ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ | ಮೊದಲ ಮಳೆ; ವಾಹನ ಸವಾರರ ಪರದಾಟ

Published 11 ಜುಲೈ 2023, 14:24 IST
Last Updated 11 ಜುಲೈ 2023, 14:24 IST
ಅಕ್ಷರ ಗಾತ್ರ

ಹಿರೀಸಾವೆ: ಮಂಗಳವಾರ ಸಂಜೆ 40 ನಿಮಿಷ ಮಳೆ ಸುರಿಯಿತು. ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯ ತುಂಬಾ ನೀರು ನಿಂತ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡಿದರು.

ಸಂಜೆ ಶಾಲೆ ಬಿಟ್ಟ ಸಮಯದಲ್ಲಿ ಜೋರು ಮಳೆ ಬಂದ್ದರಿಂದ, ವಿದ್ಯಾರ್ಥಿಗಳು ನೆನೆದು ಮನೆಗೆ ಹೋಗಬೇಕಾಯಿತು. ಹಿರೀಸಾವೆ ಅಂಬೇಡ್ಕರ್ ವೃತ್ತದಿಂದ ಮೇಟಿಕೆರೆ ವೃತ್ತದವರೆಗೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶ್ರವಣಬೆಳಗೊಳ ರಸ್ತೆಗೆ ಅಂಡರ್ ಪಾಸ್ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಇದರಿಂದ ಸರ್ವಿಸ್ ರಸ್ತೆಯ ಪಕ್ಕದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ, ಮಳೆ ನೀರು, ಸರ್ವಿಸ್ ರಸ್ತೆಯಲ್ಲಿ ಹರಿದು, ದಿಡಗ ಅಂಡರ್ ಪಾಸ್ ಬಳಿ 3 ರಿಂದ 4 ಅಡಿ ನೀರು ರಸ್ತೆಯಲ್ಲಿ ನಿಂತು, ರಸ್ತೆ ಕಾಣದಾಗಿತ್ತು. ನೀರಿನಲ್ಲಿಯೇ ಹಾಸನ–ಬೆಂಗಳೂರು, ಬೆಂಗಳೂರು–ಹಾಸನ ಕಡೆಗೆ ವಾಹನಗಳು ಸಂಚರಿಸಿದವು.

ಹೋಬಳಿಯಲ್ಲಿ ಹಲವು ದಿನಗಳಿಂದ ಮಳೆಯಾಗದೆ, ಕೃಷಿ ಚಟುವಟಿಕೆ ಕುಂಠಿತವಾಗಿತ್ತು. ಈ ವರ್ಷದಲ್ಲಿ ಇಂದು ಉತ್ತಮ ಮಳೆಯಾಗಿದೆ. ನಾಳೆಯಿಂದ ರೈತರು ರಾಗಿ, ಜೋಳದ ಬಿತ್ತನೆ ಕಾರ್ಯವನ್ನು ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT