ಭಾನುವಾರ, ಮೇ 22, 2022
27 °C

ಏಕಪಕ್ಷೀಯ ತೀರ್ಮಾನ ಸರಿಯಲ್ಲ: ಪ್ರೀತಂ ಗೌಡ ವಿರುದ್ಧ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ಹೇಮ ಗಂಗೋತ್ರಿ ಬಳಿ ಟ್ರಕ್‌ ಟರ್ಮಿನಲ್‌ ನಿರ್ಮಾಣದಿಂದ ಆಗುವ ತೊಂದರೆ ಬಗ್ಗೆ ತಿಳಿಯದ ಶಾಸಕ ಪ್ರೀತಂ ಗೌಡ ಅವರು ಏಕ ಪಕ್ಷೀ ಯವಾಗಿ ಕಾಮಗಾರಿ ನಡೆಸಲು ಮುಂದಾಗಿರು ವುದು ಸರಿಯಲ್ಲ’ ಎಂದು ಕೆಪಿಸಿಸಿ ಸದಸ್ಯ ಎಚ್.ಕೆ.ಮಹೇಶ್ ಕಿಡಿಕಾರಿದರು.

‘ರಾಜ್ಯದ ವಿವಿಧೆಡೆಗಳಿಂದ ನೂರಾರು ಟ್ರಕ್‌ಗಳು ಬಂದು ನಿಲ್ಲುತ್ತವೆ. ಅವರಿಗೆ ಒಂದೊಂದು ರೀತಿ ಚಟಗಳಿರುತ್ತವೆ. ಕೆಟ್ಟ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ವಿರೋಧ ವ್ಯಕ್ತವಾಗಿದೆ. ಆದರೆ, ಶಾಸಕರು ತಮಗೆ ಅನ್ನಿಸಿದ್ದನ್ನು ಮಾಡಲು ಹೊರಟಿದ್ದಾರೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಮೂರು ಎಕರೆ ಪ್ರದೇಶದಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಲು ಸಾಧ್ಯವೇ? ರಾತ್ರೋರಾತ್ರಿ ತಾಲ್ಲೂಕು ಕಚೇರಿ ಕಟ್ಟಡ ಏಕೆ ನೆಲಸಮ ಮಾಡಬೇಕಿತ್ತು. ಜನರ ವಿರೋಧ ಇರುವುದರಿಂದ ಟರ್ಮಿನಲ್ ಮಾಡು ವುದು ಸರಿಯಲ್ಲ. ಹಾಸನ ವಿಧಾನಸಭಾ ಕ್ಷೇತ್ರವನ್ನು ಶಾಸಕರಿಗೆ ಬರೆದು ಕೊಟ್ಟಿಲ್ಲ. ಟ್ರಕ್‌ ಟರ್ಮಿನಲ್ ವಿಚಾರದಲ್ಲಿ ಸ್ಥಳೀಯರು ರೇವಣ್ಣ ಅವರ ಸಹಾಯ ಕೇಳಿದ್ದರಿಂದ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು’ ಎಂದು ತಿಳಿಸಿದರು.

‘ಈ ವಿಚಾರದಲ್ಲಿ ಜಿಲ್ಲಾಧಿಕಾರಿ ಅವರು ಯಾರ ಮಾತು ಕೇಳುತ್ತಾರೆ. ಎರಡೂ ಪಕ್ಷದವರು ಸೇರಿ ಹಾಸನದ ಮಾನ ಮರ್ಯಾದೆ ತೆಗೆದಿದ್ದಾರೆ. ಟರ್ಮಿನಲ್‌ ಜಾಗವನ್ನು ತಹಶೀಲ್ದಾರ್‌ರ ಹೆಸರಿಗೆ ಮಾಡುವುದು ಬಿಟ್ಟು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೆಸರಿಗೆ ಮಾಡಿದ ಉದ್ದೇಶ ಏನು’ ಎಂದು ಪ್ರಶ್ನಿಸಿದರು.

‘ಶಾಸಕ ಎಚ್.ಡಿ.ರೇವಣ್ಣ ಅವರು ಹಾಸನದಲ್ಲಿ ಚುನಾವಣೆಗೆ ನಿಲ್ಲುತ್ತೇನೆ ಎಂದು ಯಾವತ್ತೂ ಹೇಳಿಲ್ಲ. ಆದರೆ, ಶಾಸಕರು ತನ್ನ ವಿರುದ್ಧ ರೇವಣ್ಣ ಸ್ಪರ್ಧಿಸಿದರೆ 50  ಸಾವಿರ ಮತಗಳ ಅಂತರದಿಂದ ಗೆಲ್ಲುವುದಾಗಿ ಹೇಳಿರುವುದು ದರ್ಪದ ಮಾತು. ಅದಕ್ಕಿಂತ ಕಡಿಮೆ ಮತ ಬಂದರೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಗೆ ಹೋಗುತ್ತೇನೆ ಎನ್ನುವುದು ಯಾವ ರೀತಿಯ ವರ್ತನೆ. ತಾಕತ್ತಿದ್ದರೆ ಶಾಸಕರೇ ಹೊಳೆನರಸೀಪುರಕ್ಕೆ ಹೋಗಿ ನಿಂತು, ತನು, ಮನ, ಧನ ಎಲ್ಲವನ್ನು ಖರ್ಚು ಮಾಡಲಿ’ ಎಂದು ಸವಾಲು ಹಾಕಿದರು. 

ಗೋಷ್ಠಿಯಲ್ಲಿ ಮುಖಂಡ ಬಾಗೂರು ಮಂಜೇಗೌಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು