ಹಾಸನ: ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಜಿಲ್ಲೆಯಲ್ಲಿ ₹ 104 ಕೋಟಿ ಮೊತ್ತದ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ಪ್ರಸ್ತಾವನೆ ಸಲ್ಲಿಸಿದರೂ ಇದುವರೆಗೂ ಪರಿಹಾರ ಹಣ ಬಿಡುಗಡೆಯಾಗಿಲ್ಲ ಎಂದು ಶಾಸಕ ಎಚ್.ಡಿ.ರೇವಣ್ಣ ದೂರಿದರು.

ಜಿಲ್ಲೆಯಲ್ಲಿ 8245 ಎಕರೆಯಲ್ಲಿ ತರಕಾರಿ, 1480 ಎಕರೆ ವ್ಯಾಪ್ತಿಯಲ್ಲಿ ವಿವಿಧ ಹಣ್ಣು ಬೆಳೆ, 342 ಎಕರೆಯಲ್ಲಿ ಹೂವು ಬೆಳೆಯಲಾಗಿದ್ದು, ಕೊರೊನಾ ಲಾಕ್ಡೌನ್ನಿಂದ ಸಾರಿಗೆ ಸಂಪರ್ಕ, ಮಾರುಕಟ್ಟೆ ಹಾಗೂ ಉತ್ತಮ ಬೆಲೆ ಸಿಗದೆ ನಷ್ಟವುಂಟಾಗಿದೆ. ಆದರೆ, ಎನ್ಡಿಆರ್ಎಫ್ ಮಾರ್ಗಸೂಚಿ ಅನ್ವಯ ₹ 19.23 ಕೋಟಿ ಎಂದು ಪರಿಗಣಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

30 ರೈತರಿಗೆ ₹ 7.59 ಲಕ್ಷ ಮಾತ್ರ ಬಿಡುಗಡೆಯಾಗಿದೆ. ಅರ್ಹ ಫಲಾನುಭವಿಗಳು ಪರಿಹಾರಕ್ಕಾಗಿ ಕಚೇರಿಯಲ್ಲಿ ಪ್ರಶ್ನಿಸಿದರೆ ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಜೋಡಣೆಯಾಗಿಲ್ಲ ಎಂಬ ಉತ್ತರ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿಸಬೇಕೆಂಬ ಮನವಿಗೆ ಸ್ಪಂದಿಸಿಲ್ಲ. ಮಧ್ಯವರ್ತಿಗಳನ್ನು ರೈತರಿಂದ ನೇರವಾಗಿ ಖರೀದಿಸಿದರೆ ಅನುಕೂಲವಾಗುತ್ತದೆ. ಕೆಎಂಎಫ್ ಸಹ ಕ್ವಿಂಟಾಲ್ಗೆ ₹ 1750 ನಂತೆ ಮೆಕ್ಕೆಜೋಳ ಪಡೆಯುವಂತೆ ಆದೇಶಿಸಬೇಕು. ಹಾಸನದಲ್ಲಿ ಈ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ತಿಳಿಸಿದರು.

ಕೊರೊನಾದಿಂದ ಹಾಲಿನ ಉಪಉತ್ಪನ್ನಗಳು ಮಾರಾಟವಾಗದೆ ತೊಂದರೆಯಾಗಿದೆ. ಹಾಸನ ಹಾಲು ಒಕ್ಕೂಟದಲ್ಲಿ ₹ 150 ಕೋಟಿ ಮೊತ್ತದ ಉತ್ಪನ್ನಗಳು ದಾಸ್ತಾನಿದೆ. 4200 ಟನ್ ಹಾಲಿನ ಪೌಡರ್ ಉಳಿದಿದೆ. ನಿತ್ಯ 11.30 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು ಬೇಡಿಕೆ ಕುಸಿದಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.