಸೀಕೆರೆ: ಬಿಜೆಪಿ ಪ್ರಚಾರ ಸಭೆ

ವಿಧಾನಪರಿಷತ್‌ ಚುನಾವಣೆ: ಕಾರ್ಯಕರ್ತರ ಮಾರಾಮಾರಿ, ಮೂವರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅರಸೀಕೆರೆ: ವಿಧಾನಪರಿಷತ್‌ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಎಚ್‌.ಎಂ.ವಿಶ್ವನಾಥ್‌ ಪರ ಪ್ರಚಾರ ಸಭೆಯಲ್ಲಿ ಮಂಗಳವಾರ ಎರಡು ಬಣಗಳ ನಡುವೆ ಮಾರಾಮಾರಿ ನಡೆದಿದ್ದು, ಮೂವರು ಗಾಯಗೊಂಡರು.  

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಜೊತೆಗೆ ಮುಖಂಡ ಅಣ್ಣನಾಯಕನಹಳ್ಳಿ ವಿಜಯ್‌ಕುಮಾರ್ ಅವರನ್ನು ವೇದಿಕೆ ಮೇಲೆ ಕುಳ್ಳಿರಿಸಿದ್ದಕ್ಕೆ ಮತ್ತೊಬ್ಬ ಮುಖಂಡ ಎನ್.ಆರ್ ಸಂತೋಷ್ ಪರ ಬಣ ಆಕ್ಷೇಪ ವ್ಯಕ್ತಪಡಿಸಿತು.

ಸಂತೋಷ್‌ ಭಾಷಣದ ವೇಳೆ ವಿಜಯಕುಮಾರ್‌ ಬಣ ವಿರೋಧ ವ್ಯಕ್ತಪಡಿಸಿ, ‘ಸಂತೋಷ್ ಅವರು ಸುಳ್ಳು ಕೇಸು ದಾಖಲಿಸಿ ಬಿಜೆಪಿ ಮುಖಂಡರಿಗೆ ಕಿರುಕುಳ ನೀಡುತ್ತಿದ್ದಾರೆ. ಅಂಥವರಿಗೆ ಮಣೆ ಹಾಕುವುದಾದರೆ ಏಕೆ ಬೆಂಬಲ ಕೊಡಬೇಕು’ ಎಂದು ತಗಾದೆ ತೆಗೆದರು. ಸಚಿವರು ಎರಡೂ ಕಡೆಯವರನ್ನು ಸಮಾಧಾನಪಡಿಸಿದರು.

ಸಭೆಯಿಂದ ಸಚಿವರು ನಿರ್ಗಮಿಸಿದ ಬಳಿಕ ಎರಡು ಬಣಗಳ ನಡುವೆ ಮಾರಾಮಾರಿ ಆಯಿತು. ಕುರ್ಚಿಗಳನ್ನು ಬಿಸಾಡಿದರು. ಕಾರ್ಯಕರ್ತ ಮೋಹನ್ ನಾಯ್ಕ ಅವರ ಮೂಗಿಗೆ ಪೆಟ್ಟಾಯಿತು. ಮೋಹನ್ ಸೇರಿದಂತೆ ಸಣ್ಣಪುಟ್ಟ ಗಾಯಗೊಂಡಿದ್ದ ಇತರೆ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ  ಬಗ್ಗೆ ಪ್ರಕರಣ ದಾಖಲಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು