ಗುರುವಾರ , ಜೂನ್ 24, 2021
28 °C

ಹಾಸನ ಜಿಲ್ಲೆಯ ಹಿರೇಸಾವೆಯಲ್ಲಿ ವಿದ್ಯುತ್ ಆಘಾತ: ನವಿಲು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರೀಸಾವೆ: ವಿದ್ಯುತ್ ಆಘಾತಕ್ಕೊಳಗಾಗಿ ಹೆಣ್ಣು ನವಿಲೊಂದು ಹಿರೀಸಾವೆಯಲ್ಲಿ ಶುಕ್ರವಾರ ಮೃತಪಟ್ಟಿದೆ.

ಎರಡು ಹೆಣ್ಣು ನವಿಲುಗಳು ಆಹಾರ ಹುಡುಕಿಕೊಂಡು ರೈಲ್ವೆ ಹಳಿಗಳ ಪಕ್ಕ ಬಂದಿದ್ದವು. ಒಂದು ವರ್ಷದ ಹೆಣ್ಣು ನವಿಲು ವಿದ್ಯುತ್ ಪರಿವರ್ತಕದ ಪಕ್ಕದಲ್ಲಿ ಹಾರುವಾಗ ವಿದ್ಯುತ್ ತಂತಿಗೆ ಸ್ಪ‍ರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದೆ. ವಿಷಯ ತಿಳಿದ ಹಿರೀಸಾವೆ ಠಾಣೆ ಪೊಲೀಸರು ಮತ್ತು ಚನ್ನರಾಯಪಟ್ಟಣ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಡಾ.ಸುಬ್ರಹ್ಮಣ್ಯ ಅವರು ನವಿಲಿನ ಮರಣೋತ್ತರ ಪರೀಕ್ಷೆ ನಡೆಸಿದರು. ಅರಣ್ಯ ಉಪ ಸಂರಕ್ಷಣಾಧಿಕಾರಿ ವಿಶ್ವನಾಥ್, ಅರಣ್ಯ ರಕ್ಷಕ ಕರೀಗೌಡ ಅವರು ನವಿಲಿನ ಅಂತ್ಯಸಂಸ್ಕಾರ ನೆರವೇರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.