ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹75 ಲಕ್ಷ ವೆಚ್ಚದಲ್ಲಿ ದೇಗುಲ ಜೀರ್ಣೋದ್ಧಾರ

ಕೊಂಡಜ್ಜಿ ಗ್ರಾಮದ ವರದರಾಜು ಸ್ವಾಮಿ ದೇವಸ್ಥಾನಕ್ಕೆ ಶಾಸಕ ಪ್ರೀತಂ ಗೌಡ ಭೇಟಿ, ಪರಿಶೀಲನೆ
Last Updated 25 ಜನವರಿ 2021, 14:05 IST
ಅಕ್ಷರ ಗಾತ್ರ

ಹಾಸನ: ತಾಲ್ಲೂಕಿನ ಸಾಲಗಾಮೆ ಹೋಬಳಿ ಕೊಂಡಜ್ಜಿ ಗ್ರಾಮದ ಪುರಾತತ್ವ ಇಲಾಖೆಗೆ ಒಳಪಡುವವರದರಾಜು ಸ್ವಾಮಿ ದೇವಸ್ಥಾನವನ್ನು ₹75 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗುವುದು ಎಂದು ಶಾಸಕ ಪ್ರೀತಮ್ ಗೌಡ ತಿಳಿಸಿದರು.

ಕರ್ನಾಟಕ ರಾಜ್ಯ ಖನಿಜ ನಿಗಮದ ಅಧ್ಯಕ್ಷ ಲಿಂಗ ಮೂರ್ತಿ ಹಾಗೂ ಅಧಿಕಾರಿಗಳೊಂದಿಗೆ ಸೋಮವಾರದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರಜತೆ ಮಾತನಾಡಿದರು.

ಸುಮಾರು 10 ವರ್ಷಗಳಿಂದ ದೇವಾಲಯದ ಅಭಿವೃದ್ಧಿ ಸ್ಥಗಿತಗೊಂಡು ಪಾಳು ಬಿದ್ದಿದೆ. ಹಾಸನಾಂಬದೇವಸ್ಥಾನ ‘ಎ’ ಶ್ರೇಣಿ ಪಡೆದಿರುವುದರಿಂದ ಮುಜರಾಯಿ ಇಲಾಖೆಗೆ ಒಳಪಟ್ಟಿರುವ ‘ಬಿ’ ಗ್ರೇಡ್‌ದೇವಸ್ಥಾನಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಕಾನೂನಿನಲ್ಲಿ ಅವಕಾಶ ಇದೆ. ಹಾಗಾಗಿ ಹಾಸನಾಂಬದೇಗುಲದ ಖಾತೆಯಿಂದ ₹50 ಲಕ್ಷ ವಿನಿಯೋಗಿಸಲಾಗುವುದು. ರಾಜ್ಯ ಖನಿಜ ನಿಗಮದ ಅಧ್ಯಕಲಿಂಗಮೂರ್ತಿ ಅವರು ಸಿಎಸ್‌ಆರ್‌ ನಿಧಿಯಿಂದ ₹ 25 ಲಕ್ಷ ನೀಡಲು ಒಪ್ಪಿದ್ದಾರೆ. ಒಟ್ಟು 75 ಲಕ್ಷ ಹಾಗೂದಾನಿಗಳ ಸಹಕಾರ ಪಡೆದು ದೇವಾಲಯ ಅಭಿವೃದ್ಧಿ ಪಡಿಸಲಾಗುವುದು ಎಂದು ವಿವರಿಸಿದರು.
‌‌
ಜಿಲ್ಲಾಧಿಕಾರಿ ಆರ್‌.ಗಿರೀಶ್‌, ತಹಶೀಲ್ದಾರ್‌ ಶಿವಶಂಕರಪ್ಪ ಜತೆ ಚರ್ಚಿಸಲಾಗಿದ್ದು, ‌ಪ್ರಸಕ್ತ ವರ್ಷವೇ ನಿರ್ಮಿತಿಕೇಂದ್ರದ ವತಿಯಿಂದ ಕಾಮಗಾರಿ ಕೈಗೆತ್ತಿಗೊಳ್ಳಲಾಗುವುದು. ಜೀರ್ಣೋದ್ಧಾರಕ್ಕೆ ಹಣದ ಕೊರತೆ ಇಲ್ಲ ಎಂದುಸ್ಪಷ್ಟಪಡಿಸಿದರು.

ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸೀಗೆ ಗುಡ್ಡ, ದೊಡ್ಡಗದ್ದವಳ್ಳಿ ಹಾಗೂ ಕೊಂಡಜ್ಜಿ ದೇವಸ್ಥಾನಗಳ ಸಂಪರ್ಕಿಸುವರಸ್ತೆಗಳ ಅಭಿವೃದ್ಧಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದೆ, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆಎಂದು ಹೇಳಿದರು.

ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಸದ ವೇಳೆ ದೇವಸ್ಥಾನಕ್ಕೆ ಭೇಟಿ ನೀಡಿ ₹25 ಲಕ್ಷಅನುದಾನವನ್ನು ಅಭಿವೃದ್ಧಿಗೆ ನೀಡಿದ್ದರು. ಆ ಹಣದಿಂದ ದೇವಾಲಯ ಈ ಹಂತದ ವರೆಗೆಕಾಮಗಾರಿಯಾಗಿದೆ. 2022ರ ಜನವರಿ 25 ರ ವೇಳೆಗೆ ದೇವಸ್ಥಾನದ ಕಾಮಗಾರಿ ಪೂರ್ಣಗೊಳಿಸಿ,ಯಡಿಯೂರಪ್ಪ ಅವರಿಂದಲೇ ಉದ್ಘಾಟನೆ ಮಾಡಿಸಲಾಗುಹುದು ಎಂದರು.

ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಸಂಜಯ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕನಿರ್ದೇಶಕ ಎಂ.ಡಿ. ಸುದರ್ಶನ್ ಹಾಗೂ ಪುರಾತತ್ವ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರುಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT