ಹಾಸನ: ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದು, ಕೃಷಿ ಚಟುವಟಿಕೆಗೆ ಪೂರಕ ವಾತಾವರಣ ನಿರ್ಮಾಣವಾಗಿದೆ. ಶುಂಠಿ, ಹೊಗೆಸೊಪ್ಪು ನಾಟಿಗೆ ಭೂಮಿ ಹದವಾಗಿದ್ದರೆ, ಕಾಫಿ ಗಿಡಗಳಿಗೆ ಮಳೆ ತಂಪೆರೆದಿದೆ.

ಜಿಲ್ಲೆಯಲ್ಲಿ ಜನವರಿಯಿಂದ ಏಪ್ರಿಲ್ ಅಂತ್ಯದವರೆಗೆ ಮುಂಗಾರು ಪೂರ್ವ ಮಳೆ ಶೇ 64 ರಷ್ಟು ಅಧಿಕವಾಗಿದೆ. ವಾಡಿಕೆಯಂತೆ 6.5 ಸೆಂ.ಮೀ. ಮಳೆಯಾಗಬೇಕಿತ್ತು. ಆದರೆ, 10.6 ಸೆಂ.ಮೀ. ಮಳೆ ಸುರಿದಿದೆ. ಇದರೊಂದಿಗೆ ಶೇಕಡ 80 ರಷ್ಟು ಹೆಚ್ಚಿನ ಮಳೆ ಬಿದ್ದಂತಾಗಿದೆ .ಬೇಲೂರು ತಾಲೂಕಿನಲ್ಲಿ ಅತಿ ಹೆಚ್ಚು 12.5 ಸೆಂ.ಮೀ. ಮಳೆಯಾಗಿದ್ದರೆ, ಅರಕಲಗೂಡು ತಾಲ್ಲೂಕಿನಲ್ಲಿ ಅತಿ ಕಡಿಮೆ 7.9 ಸೆಂ.ಮೀ. ಮೀಟರ್ ಮಳೆಯಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣತ ರಾಮಪ್ರಕಾಶ್ ತಿಳಿಸಿದ್ದಾರೆ.

ಏಪ್ರಿಲ್ ಆರಂಭದಿಂದಲೇ ಮಳೆಯ ಆರ್ಭಟ ಶುರುವಾಗಿದ್ದು, ಶೇ 80 ರಷ್ಟು ಮಳೆ ಏಪ್ರಿಲ್ನಲ್ಲಿಯೇ ಸುರಿದಿದೆ. ಬರದ ನಾಡು ಎಂದೇ ಖ್ಯಾತವಾಗಿರುವ ಅರಸೀಕೆರೆ ತಾಲ್ಲೂಕಿನಲ್ಲಿ ಏಪ್ರಿಲ್ನಲ್ಲಿ 10.5 ಸೆಂ.ಮೀ. ಮಳೆಯಾಗಿರುವುದು ವಿಶೇಷ.

ಪೂರ್ವ ಮುಂಗಾರು ಉತ್ತಮವಾಗಿರುವುದರಿಂದ ಜೋಳ, ಕಬ್ಬು, ಶುಂಠಿ ಸೇರಿದಂತೆ ತರಕಾರಿ ಬೆಳೆಗಳ ಬಿತ್ತನೆಗೆ ಪೂರಕ ವಾತಾವರಣ ನಿರ್ಮಾಣವಾಗಿದೆ. ಅಲ್ಲದೇ ಈ ಅವಧಿಯಲ್ಲಿ ಕಾಫಿ ತೋಟಗಳಿಗೆ ಅಗತ್ಯವಾಗಿದ್ದ ನೀರು ಲಭ್ಯವಾದಂತಾಗಿದೆ.

‘ಏಪ್ರಿಲ್, ಮೇ ತಿಂಗಳಲ್ಲಿ ಕಾಫಿ ಗಿಡಗಳಲ್ಲಿ ಹೂವು ಅರಳಿ, ಕಾಯಿ ಕಟ್ಟುವ ಕಾಲ. ಈ ಸಂದರ್ಭದಲ್ಲಿ ಮಳೆಯ ಅವಶ್ಯಕತೆ ಹೆಚ್ಚಿರುತ್ತದೆ. ಕೆರೆ ಹಾಗೂ ಹೊಳೆ ಸೌಲಭ್ಯ ಇರುವ ತೋಟಗಳಿಗೆ ಮಳೆ ನೀರಿನ ಅವಶ್ಯಕತೆ ಇರುವುದಿಲ್ಲ. ಆದರೆ ಮಳೆಯನ್ನೇ ಆಶ್ರಯಿಸಿರುವ ತೋಟಗಳಿಗೆ ಈ ಬಾರಿ ಪೂರ್ವ ಮುಂಗಾರು ಮಳೆ ವರದಾನವಾಗಿದೆ’ ಎಂದು ಹೆಗ್ಗೊವೆಯ ಕಾಫಿ ಬೆಳೆಗಾರ ಪ್ರೀತಂ ಹೇಳುತ್ತಾರೆ.

‘ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಇದರಿಂದ ಜಾನುವಾರುಗಳಿಗೆ ಮೇವು ಹಾಗೂ ನೀರಿನ ಕೊರತೆ ನೀಗಿದಂತಾಗಿದೆ. ಇನ್ನು ಮುಂಗಾರು ಹಂಗಾಮಿನ ಮಳೆ ಉತ್ತಮವಾಗಿ ಸುರಿದರೆ, ಈ ಬಾರಿ ಉತ್ತಮ ಬೆಳೆ ಪಡೆಯಬಹುದು’ ಎನ್ನುತ್ತಾರೆ ಸಾಲಗಾಮೆ ರೈತ ಶಿವಣ್ಣ.

ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದು ಮುಂಗಾರು ಮಳೆಯೂ ಚೆನ್ನಾಗಿ ಬರಲಿದೆ ಎನ್ನುವ ಮುನ್ಸೂಚನೆ ಇದೆ. ರೈತರಿಗೆ ಬೀಜ ಗೊಬ್ಬರದ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ.
ಸಿ.ಸತ್ಯಭಾಮಾ ಜಿಲ್ಲಾಧಿಕಾರಿ

ಆತಂಕ ನಿವಾರಿಸಿದ ಹೇಮಾವತಿ ಕಳೆದ ಬಾರಿ ಸುರಿದ ಧಾರಾಕಾರ ಮಳೆಯಿಂದಾಗಿ ಗೊರೂರಿನ ಹೇಮಾವತಿ ಜಲಾಶಯ ಭರ್ತಿಯಾಗಿದ್ದು ಈ ಬಾರಿಯ ಬೇಸಿಗೆಯಲ್ಲಿ ಆವರಿಸಿದ್ದ ಆತಂಕ ನಿವಾರಣೆಯಾಗಿದೆ. ‘ಕಳೆದ ಬಾರಿಗೆ ಹೋಲಿಸಿದರೆ ಹೇಮಾವತಿ ಜಲಾಶಯದಲ್ಲಿ 20 ಅಡಿಗಳಷ್ಟು ಅಧಿಕ ನೀರಿನ ಸಂಗ್ರಹವಿದ್ದು ಬೇಸಿಗೆ ಕಳೆಯುವವರೆಗೆ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ’ ಎಂದು ಹೇಮಾವತಿ ಅಣೆಕಟ್ಟು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅರುಣ್ ತಿಳಿಸಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 2878.97 ಅಡಿಗಳಷ್ಟಿದ್ದ ನೀರಿನ ಪ್ರಮಾಣ ಈ ಬಾರಿ 2899 ಅಡಿ ಇದೆ. ಕಳೆದ ಬಾರಿ 9.247 ಟಿಎಂಸಿ ನೀರಿನ ಸಂಗ್ರಹವಿದ್ದು ಈ ಬಾರಿ 19.120 ಟಿಎಂಸಿಗಳಷ್ಟು ನೀರಿನ ಸಂಗ್ರಹವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.