ಹಾಸನ: ಇಲ್ಲಿನ ನವಕೀಸ್ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಯುವಕ ಸಂಘಗಳ ಆಶ್ರಯದಲ್ಲಿ ‘ಸ್ಕೂಲ್ ಬೆಲ್’ ಕಾರ್ಯಕ್ರಮದಡಿ ಆಲೂರು ತಾಲ್ಲೂಕಿನ ಕೆಂಚಮ್ಮನ ಹೊಸಕೋಟೆಯ ಸರ್ಕಾರಿ ಪ್ರೌಢಶಾಲೆಗೆ ಬಣ್ಣ ಬಳಿದು ನವೀಕರಣ ಮಾಡಲಾಯಿತು.

ರಾಷ್ಟ್ರೀಯ ಸೇವಾ ಯೋಜನೆಯ 40 ವಿದ್ಯಾರ್ಥಿ ಸ್ವಯಂ ಸೇವಕರು ಈ ಸೇವಾ ಕಾರ್ಯದಲ್ಲಿ ಪಾಲ್ಗೊಂಡು ವಿಜ್ಞಾನ, ಗಣಿತ ಹಾಗೂ ಸಮಾಜ ಶಾಸ್ತ್ರಗಳಿಗೆ ಸಂಬಂಧಪಟ್ಟ ರೇಖಾ ಚಿತ್ರಗಳನ್ನು ರಚಿಸಿ, ಬಣ್ಣ ತುಂಬಿದರು. ಈ ಚಿತ್ರಗಳು ಮಕ್ಕಳ ಕಲಿಕೆಗೆ ಸಹಾಯಕವಾಗಿದ್ದು, ಶಿಕ್ಷಕರು ಬೋಧಿಸಲು ಅನುಕೂಲವಾಗಿವೆ.

ಬೋಧನಾ ಕೊಠಡಿಯ ಒಳಗೆ ಹಾಗೂ ಕಟ್ಟಡದ ಹೊರಗೆ ಬಣ್ಣ ಬಳಿದು ಆಕರ್ಷಕ ಚಿತ್ರಗಳನ್ನು ರಚಿಸಲಾಯಿತು. ಶಾಲಾ ಕಾಂಪೌಂಡ್ ಮೇಲೆ ಚಿತ್ತಾರದ ಚಿತ್ರಗಳನ್ನು ಬಿಡಿಸಿ ಆಕರ್ಷಣೀಯಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಮೋಹನ್ ಕುಮಾರ್, ವರದರಾಜು ಮತ್ತು ಯುವಕ ಸಂಘದ ಗುರುಪ್ರಸಾದ್, ಗ್ರಾಮದ ಮುಖಂಡರಾದ ಶ್ಯಾಮ್ರಾವ್, ಚಂದ್ರಮೌಳಿ, ಶಿವಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.