ರೈಲು ಕಂಬಿ ಕಿತ್ತುಕೊಂಡು ಹೋದವರು
ಈ ಜಿಲ್ಲೆಗೆ ಕಾಂಗ್ರೆಸ್ ಪಕ್ಷ ಏನು ಕೊಡುಗೆ ಕೊಟ್ಟಿದೆ? ಎಂಬುದನ್ನು ಹೇಳಲಿ. ಬ್ರಿಟಿಷರ ಕಾಲದಲ್ಲಿ ಆಗಿದ್ದ ಹಾಸನ– ಮೈಸೂರು ರೈಲು ಮಾರ್ಗದ ಕಂಬಿ ಕಿತ್ತುಕೊಂಡು ಹೋದವರು ಕಾಂಗ್ರೆಸ್‌ನವರು ಎಂದು ಎಚ್.ಡಿ. ರೇವಣ್ಣ ಆರೋಪಿಸಿದರು. ದೇವೇಗೌಡರು ಪ್ರಧಾನಮಂತ್ರಿ ಆಗಿದ್ದ ಸಂದರ್ಭದಲ್ಲಿ ಹತ್ತೂವರೆ ತಿಂಗಳಿನಲ್ಲಿ ಆ ರೈಲ್ವೆ ಮಾರ್ಗ ಮರು ನಿರ್ಮಾಣ ಮಾಡಲು ಕ್ರಮ ಕೈಗೊಂಡರು ಎಂದರು. ಈ ಜಿಲ್ಲೆಗೆ ಉಪ ಮುಖ್ಯಮಂತ್ರಿ ಏನು ಕೊಡುಗೆ ಕೊಟ್ಟಿದ್ದಾರೆ? ರೈಲ್ವೆ ಮಾರ್ಗ ಕೋರ್ಟ್ ನೂತನ ಬಸ್ ನಿಲ್ದಾಣಗಳನ್ನು ಕೊಟ್ಟಿದ್ದು ಯಾರು? ಇವೆಲ್ಲ ಸಾಕ್ಷಿ ಗುಡ್ಡೆಗಳಲ್ಲವೇ? ಗಿರಾಕಿಗಳೇ ಸರ್ಕಾರಿ ಆಸ್ಪತ್ರೆ ಎಂಜಿನಿಯರ್ ವೈದ್ಯಕೀಯ ಕಾಲೇಜು ನರ್ಸಿಂಗ್ ಕಾಲೇಜುಗಳನ್ನು ನೋಡಿ. ಈ ಜಿಲ್ಲೆಯ ಜನ ದೇವೇಗೌಡರ ಕುಟುಂಬಕ್ಕೆ ರಾಜಕೀಯ ಶಕ್ತಿ ಕೊಟ್ಟಿದ್ದಾರೆ. ಅವರ ಋಣ ನಮ್ಮ ಮೇಲಿದ್ದು ಅದನ್ನು ತೀರಿಸುತ್ತೇವೆ ಎಂದು ಹೇಳಿದರು.