ಜಿಲ್ಲೆಯ ಸಕಲೇಶಪುರ–ಬಾಳ್ಳುಪೇಟೆ ಮಧ್ಯೆ ಆಚಂಗಿ ಬಳಿ ಆಗಸ್ಟ್ 9ರಂದು ಮಧ್ಯರಾತ್ರಿ ಹಳಿಗಳ ಮೇಲೆ ಮಣ್ಣು ಬಿದ್ದು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಬುಧವಾರ ಮಧ್ಯಾಹ್ನ ಯಶವಂತಪುರ–ಕಾರವಾರ ರೈಲು ಈ ಮಾರ್ಗದಲ್ಲಿ ಸಂಚರಿಸಿದೆ. ಉಳಿದವು ವೇಳಾಪಟ್ಟಿಯಂತೆ ಸಂಚರಿಸಲಿವೆ. ಸದ್ಯಕ್ಕೆ ಪ್ರಯಾಣಿಕ ರೈಲುಗಳಿಗೆ ಮಾತ್ರ ಅವಕಾಶ ನೀಡಿದ್ದು, 10 ಕಿ.ಮೀ. ವೇಗದಲ್ಲಿ ಸಂಚರಿಸಲು ಸೂಚಿಸಲಾಗಿದೆ.