ಹಿರೀಸಾವೆ: ಸುತ್ತಿಗೆ, ಲಾಂಗ್‌ನಿಂದ ಹೊಡೆದು ಯುವಕನ ಕೊಲೆ

ಹಿರೀಸಾವೆ: ಹೋಬಳಿಯ ಚೋಳಂಬಳಿಯ ವೆಂಕಟರಮಣ ಅರಳಿಕಟ್ಟೆ ವೃತ್ತದ ಬಳಿ ಶುಕ್ರವಾರ ರಾತ್ರಿ ಕಮರವಳ್ಳಿಯ ಸುದೀಪ (25) ಎಂಬುವರ ತಲೆಗೆ ಸುತ್ತಿಗೆ ಹಾಗೂ ಲಾಂಗ್‌ನಿಂದ ಹೊಡೆದು ಕೊಲೆ ಮಾಡಲಾಗಿದೆ.
ಸುದೀಪ ಸ್ನೇಹಿತ ಮಂಜುನಾಥ್ ಜೊತೆ ಹಿರೀಸಾವೆಯಿಂದ ಸ್ವಗ್ರಾಮಕ್ಕೆ ಬೈಕ್‌ನಲ್ಲಿ ಬರುವಾಗ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದ್ದು, ಬೈಕ್ ಕೆಳಗೆ ಬಿದ್ದಿದೆ. ಕಾರಿನಿಂದ ಇಳಿದ ಮೂವರು ದುಷ್ಕರ್ಮಿಗಳು, ಓಡಿ ಹೋಗುವಂತೆ ಮಂಜುನಾಥ್ ಅವರಿಗೆ ಸೂಚಿಸಿದ್ದಾರೆ. ಸುದೀಪ ತಲೆಗೆ ಸುತ್ತಿಗೆ ಮತ್ತು ಲಾಂಗ್‌ನಿಂದ ಹೊಡೆದು ಕೊಲೆ ಮಾಡಿದ್ದಾರೆ’ ಎಂದು ಹಿರೀಸಾವೆ ಠಾಣೆ ಎಸ್ಐ ಶ್ರೀನಿವಾಸ್ ತಿಳಿಸಿದರು.
ಕಳೆದ ವರ್ಷ ಬೆಂಗಳೂರಿನ ರೌಡಿ ಲಿಂಗರಾಜು ಎಂಬಾತನನ್ನು ಕಮರವಳ್ಳಿಯ ತೋಟದ ಮನೆಯಲ್ಲಿ ಕೊಲೆ ಮಾಡಲಾಗಿತ್ತು. ಲಿಂಗರಾಜು ತೋಟದ ಮನೆಯಲ್ಲಿರುವ ಮಾಹಿತಿಯನ್ನು ಸುದೀಪ ಕೊಲೆ ಆರೋಪಿಗಳಿಗೆ ತಿಳಿಸಿದ್ದರು. ಈ ಪ್ರಕರಣದಲ್ಲಿ 10ನೇ ಆರೋಪಿಯಾಗಿದ್ದ ಸುದೀಪ 6 ತಿಂಗಳು ಜೈಲಿನಲ್ಲಿದ್ದರು. ಮೇ 12ರಂದು ಪ್ರಕರಣ ಖುಲಾಸೆಯಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.