ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳೆನರಸೀಪುರ: ಪ್ರಜ್ವಲ್‌ ನಿವಾಸದಲ್ಲಿ ಎಸ್‌ಐಟಿ ಮಹಜರು

ಹೊಳೆನರಸೀಪುರ ಚೆನ್ನಾಂಬಿಕಾ ನಿವಾಸಕ್ಕೆ ಮಾಜಿ ಸಂಸದನ ಕರೆತಂದ ಅಧಿಕಾರಿಗಳು
Published 8 ಜೂನ್ 2024, 23:30 IST
Last Updated 8 ಜೂನ್ 2024, 23:30 IST
ಅಕ್ಷರ ಗಾತ್ರ

ಹೊಳೆನರಸೀಪುರ (ಹಾಸನ): ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ, ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಶನಿವಾರ ಎಸ್‌ಐಟಿ ಅಧಿಕಾರಿಗಳು ಇಲ್ಲಿನ ಚೆನ್ನಾಂಬಿಕಾ ನಿವಾಸಕ್ಕೆ ಕರೆತಂದು, ಸ್ಥಳ ಮಹಜರು ನಡೆಸಿದರು. ಅಧಿಕಾರಿಗಳೊಂದಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರೂ ಬಂದಿದ್ದರು.

ಶನಿವಾರ ಮಧ್ಯಾಹ್ನ 2 ಜೀಪು ಹಾಗೂ ಮೀಸಲು ಪೊಲೀಸ್ ಪಡೆಯ ಒಂದು ವಾಹನ ಚೆನ್ನಾಂಬಿಕಾ ನಿವಾಸದ ಕಾಂಪೌಂಡ್ ಒಳಗೆ ಪ್ರವೇಶಿಸಿದವು. ಎರಡೂ ಜೀಪಿನಲ್ಲಿ ಪ್ರಜ್ವಲ್ ಇರಲಿಲ್ಲ. ಮೀಸಲು ಪೊಲೀಸ್ ಪಡೆಯ ವಾಹನದ ಸೀಟ್ ಮೇಲೆ ಕಪ್ಪು ಬಟ್ಟೆ ಹಾಗೂ ಮಾಸ್ಕ್ ಹಾಕಿ ಮಲಗಿದ್ದ
ಪ್ರಜ್ವಲ್ ರೇವಣ್ಣ ಕ್ಯಾಮೆರಾ ಕಣ್ಣಿಗೆ ಕಂಡರು.

ಮನೆ ಕೆಲಸದ ಕೆಲವರನ್ನು ಬಿಟ್ಟರೆ ಮನೆಯಲ್ಲಿ ಬೇರಾರೂ ಇರಲಿಲ್ಲ. ಕಾಂಪೌಂಡ್ ಒಳಗೆ ಯಾರೂ ಪ್ರವೇಶಿಸಿದಂತೆ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ನೇತೃತ್ವದಲ್ಲಿ ಒಬ್ಬರು ಸರ್ಕಲ್ ಇನ್‌ಸ್ಪೆಕ್ಟರ್, ನಾಲ್ವರು ಎಸ್‌ಐ, 5 ಕ್ಕೂ ಹೆಚ್ಚು ಎಎಸ್‌ಐ, 10 ಕ್ಕೂ ಹೆಚ್ಚು ಪೊಲೀಸರು, ಮೀಸಲು ಪಡೆಯ ಸಿಬ್ಬಂದಿ ನಿಯೋಜಿಸಲಾಗಿತ್ತು.

ನಾಲ್ಕು ಗಂಟೆಯ ವಿಚಾರಣೆಯ ಬಳಿಕ ಪ್ರಜ್ವಲ್‌ ಅವರನ್ನು ಕರೆದುಕೊಂಡು ಎಸ್‌ಐಟಿ ತಂಡ ಇಲ್ಲಿಂದ ಹೊರಟಿತು. ಆ ವೇಳೆ ಬೆಂಬಲಿಗರು, ಪ್ರಜ್ವಲ್ ಹಾಗೂ ರೇವಣ್ಣ ಅವರಿಗೆ ಜೈಕಾರ ಕೂಗಿದರು.

ಪ್ರಜ್ವಲ್‌ ಮಾಜಿ ಕಾರು ಚಾಲಕ ಕಾರ್ತಿಕ್‌ ಬಂಧನ
ಹಾಸನ: ಪೆನ್‌ಡ್ರೈವ್ ಹಂಚಿಕೆ ಪ್ರಕರಣದ ಆರೋಪಿ ಪ್ರಜ್ವಲ್ ಅವರ ಮಾಜಿ ಕಾರು ಚಾಲಕ ಕಾರ್ತಿಕ್‌ ಗೌಡ ಅವರನ್ನು ಎಸ್‌ಐಟಿ ಅಧಿಕಾರಿಗಳು ಶನಿವಾರ ಹಾಸನ–ಮೈಸೂರು ಜಿಲ್ಲೆಯ ಗಡಿಯಲ್ಲಿ ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ‘ಪ್ರಜ್ವಲ್ ರೇವಣ್ಣ ಅವರ ಮಾರ್ಫ್ ಮಾಡಿದ ವಿಡಿಯೊಗಳನ್ನು ರೂಪಿಸಿ ಪೆನ್‌ಡ್ರೈವ್ ಮೂಲಕ ಹಂಚಿದ್ದಾರೆ’ ಎಂದು ಜೆಡಿಎಸ್ ಚುನಾವಣಾ ಏಜೆಂಟ್ ಪೂರ್ಣಚಂದ್ರ ಅವರು ಸೆನ್ ಠಾಣೆಗೆ ನೀಡಿದ್ದ ದೂರು ಆಧರಿಸಿ ಕಾರ್ತಿಕ್‌ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ‘ಪ್ರಜ್ವಲ್ ಅವರ ಮೊಬೈಲ್‌ನಲ್ಲಿದ್ದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್‌ ಅನ್ನು ವಕೀಲ ದೇವರಾಜೇಗೌಡ ಅವರಿಗೆ ನೀಡಿದ್ದೆ’ ಎಂದು ಹಿಂದೆ ಹೇಳಿಕೆ ನೀಡಿದ್ದ ಆರೋಪದಲ್ಲಿ ಕಾರ್ತಿಕ್ ಅವರನ್ನು ಬಂಧಿಸಲಾಗಿದೆ. ಜೂ.4ರಂದು ಹೊಳೆನರಸೀಪುರದಲ್ಲಿ ಸಂಸದ ಶ್ರೇಯಸ್ ಪಟೇಲ್‌ ಗೆಲುವಿನ ಸಂಭ್ರಮಾಚರಣೆಯಲ್ಲಿ ಆರೋಪಿ ಕಾಣಿಸಿಕೊಂಡಿದ್ದನು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT