ಅರಸೀಕೆರೆ: ತಾಲ್ಲೂಕಿನ ಕೆಲ್ಲಂಗೆರೆ ಗ್ರಾಮದಲ್ಲಿ ಶ್ರೀ ಅಂತರಘಟ್ಟಮ್ಮ ಹಾಗೂ ಉಡುಸಲ್ಲಮ್ಮ ದೇವಾಲಯದಲ್ಲಿ ಬುಧವಾರ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ, ಅನ್ನ ದಾಸೋಹ ನೆರವೇರಿತು.

ಮುಂಜಾನೆ ಅಂತರಘಟ್ಟಮ್ಮ ಹಾಗೂ ಉಡುಸಲಮ್ಮ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ನಡೆಯಿತು. ಸಂಜೆ ವಿಶೇಷ ಬಣ್ಣ ಬಣ್ಣದ ಹೂಗಳು ಹಾಗೂ ಹೊಂಬಾಳೆಯೊಂದಿಗೆ ಶಕ್ತಿದೇವತೆಗಳಾದ ಅಂತರಘಟ್ಟಮ್ಮ , ಉಡುಸಲಮ್ಮ ದೇವಿ, ಚಿಕ್ಕಯ್ಯ, ದೂತರಾಯ ಸ್ವಾಮಿಯವರಿಗೆ ಮಾಡಿದ ಅಲಂಕಾರ ಅಪಾರ ಭಕ್ತರ ಕಣ್ಮನ ಸೆಳೆಯಿತು.

ನಗರದ ಐಬಿ ಆಟೋ ನಿಲ್ದಾಣದ ಆಟೋ ಚಾಲಕರು ಹಾಗೂ ಮಾಲೀಕರ ಸೇವಾರ್ಥ ಕಾರ್ಯಕ್ರಮ ನಡೆಯಿತು. ಎಲ್ಲ ಭಕ್ತರಿಗೆ ಕೆಸರುದಂಟಿನ ಸಾಂಬರು, ಅನ್ನ, ಮುದ್ದೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಕೆಲ್ಲಂಗೆರೆ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.