ಮಂಗಳವಾರ, ಮೇ 24, 2022
22 °C

ಹಾಸನ: ಜಿಲ್ಲೆಯಲ್ಲಿ ದಿನವಿಡೀ ತುಂತುರು ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜಿಲ್ಲೆಯ ವಿವಿಧೆಡೆ ಸೋಮವಾರ ಉತ್ತಮ ಮಳೆಯಾಗಿದೆ. ಬೆಳಿಗ್ಗೆ ಆರಂಭಗೊಂಡ ಜಿಟಿಜಿಟಿ ಮಳೆ ನಿರಂತವಾಗಿ ಸುರಿಯುತ್ತಿದೆ.

ಹಾಸನ ನಗರ, ಸುತ್ತಮುತ್ತಲ ಪ್ರದೇಶಗಳಾದ ಸಾಲಗಾಮೆ, ಶಾಂತಿಗ್ರಾಮ ಗೊರೂರು, ಸಕಲೇಶಪುರ, ಹೆತ್ತೂರು, ಆಲೂರು, ಅರಕಲಗೂಡು, ಬೇಲೂರು, ಚನ್ನರಾಯಪಟ್ಟಣದಲ್ಲಿ ಆಗಾಗ್ಗೆ ಬಿಡುವು ನೀಡಿ ಸುರಿಯುತ್ತಿದೆ. ಭಾನುವಾರ ಹೆತ್ತೂರು ಭಾಗದಲ್ಲಿ ಜೋರು ಮಳೆ ಸುರಿದಿದೆ. ಶೀತ ಗಾಳಿ ಬೀಸುತ್ತಿರುವುದರಿಂದ ಚಳಿಯ ವಾತಾವರಣ ನಿರ್ಮಾಣವಾಗಿದೆ.

ಮಳೆಯ ನಡುವೆಯೇ ಜನರು ಅಗತ್ಯ ವಸ್ತುಗಳನ್ನು ಖರೀದಿಸಿದರು. ತರಕಾರಿ, ಹೂವು, ಹಣ್ಣು ವ್ಯಾಪಾರಕ್ಕೆ ಹೊಡೆತ ಬಿತ್ತು. ನಗರದ ರಸ್ತೆಗಳಲ್ಲಿ ನೀರು ನಿಂತು ಜನ ಸಂಚಾರಕ್ಕೆ ತೊಂದರೆ ಉಂಟಾಯಿತು. ಮಲೆನಾಡು ಭಾಗದ ಕಾಫಿ ತೋಟದಲ್ಲಿ ಕಾರ್ಮಿಕರು ಮಳೆಯ ನಡುವೆಯೇ ಕೆಲಸದಲ್ಲಿ ತೊಡಗಿದ್ದಾರೆ. ಭತ್ತದ ಸಸಿ ಮಡಿ ಮಾಡುವ ಕಾರ್ಯ ನಡೆಯುತ್ತಿದೆ.

ಹೆತ್ತೂರಿನಲ್ಲಿ 4.5 ಸೆ.ಮೀ ಮಳೆ: ಸೋಮವಾರ ಬೆಳಿಗ್ಗೆವರೆಗಿನ 24 ಗಂಟೆಯಲ್ಲಿ ದಾಖಲಾದ ಹೋಬಳಿವಾರು ಮಳೆ
ವರದಿ ಹೀಗಿದೆ. ಹಾಸನ ತಾಲ್ಲೂಕಿನ ಶಾಂತಿಗ್ರಾಮ 2ಮಿ.ಮೀ, ಸಾಲಗಾಮೆ 7.1 ಮಿ.ಮೀ,
ಗೊರೂರು 4.5 ಮಿ.ಮೀ, ಕಟ್ಟಾಯ 4.3ಮಿ.ಮೀ, ಕಸಬಾ 1.2 ಮಿ.ಮೀ, ಹಾಗೂ ದುದ್ದ 4
ಮಿ.ಮೀ ಮಳೆಯಾಗಿದೆ.

ಆಲೂರು ತಾಲ್ಲೂಕಿನ ಪಾಳ್ಯ 8.8 ಮಿ.ಮೀ, ಕುಂದೂರು 11.4 ಮಿ.ಮೀ, ಕೆ.ಹೊಸಕೋಟೆ
17.4 ಹಾಗೂ ಆಲೂರು 4 ಮಿ.ಮೀ ಮಳೆಯಾಗಿದೆ.
ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ 15.1 ಮಿ.ಮೀ, ಬೆಳಗೋಡು 9.4 ಮಿ.ಮೀ,
ಹಾನುಬಾಳು 17.8 ಮಿ.ಮೀ, ಮಾರನಹಳ್ಳಿ 38.4 ಮಿ.ಮೀ, ಶುಕ್ರವಾರಸಂತೆ
27.6ಮಿ.ಮೀ, ಹೆತ್ತೂರು 45 ಮಿ.ಮೀ, ಹೊಸೂರು 22 ಮಿ.ಮೀ, ಯಸಳೂರು 25.2
ಮಿ.ಮೀ ಹಾಗೂ ಸಕಲೇಶಪುರ 16.8 ಮಳೆಯಾಗಿದೆ.
ಹೊಳೆನರಸೀಪುರ ಹಳೇಕೋಟೆ 3.6 ಮಿ.ಮೀ, ಹಳ್ಳಿಮೈಸೂರು 2.2 ಮಿ.ಮೀ ಹಾಗೂ
ಹೊಳೆನರಸೀಪುರ 3.2 ಮಿ.ಮೀ, ಮಳೆಯಾಗಿದೆ.
ಅರಕಲಗೂಡು ತಾಲ್ಲೂಕಿನ ಕಸಬಾ 3.1 ಮಿ.ಮೀ, ಮಲ್ಲಿಪಟ್ಟಣ 14 ಮಿ.ಮೀ,
ಬಸವಪಟ್ಟಣ 10.6 ಮಿ.ಮೀ, ಕೊಣನೂರು 10.2 ಮಿ.ಮೀ, ದೊಡ್ಡಮಗ್ಗೆ 8.2ಮಿ.ಮೀ,
ರಾಮನಾಥಪುರ 9.8ಮಿ.ಮೀ, ದೊಡ್ಡಬೆಮ್ಮತ್ತಿ 12.2 ಮಿ.ಮೀ. ಮಳೆಯಾಗಿದೆ.
ಬೇಲೂರು ತಾಲ್ಲೂಕಿನ ಗೆಂಡೆಹಳ್ಳಿ 9 ಮಿ.ಮೀ, ಅರೇಹಳ್ಳಿ 11 ಮಿ.ಮೀ, ಹಳೇಬೀಡು 5.2
ಮಿ.ಮೀ, ಹಗರೆ 7.6ಮಿ.ಮೀ, ಬಿಕ್ಕೋಡು 10 ಮಿ.ಮೀ, ಬೇಲೂರು 6.4 ಮಿ.ಮೀ
ಮಳೆಯಾಗಿದೆ.
ಅರಸೀಕೆರೆ ತಾಲ್ಲೂಕಿನ ಜಾವಗಲ್ 2 ಮಿ.ಮೀ, ಕಸಬಾ 3 ಮಿ.ಮೀ, ಯಳವಾರೆ 3.2
ಮಿ.ಮೀ, ಗಂಡಸಿ 2.6 ಮಿ.ಮೀ, ಕಣಕಟ್ಟೆ 5.2 ಮಿ.ಮೀ ಮಳೆಯಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು