ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿರೀಸಾವೆಯಲ್ಲಿ ಎಸ್ ಬಿಐ ಎಟಿಎಂನಲ್ಲಿ ಹಣ ಕಳ್ಳತನಕ್ಕೆ ಯತ್ನ

Published 7 ಜುಲೈ 2024, 14:09 IST
Last Updated 7 ಜುಲೈ 2024, 14:09 IST
ಅಕ್ಷರ ಗಾತ್ರ

ಹಿರೀಸಾವೆ: ಇಲ್ಲಿನ ಎಸ್‌ಬಿಐ ಎಟಿಎಂ ಯಂತ್ರದಿಂದ ಭಾನುವಾರ ನಸುಕಿನಲ್ಲಿ ಹಣ ಕಳವು  ಪ್ರಯತ್ನ ನಡೆದಿದೆ.

‘ಇಲ್ಲಿನ ಶ್ರವಣಬೆಳಗೊಳ ರಸ್ತೆಯ  ಎಟಿಎಂ ಕೇಂದ್ರ ಬಳಿಗೆ ಕಳ್ಳರು ಕಾರಿನಲ್ಲಿ ಬಂದು, ಮೊದಲು ಸಿಸಿ ಟಿವಿ ಕ್ಯಾಮೆರಾಗಳಿಗೆ ಬಣ್ಣವನ್ನು  ಸಿಂಪಡಿಸಿದ್ದರು. ಬಳಿಕ ಗ್ಯಾಸ್ ಕಟ್ಟರ್ ಬಳಸಿ ಯಂತ್ರದ ಒಂದು ಭಾಗವನ್ನು ಕತ್ತರಿಸಿದ್ದರು. ಆಗ ರಾತ್ರಿ ಗಸ್ತಿನ ಪೊಲೀಸರು ಅಲ್ಲಿಗೆ ಬರುವುದನ್ನು ಗಮನಿಸಿದ ಕಾರಿನೊಳಗೆ ಇದ್ದ ಇದ್ದ  ವ್ಯಕ್ತಿ, ಎಟಿಎಂ ಕೇಂದ್ರದ ಒಳಗೆ ಇದ್ದವರಿಗೆ ಸೂಚನೆ ನೀಡಿದ್ದನು. ಪೊಲೀಸರು ಅವರನ್ನು ಹಿಡಿಯುವ ಪ್ರಯತ್ನ ಮಾಡಿದರೂ ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ’ ೆಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಈ ಎಟಿಎಂಗೆ ಹಣವನ್ನು ತುಂಬಲಾಗಿತ್ತು. ಕಳೆದ ವರ್ಷ ಎಸ್‌ಬಿಐ ಶಾಖೆ ಪಕ್ಕದ ಎಟಿಎಂ ಕೇಂದ್ರದಿಂದ ಹಣ ಕಳವಿಗೆ  ಪ್ರಯತ್ನ ನಡೆದಿದ್ದುದನ್ನು  ಸ್ಮರಿಸಬಹುದು.

  ಪೊಲೀಸ್‌ ಇನ್‌ಸ್ಪೆಕ್ಟರ್ ಸಂತೋಷ್, ಎಸ್ಐ ಸುಪ್ರಿತ್ ಕೃತ್ಯ ನಡೆದ ಸ್ಥಳ ಪರಿಶೀಲನೆ ನಡೆಸಿದರು.  ಹಾಸನದಿಂದ ಶ್ವಾನದಳ, ಬೆರಳಚ್ಚುಗಾರರ ತಂಡದವರು ಬಂದು ಎಟಿಎಂ ಯಂತ್ರ, ಗ್ಯಾಸ್ ಕಟರ್ ಮೇಲಿದ್ದ ಬೆರಳಚ್ಚುಗಳನ್ನು ಸಂಗ್ರಹಿಸಿದರು. ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT