ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Result 2024 | ಬರಗೂರು ಮೊರಾರ್ಜಿ ವಸತಿ ಶಾಲೆಗೆ ಶೇ 100 ಫಲಿತಾಂಶ

Published 9 ಮೇ 2024, 12:40 IST
Last Updated 9 ಮೇ 2024, 12:40 IST
ಅಕ್ಷರ ಗಾತ್ರ

ಅರಕಲಗೂಡು: ತಾಲ್ಲೂಕಿನ ಬರಗೂರು ಮೊರಾರ್ಜಿ ವಸತಿ ಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದೊರೆತಿದೆ. ಪರೀಕ್ಷೆ ಬರೆದಿದ್ದ 45 ವಿದ್ಯಾರ್ಥಿಗಳಲ್ಲಿ 21 ಮಂದಿ ಎ ಪ್ಲಸ್‌ ಗ್ರೇಡ್, 21 ಮಂದಿ ಎ ಗ್ರೇಡ್, ಇಬ್ಬರು ಬಿ ಪ್ಲಸ್‌ ಗ್ರೇಡ್, ಓರ್ವ ವಿದ್ಯಾರ್ಥಿ ಬಿ ಗ್ರೇಡ್ ಪಡೆದಿದ್ದಾರೆ, ಹರ್ಷ 613 (ಶೇ 98.08) ಅಂಕಗಳಿಸಿ ಶಾಲೆಗೆ ಮೊದಲ ಸ್ಥಾನ ಪಡೆದಿದ್ದಾರೆ.

ಬಿ.ಎಂ.ಕುಮಾರಿ ಶೇ 97.44, ಎ.ಎಂ. ಸಿಂಚನಾ ಶೇ 97.28, ಕೆ.ಎಚ್. ಮಿಥುನ್ ಶೇ 97.12, ಕೆ .ಎಸ್.ರಂಜನ್ ಕುಮಾರ್ ಶೇ 96.48, ಬಿ.ಆರ್.ಸಿಂಚನ ಶೇ 95.52, ಎ.ಆರ್.ಅರ್ಜುನ್ ಶೇ 95.52, ಆರ್.ಕೆ.ಉಷಾ ಶೇ 95.52 ಅಂಕ ಪಡೆದು ಉತ್ತಮ ಸಾಧನೆ ಮೆರೆದಿದ್ದಾರೆ ಎಂದು ಪ್ರಾಂಶುಪಾಲ ಜಿ.ಆರ್.ಗಿರೀಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT