ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಸಿ ಕಚೇರಿ ಎದುರು ಹೇಮಾವತಿ, ಯಗಚಿ, ವಾಟೆಹೊಳೆ ಮುಳುಗಡೆ ಸಂತ್ರಸ್ತರ ಪ್ರತಿಭಟನೆ

Last Updated 4 ಆಗಸ್ಟ್ 2021, 4:34 IST
ಅಕ್ಷರ ಗಾತ್ರ

ಹಾಸನ: ‘ಕಾನೂನು ಬಾಹಿರವಾಗಿ ರೈತರಿಂದ ಮುಚ್ಚಳಿಕೆ ಬರೆಸಿಕೊಳ್ಳುತ್ತಿರುವಹೇಮಾವತಿ ಜಲಾಶಯ ಯೋಜನೆಯ ವಿಶೇಷ ಭೂ–ಸ್ವಾಧೀನಾಧಿಕಾರಿ (ಎಸ್‌ಎಲ್‌ಎಒ) ಮಂಜುನಾಥ್‌ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಹೇಮಾವತಿ, ಯಗಚಿ ಮತ್ತು ವಾಟೆಹೊಳೆ ಯೋಜನೆ ಮುಳುಗಡೆ ಸಂತ್ರಸ್ತರಸಂಘದ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಬೆಕ್ಕನಹಳ್ಳಿ ನಾಗರಾಜ್‌ ಮಾತನಾಡಿ, ‘ಹೇಮಾವತಿ, ಯಗಚಿ ಮತ್ತು ವಾಟೆಹೊಳೆ ಯೋಜನೆ ವಿಶೇಷ ಭೂ ಸ್ವಾಧೀನಾಧಿಕಾರಿ ಮಂಜುನಾಥ್‌ ಪ್ರಾಥಮಿಕ ಪೊಲೀಸ್‌ ತನಿಖಾಧಿಕಾರಿಗಳ ವರದಿಯ ಆಧಾರದ ಮೇಲೆ, 9 ಅನುಬಂಧಗಳ ಪಟ್ಟಿಯಲ್ಲಿನ ಲೋಪದೋಷಗಳ ಬಗ್ಗೆ ಸೂಕ್ತ ಮಾಹಿತಿ ಪಡೆಯದೇ ನೈಜ ಸಂತ್ರಸ್ತರಭೂ–ಮಂಜೂರಾತಿಯನ್ನು ವಜಾ ಮಾಡಲಾಗಿದೆ ಎಂಬ ವದಂತಿ ಹಬ್ಬಿಸುವ ರೀತಿಯಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ’ ಎಂದು ಆರೋಪಿಸಿದರು.

‘ಈಗಾಗಲೇ ದಾಖಲೆಗಳು ತನಿಖಾ ಹಂತದಲ್ಲಿದ್ದರೂ ಪೊಲೀಸ್‌ ತನಿಖಾಧಿಕಾರಿಗಳನ್ನು ವಾದಿಗಳನ್ನಾಗಿ ಮಾಡಿ ನೈಜ ಸಂತ್ರಸ್ತರನ್ನುಹಾಗೂ ಮಂಜೂರುದಾರರನ್ನು ಪ್ರತಿವಾದಿ ಗಳನ್ನಾಗಿ ಮಾಡಿಕೊಂಡು ಸಂತ್ರಸ್ತರಿಗೆ ನೋಟಿಸ್‌ ಜಾರಿ ಮಾಡಿ ರೈತರನ್ನು ಬೆದರಿಸಿ ಹಾಗೂ ಮುಂಗಡ ಮುದ್ರಿತ ಹಾಳೆ ಮತ್ತು ಖಾಲಿ ಹಾಳೆಗಳಲ್ಲಿ ಭೂ ಮಂಜೂರಾತಿ ರದ್ಧತಿಯ ಬಗ್ಗೆ ರೈತರಿಗೆ ತಿಳಿಯದ ರೀತಿ ಮುಚ್ಚಳಿಕೆಬರೆಸಿಕೊಂಡಿದ್ದಾರೆ’ ಎಂದು ದೂರಿದರು.

‘ಮಂಜೂರಾತಿಯ ಲೋಪ– ದೋಷಗಳ ಬಗ್ಗೆ ತನಿಖೆ ನಡೆಯುತ್ತಿ ದ್ದರೂ, ಯಾವ ಮಂಜೂರಾತಿ ಕ್ರಮಬದ್ಧ ಹಾಗೂ ಕಾನೂನು ಬಾಹಿರ ಎಂಬ ವರದಿ ಇನ್ನೂ ಬಾರದಿದ್ದರೂ ಹಿಂದಿನ ವಿಶೇಷ ಭೂ ಸ್ವಾಧೀನಾಧಿಕಾರಿ ಮಾಡಿರುವ ಮಂಜೂರಾತಿಯನ್ನು ಕಾನೂನು ಬಾಹಿರ ರೀತಿಯಲ್ಲಿ ಇಂದು ಕಾರ್ಯ ನಿರ್ವಹಿಸುತ್ತಿರುವ ವಿಶೇಷ ಭೂಸ್ವಾಧೀನಾಧಿಕಾರಿ ವಜಾ ಮಾಡುವ ಹುನ್ನಾರ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.

‘40 ವರ್ಷದಿಂದ ಭೂ ಮಂಜೂ ರಾತಿಗಾಗಿ ಕಚೇರಿ ಅಲೆದಾಡಿ ರುವನಮಗೆ 2015-16ನೇ ಸಾಲಿನಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಯವರು ನೈಜ ಫಲಾನುಭವಿಗಳಿಗೆ ಜಮೀನು ಮಂಜೂರು ಮಾಡಿದ್ದಾರೆ. ಕೆಲವು ಮಂಜೂರಾತಿ ಮರು ಮಂಜೂರಾತಿ ಗಳಾಗಿರುತ್ತವೆ. ಅವುಗಳನ್ನು ವಜಾ ಮಾಡಿ ಲೋಪ– ದೋಷಗಳನ್ನು ಸರಿಪಡಿಸಿ ನೈಜ ಫಲಾನುಭವಿಗಳಿಗೆ ಮಂಜೂರಾತಿಯನ್ನು ಮುಂದುವರಿಸ ಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹೇಮಾವತಿ, ಯಗಚಿ ಮತ್ತು ವಾಟೆಹೊಳೆ ಯೋಜನೆ ಮುಳುಗಡೆ ಸಂತ್ರಸ್ತರಸಂಘದ ಅಧ್ಯಕ್ಷ ಅಣ್ಣೇಗೌಡ, ಪದಾಧಿಕಾರಿಗಳಾದ ಕೆ.ಬಿ. ಗಂಗಾಧರ್‌, ಸಿ.ಕೆ.ಸಣ್ಣೇಗೌಡ, ಶಾಂತೇಗೌಡ, ವೈ.ಡಿ.ಚನ್ನಯ್ಯ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT