ಅರಸೀಕೆರೆ: ರೋಗ ಮತ್ತು ನಿರ್ವಹಣೆಯಿಂದ ಬೆಳೆ ರಕ್ಷಣೆ ಮಾಡಿಕೊಂಡು ದಾಳಿಂಬೆ ಕೃಷಿಯಲ್ಲಿ ಲಾಭ ಗಳಿಸುವುದೇ ರೈತರಿಗೆ ದೊಡ್ಡ ಸಮಸ್ಯೆಯಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಇಲ್ಲೊಬ್ಬ ರೈತರು ವೈಜ್ಞಾನಿಕವಾಗಿ ದಾಳಿಂಬೆ ಬೆಳೆದು ಅಧಿಕ ಇಳುವರಿ ಪಡೆಯುವ ಮೂಲಕ ಮಾದರಿಯಾಗಿದ್ದಾರೆ.

ತಾಲ್ಲೂಕಿನ ಕೊಮ್ಮಾರಘಟ್ಟ ಗ್ರಾಮದ ಕೃಷಿಕ ಚಿದಾನಂದ್, 2 ಎಕರೆಯಲ್ಲಿ 20 ಟನ್ ದಾಳಿಂಬೆ ಫಸಲು ಪಡೆದಿದ್ದಾರೆ. ಪ್ರತಿ ಕೆ.ಜಿ.ಗೆ ₹ 180 ರಿಂದ ₹ 200 ದರದಲ್ಲಿ ಮಾರಾಟ ಮಾಡಿದ್ದು, ಲಾಭ ಪಡೆದಿದ್ದಾರೆ. ದಾಳಿಂಬೆ ಕೃಷಿಯೂ ರೈತನಿಗೆ ಉತ್ತಮ ಆದಾಯ ತಂದುಕೊಡಬಲ್ಲದು ಎಂಬುದನ್ನು ನಿರೂಪಿಸಿದ್ದಾರೆ.

ಕೆಲ ದಿನಗಳಿಂದ ಮೋಡ ಮುಸುಕಿದ ವಾತಾವರಣ ಹಾಗೂ ಮಳೆಯಿಂದಾಗಿ ದಾಳಿಂಬೆ ಬೆಳೆಗೆ ಅಂತ್ರಗ್ನೋಸ್, ಫೈಟಾಪ್ತರ, ಸ್ಕ್ಯಾಬ್ ಬ್ಯಾಕ್ಟೀರಿಯಲ್ ಬ್ಲೈಟ್, ದುಂಡಾಣು ಸೇರಿದಂತೆ ಹಲವು ರೋಗಗಳು ಕಾಡುವ ಸಾಧ್ಯತೆ ಹೆಚ್ಚಿದೆ. ಬೆಳೆ ನಷ್ಟವಾಗುವ ಸಾಧ್ಯತೆ ಇದ್ದರೂ, ತಾಲ್ಲೂಕಿನಲ್ಲಿ ಹಲವು ರೈತರು ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ದಾಳಿಂಬೆ ಕೃಷಿಯಿಂದ ಲಾಭದಲ್ಲಿದ್ದಾರೆ ಎನ್ನುತ್ತಾರೆ ದಾಳಿಂಬೆ ಕೃಷಿಕರು.

ಹವಾಮಾನ ವೈಪರಿತ್ಯದ ನಡುವೆಯೂ ಬೆಳೆಗಾರರು ಶಿಲೀಂಧ್ರ ಹಾಗೂ ರೋಗನಾಶಕ ಔಷಧಗಳನ್ನು ಸಕಾಲಕ್ಕೆ ಸಿಂಪಡಿಸುವುದು ಸೂಕ್ತವಾಗಿದೆ. ನಿರ್ಲಕ್ಷ್ಯ ತೋರಿದಲ್ಲಿ ದಾಳಿಂಬೆಯಿಂದ ನಿರೀಕ್ಷಿತ ಲಾಭ ಗಳಿಸಲು ತೊಂದರೆ ಎದುರಾಗಲಿದೆ. ದಾಳಿಂಬೆಯಲ್ಲಿ ಪರಿಣತಿ ಪಡೆದವರನ್ನು ಸಂಪರ್ಕಿಸಿದರೆ ಪ್ರಯೋಜನವಾಗಲಿದೆ. ಆಧುನಿಕ ತಂತ್ರಜ್ಞಾನದ ಜೊತೆಗೆ ಸುಧಾರಿತ ಕ್ರಮಗಳನ್ನು ಅನುಸರಿಸಿದಲ್ಲಿ ಲಾಭ ದೊರೆಯಲಿದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು.

ದಾಳಿಂಬೆ ಬೆಳೆಯಲ್ಲಿ ಆಧುನಿಕ ತಂತ್ರಜ್ಞಾನ ಸುಧಾರಿತ ಕ್ರಮ ಅನುಸರಿಸಿದಲ್ಲಿ ಹೆಚ್ಚಿನ ಆದಾಯ ಗಳಿಸಲು ಸಾಧ್ಯ. ಮಾಹಿತಿಗೆ ತೋಟಗಾರಿಕಾ ಇಲಾಖೆ ಕಚೇರಿಗೆ ಭೇಟಿ ನೀಡಬಹುದು
ಸೀಮಾ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ

ಹಲವಾರು ರೈತರ ಜೊತೆಗೆ ಸಮಾಲೋಚನೆ ನಡೆಸಿ ದಾಳಿಂಬೆಗೆ ಅಗತ್ಯವಿರುವ ಉಪಚಾರವನ್ನು ಕಾಲಕಾಲಕ್ಕೆ ಮಾಡಲಾಗುತ್ತಿದೆ. ಇದರಿಂದ ಫಲಸು ಉತ್ತಮವಾಗಿದೆ
ಚಿದಾನಂದ್ ಕೃಷಿಕ

ಸೂಕ್ತ ಸಮಯದಲ್ಲಿ ರೋಗನಾಶಕ ಶಿಲೀಂಧ್ರ ನಾಶಕ ಉಪಯೋಗಿಸಿದಲ್ಲಿ ದಾಳಿಂಬೆ ಬೆಳೆಯಲ್ಲಿ ಅಧಿಕ ಇಳುವರಿ ಪಡೆದು ಉತ್ತಮ ಆದಾಯ ನಿರೀಕ್ಷಿಸಬಹುದಾಗಿದೆ
ಅಕ್ಷಯ್ ಚಂದನ್ ಸಮರ್ಥ ರೈತ ಮಿತ್ರ ಆಗ್ರೋ ಏಜೆನ್ಸಿ ವ್ಯವಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.