ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಹಾಸನ ಜಿಲ್ಲೆಯಲ್ಲಿ ತಗ್ಗಿದ ಮಳೆ ಆರ್ಭಟ- ನೀರಲ್ಲಿ ಕೊಚ್ಚಿ ಹೋದ ಭತ್ತ ಸಸಿ ಮಡಿಗಳು

Last Updated 24 ಜುಲೈ 2021, 15:39 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಶನಿವಾರ ಮಳೆಯ ಆರ್ಭಟ ತಗ್ಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

ಆಲೂರು ಮತ್ತು ಹೆತ್ತೂರು ಹೋಬಳಿಯ ಮಾಗೇರಿ ಗ್ರಾಮದಲ್ಲಿ ಮನೆ ಗೋಡೆ ಕುಸಿದಿವೆ. ಹಲವು ಗ್ರಾಮಗಳಲ್ಲಿ ಹಳ್ಳಗಳು ಉಕ್ಕಿ ಹರಿದಿದ್ದರಿಂದ ರಸ್ತೆ ಸಂಪರ್ಕ ಕಡಿದುಕೊಂಡಿದ್ದು, ದುರಸ್ತಿ ಕಾರ್ಯ ನಡೆಯುತ್ತಿದೆ.

ವರುಣನ ಅಬ್ಬರ ಕಡಿಮೆಯಾದರೂ ಹೇಮಾವತಿ ನದಿ ಮೈ ದುಂಬಿ ಹರಿಯುತ್ತಿದ್ದು, ಸಕಲೇಶಪುರ ಪಟ್ಟಣದ ಹೊಳೆಮಲ್ಲೇಶ್ವರ ದೇವಾಲಯದ ಮೆಟ್ಟಿಲು ಜಲಾವೃತಗೊಂಡಿದೆ.

ಮಲೆನಾಡು ಭಾಗದಲ್ಲಿ ಅತಿವೃಷ್ಟಿಗೆ ಭಾರಿ ಪ್ರಮಾಣದಲ್ಲಿ ಬೆಳೆನಾಶ ಸಂಭವಿಸಿದೆ.ಭತ್ತದ ಗದ್ದೆಗಳಲ್ಲಿ ನೀರು ತುಂಬಿಕೊಂಡಿದೆ. ಈಗಾಗಲೇ ನಾಟಿ ಮಾಡಿರುವ ಭತ್ತದ ಸಸಿ ಕೊಳೆಯುವ ಭಯ ರೈತರನ್ನು ಆವರಿಸಿದೆ. ಕಾಫಿ ತೋಟದ ಕೆಲಸಗಳಿಗೆ ನಾಲ್ಕು ದಿನಗಳಿಂದಬಿಡುವು ನೀಡಲಾಗಿದ್ದು, ತೋಟಗಳಲ್ಲಿ ಮರ ಬಿದ್ದಿರುವುದರಿಂದ ಬೆಳೆಗಾರರು ಸಾಕಷ್ಟು ನಷ್ಟಅನುಭವಿಸುತ್ತಿದ್ದಾರೆ. ಕೆಲವು ಕಾಫಿ ತೋಟಗಳಲ್ಲಿ ಕಾಫಿ ಕಾಯಿ ಉದುರುತ್ತಿದ್ದು, ಬೆಳೆಗಾರರಆತಂಕಕ್ಕೆ ಕಾರಣವಾಗಿದೆ.

ಹಾಸನ, ಸಕಲೇಶಪುರ, ಅರಸೀಕೆರೆ, ಬೇಲೂರು, ಅರಕಲಗೂಡು, ನುಗ್ಗೇಹಳ್ಳಿ, ಕೊಣನೂರು ಭಾಗದಲ್ಲಿ ತುಂತುರು ಮಳೆಯಾಗಿದೆ. ಹೆತ್ತೂರು, ಮಾಗೇರಿ, ವನಗೂರು ಭಾಗದಲ್ಲಿ ಧಾರಾಕಾರಮಳೆಯಾಗಿದೆ.

ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಜಲಾವೃತಗೊಂಡಿದ್ದು, ಬೆಳೆ ನಷ್ಟದ ಭೀತಿಎದುರಾಗಿದೆ. ಆಲೂರು ತಾಲ್ಲೂಕಿನ ಮಡಬಲು ಗ್ರಾಮದಚಂದ್ರಶೇಖರ್ ಅವರಿಗೆ ಸೇರಿದ ಶುಂಠಿ ಗದ್ದೆಗೆ ಶಂಕುತೀರ್ಥ ಕಟ್ಟೆ ಒಡೆದು ನೀರು ನುಗ್ಗಿದೆ.

ಜಲಾನಯನ ಪ್ರದೇಶದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಸಕಲೇಶಪುರ, ಆಲೂರು ಭಾಗದಲ್ಲಿ ವ್ಯಾಪಾಕವಾಗಿ ಮಳೆ ಸುರಿಯುತ್ತಿರುವುದರಿಂದ ಗೊರೂರಿನ ಹೇಮಾವತಿ ಜಲಾಶಯದಒಳ ಹರಿವು ಶನಿವಾರ34,175 ಕ್ಯುಸೆಕ್‌ ಗೆ ಏರಿಕೆಯಾಗಿತ್ತು. ನೀರು ಸಂಗ್ರಹ2914.29 ಅಡಿಗಳಿಷ್ಟಿದೆ. 37.103 ಟಿಎಂಸಿ ನೀರು‌ ಸಂಗ್ರಹ ಸಾಮರ್ಥ್ಯದ
ಅಣೆಕಟ್ಟೆಯಲ್ಲಿ ಸದ್ಯ 30.084 ಟಿಎಂಸಿ ನೀರು ಸಂಗ್ರಹ ಇದೆ.

ಹೇಮಾವತಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಒಳ ಹರಿವು ಹೆಚ್ಚುವ ಸಾಧ್ಯತೆ ಇದೆ.ಆದ್ದರಿಂದ ಯಾವುದೇ ಸಮಯದಲ್ಲಾದರೂ ನದಿಗೆ ಹೆಚ್ಚಿನ ಪ್ರಮಾಣದ ನೀರುಹೊರ ಬಿಡುವ ಸಾಧ್ಯತೆ ಇದೆ. ಹೇಮಾವತಿ ನದಿ ಪಾತ್ರ, ನದಿದಂಡೆ ಮತ್ತು ಆಸುಪಾಸಿನಲ್ಲಿವಾಸಿಸುವ ಎಲ್ಲ ನಿವಾಸಿಗಳು ಮುನ್ನೆಚ್ಚೆರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತಕ್ಷಣವೇತೆರಳಬೇಕು ಎಂದು ಹೇಮಾವತಿ ಯೋಜನಾ ವೃತ್ತದ ಅಧೀಕ್ಷಕ ಎಂಜಿನಿಯರ್‌ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT