ಶ್ರವಣಬೆಳಗೊಳ: ಇಲ್ಲಿಯ ಜೈನಮಠದ ರಸ್ತೆಯ ಭಂಡಾರ ಬಸದಿ ಆವರಣದಲ್ಲಿ ಜ. 6 ಮತ್ತು 7 ರಂದು 5ನೇ ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕರ ಸಮ್ಮೇಳನ ನಡೆಯಲಿದೆ. ಸಿದ್ಧತೆಗಳು ಪೂರ್ಣಗೊಂಡಿದ್ದು, ವಿವಿಧ ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ.

ಮೂಡುಬಿದಿರೆಯ ವಿಶ್ರಾಂತ ಪ್ರಾಂಶುಪಾಲ, ವಾಸ್ತು ಮತ್ತು ಜೋತಿಷ್ಯ ಸಲಹೆಗಾರ ಡಾ. ಪಾದೂರ ಸುದರ್ಶನ ಕುಮಾರ್ ಇಂದ್ರ ಸಮ್ಮೇಳನಾಧ್ಯಕ್ಷರಾಗಿದ್ದು, ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನಿಧ್ಯ ಮತ್ತು ಮಾರ್ಗದರ್ಶನದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ.

ಜ.6 ರಂದು ಬೆಳಿಗ್ಗೆ 10 ಗಂಟೆಗೆ ಬಾಹುಬಲಿ ಬೆಟ್ಟದ ವಿಂಧ್ಯಗಿರಿ ಮಹಾದ್ವಾರದ ಮುಂಭಾಗದಲ್ಲಿ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆಗೆ ದಿಗಂಬರ ಜೈನ ಸಮಾಜದ ಅಧ್ಯಕ್ಷ ಜಿ.ಪಿ.ಪದ್ಮಕುಮಾರ್ ಚಾಲನೆ ನೀಡುವರು. ಕ್ಷೇತ್ರದ ರಾಜ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ಬೆಳಗಾವಿಯ ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಪ್ರತಿಷ್ಠಾಚಾರ್ಯ ಶಾಂತಿನಾಥ ಪಾರ್ಶ್ವನಾಥ ಉಪಾಧ್ಯೆ ಅವರು ಧ್ವಜ ಹಸ್ತಾಂತರ ಮಾಡಲಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಸಿ.ಎನ್. ಬಾಲಕೃಷ್ಣ, ಕರ್ನಾಟಕ ಜೈನ ಅಸೋಸಿಯೇಷನ್ ಅಧ್ಯಕ್ಷ ಎಸ್.ಜಿತೇಂದ್ರಕುಮಾರ್, ನಿಕಟಪೂರ್ವ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮೈಸೂರಿನ ಶೀಲಾ ಅನಂತ್ ರಾಜ್, ಪ್ರತಿಷ್ಠಾಚಾರ್ಯ ಪೆರಿಂಜೆ ಪದ್ಮಪ್ರಭ ಇಂದ್ರ ಶಾಸ್ತ್ರಿ ಭಾಗವಹಿಸಲಿದ್ದಾರೆ. ಸಮ್ಮೇಳನಾಧ್ಯಕ್ಷರಾದ ಡಾ.ಪಾದೂರ ಸುದರ್ಶನ್ ಕುಮಾರ್ ಇಂದ್ರ ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ.

ಮೊದಲ ದಿನದ ಮಧ್ಯಾಹ್ನದ ನಂತರ 3 ಗೋಷ್ಠಿಗಳು ನಡೆಯಲಿವೆ. ಬೆಳಿಗ್ಗೆ 12.30ರಿಂದ 1.30ರವರೆಗೆ ‘ಯಂತ್ರ-ಮಂತ್ರ-ತಂತ್ರ’ ವಿಷಯದ ಕುರಿತು, ಮಧ್ಯಾಹ್ನ 3 ರಿಂದ 4 ರವರೆಗೆ ‘ಜೈನ ಆಗಮದಲ್ಲಿ ಜಿನಶಾಸನ ದೇವತೆಗಳ ಪೂಜೆ’ ವಿಷಯದ ಮೇಲೆ 2ನೇ ಗೋಷ್ಠಿ ನಡೆಯಲಿವೆ. ಸಂಜೆ 4 ರಿಂದ 5 ರವರೆಗೆ ನಡೆಯುವ ‘ಜೈನ ಪೌರೋಹಿತ್ಯ ಅಂದು – ಇಂದು- ಮುಂದು’ 3 ನೇ ಗೋಷ್ಠಿ ಜರುಗಲಿದ್ದು, ಸಂಜೆ 6.30 ರಿಂದ 7.30 ಗಂಟೆಯವರೆಗೆ ಕೂಷ್ಮಾಂಡಿನಿ ಜೈನ ಮಹಿಳಾ ಸಮಾಜದವರಿಂದ ಸದಸ್ಯೆರಿಂದ ಸಾಂಸ್ಕೃತಿಕ ಬೆರಗು ಕಾರ್ಯಕ್ರಮ ನಡೆಯಲಿದೆ.

ಜ. 7ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 11 ಗಂಟೆಯವರೆಗೆ ‘ಪೂಜಾವಿಧಿ ಮುಖ ವಿಧಾನ’ ಗೋಷ್ಠಿ ನಡೆಯಲಿದ್ದು, ಜೈನ ಪೂಜಾ ವಿಧಿ ವಿಧಾನದಲ್ಲಿ ನೋಂಪಿಗಳ ಪಾತ್ರ ಕುರಿತು ಪ್ರಾಕೃತ ಭಾಷಾ ವಿದ್ವಾಂಸರಾದ ಡಾ.ಸಿ.ಪಿ. ಕುಸುಮಾ, ತ್ರೈವೈಣಿಕಾಚಾರ ಪ್ರಕಾರವಾಗಿ ಬ್ರಹ್ಮಸೂರಿ ಸಂಹಿತೆ ವಿವರಣೆಯಲ್ಲಿ ಜೋತಿಷ್ಯಶಾಸ್ತ್ರ ವಿಧಾನಾಚಾರ್ಯ ಪಿ. ಪವನ್, ಅಪ್ಪಾ ಸಾಹೇಬ್ ಉಪಾಧ್ಯೆ ಎಚ್.ಡಿ.ಸುಂದರ ರಾಜ್, ಸಿದ್ದು, ಪಂಡಿತರಿಂದ ವಾಸ್ತು ಮತ್ತು ಅಯ ನಿರ್ಣಯದ ಬಗ್ಗೆ ಉಪನ್ಯಾಸ ಮಾಡಲಿದ್ದಾರೆ.

ಬಹಿರಂಗ ಅಧಿವೇಶನ 11.30 ರಿಂದ 12 ಗಂಟೆಯವರೆಗೆ ನಡೆಯಲಿದ್ದು, ಸಾಂಗ್ಲಿಯ ದೀಪಕ್ ಕುಮಾರ್ ಬಾಳೋಸ್ ಉಪಾಧ್ಯೆ ಸಮಾರೋಪ ಭಾಷಣ ಮಾಡುವರು. ಅತಿಥಿಗಳಾಗಿ ಸಾಗರದ ಅಶೋಕ್ ಇಂದ್ರ, ಧರಣೇಂದ್ರ, ಮಂಜಯ್ಯ ಇಂದ್ರ, ಹರ್ಷ ನಾಗರಾಜ್ ಪಾಲ್ಗೊಳ್ಳುವರು. ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡುವರು. ಕನಕಗಿರಿ ಜೈನಮಠದ ಸ್ವಸ್ತಿಶ್ರೀ ಭುನವಕೀರ್ತಿ ಭಟ್ಟಾರಕ ಸ್ವಾಮೀಜಿ, ಹೊಂಬುಜ ಜೈನಮಠದ ಸ್ವಸ್ತಿಶ್ರೀ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.

ಸಮ್ಮೇಳನಾಧ್ಯಕ್ಷರ ಪರಿಚಯ ಡಾ.ಪಾದೂರು ಸುದರ್ಶನ ಕುಮಾರ ಇಂದ್ರ ಅವರು ಉಡುಪಿ ಜಿಲ್ಲೆ ಕಾಪು ತಾಲ್ಲೂಕು ಪಾದೂರು ಗ್ರಾಮದ ಚಾರಿತ್ರ್ಯಮತಿ ಮತ್ತು ಧರ್ಮರಾಜ ಇಂದ್ರರ ಪುತ್ರ. ಎಂ.ಎ. ಅರ್ಥಶಾಸ್ತ್ರ ಎಂ.ಎ.ಸಮಾಜಶಾಸ್ತ್ರ ಎಂಫಿಲ್ನಲ್ಲಿ ಪದವಿ ಗಳಿಸಿದ್ದಾರೆ. ಮೂಡುಬಿದಿರೆಯ ಧವಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸುದೀರ್ಘ ಸೇವೆ ಸಲ್ಲಿಸಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ. ರಾಜ್ಯ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಪ್ರಬಂಧ ಮಂಡನೆ ಮಾಡಿದ್ದಾರೆ. ಹಿರಿಯರ ಪರಂಪರೆಯಿಂದ ಬಂದಿರುವ ಪೂಜಾ ಕೈಂಕರ್ಯ ಮುಂದುವರಿಸಿದ್ದು ಜ್ಯೋತಿಷ್ಯ ಶಾಸ್ತ್ರ ವಾಸ್ತು ಶಾಸ್ತ್ರದಲ್ಲಿ ಹೆಸರು ಗಳಿಸಿದ್ದಾರೆ. ಪಂಚಕಲ್ಯಾಣ ಮಹಾಮಸ್ತಕಾಭಿಷೇಕಗಳಲ್ಲಿ ವಿವರಣಾಕಾರಾಗಿಯೂ ಸೇವೆ ಸಲ್ಲಿಸಿದ್ದಾರೆ. ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ 5ನೇ ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕರ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.