ಅಭಿಪ್ರಾಯ ಹೇರುವ ಪ್ರವೃತ್ತಿ ಬೇಡ
ಇತ್ತೀಚಿನ ತಾಂತ್ರಿಕ ಯುಗದಲ್ಲಿ ಮೊಬೈಲ್ ಫೋನ್ ಹೊಂದಿದವರೆಲ್ಲ ಪತ್ರಕರ್ತರಾಗಿದ್ದಾರೆ. ಸುದ್ದಿಯ ವಿಶ್ಲೇಷಣೆ ಮಾಡದೇ ಸಾಮಾಜಿಕ ಜಾಲತಾಣದಲ್ಲಿ ಬಿತ್ತರ ಮಾಡುವುದು ಸಾಮಾನ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು. ಸುದ್ದಿಗಳ ಬದಲಾಗಿ ಅಭಿಪ್ರಾಯಗಳನ್ನು ಹೇರುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಮೊಬೈಲ್ ಮೂಲಕ ತಮಗೆ ಬೇಕಾದ ವರದಿ ಬಿತ್ತರಿಸಲಾಗುತ್ತಿದ್ದು ಉತ್ತಮ ಪತ್ರಿಕೋದ್ಯಮಕ್ಕೆ ಇದು ದೊಡ್ಡ ಬೆದರಿಕೆಯಾಗಿದೆ ಎಂದು ಎಚ್ಚರಿಸಿದರು. ಶಾಸಕ ಶಿವಲಿಂಗೇಗೌಡರ ಕಾರ್ಯವೈಖರಿ ಶ್ಲಾಘಿಸಿದ ಜಿಲ್ಲಾಧಿಕಾರಿ ಸದನದಲ್ಲಿ ಗ್ರಾಮೀಣ ಸೊಗಡಿನಲ್ಲಿಯೇ ಮಾತನಾಡುತ್ತಾರೆ. ವಿಶ್ಲೇಷಣೆ ಮಾಡುವ ಅವರ ಮಾತುಗಳು ನಿಜಕ್ಕೂ ವಿಶೇಷ ಎಂದರು.