ಬೇಲೂರು: ‘ಬೇಲೂರು ತಾಲ್ಲೂಕನ್ನು ಬರಪಿಡಿತ ತಾಲ್ಲೂಕನ್ನಾಗಿ ಘೋಷಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ’ ಎಂದು ಶಾಸಕ ಎಚ್.ಕೆ.ಸುರೇಶ್ ತಿಳಿಸಿದರು.
ತಾಲ್ಲೂಕಿನ ಸೋಂಪುರ ಗ್ರಾಮದಲ್ಲಿ ಒಣಗಿದ ಬೆಳೆಗಳನ್ನು ಸೋಮವಾರ ವೀಕ್ಷಿಸಿ ಅವರು ಮಾತನಾಡಿದರು.
‘ತಾಲ್ಲೂಕಿನ ಶೇಕಡಾ 20 ರಷ್ಟು ಭಾಗ ಮಲೆನಾಡು ಭಾಗವಾಗಿದ್ದು, ಶೇಕಡಾ 80 ರಷ್ಟು ಭಾಗ ಬಯಲು ಸೀಮೆಯಾಗಿದೆ. ತಾಲ್ಲೂಕಿನ ವಾಡಿಕೆ ಮಳೆಯಲ್ಲಿ ಶೇಕಡಾ 22 ರಷ್ಟು ಕೊರತೆಯಾಗಿದೆ. ಯಾವ ಕಾರಣಕ್ಕಾಗಿ ಬರಪೀಡಿತ ತಾಲ್ಲೂಕಿನ ಪಟ್ಟಿಗೆ ಸೇರಿಸಿಲ್ಲ ಎಂಬುದು ತಿಳಿಯುತ್ತಿಲ್ಲ. ಈ ಬಗ್ಗೆ ಕೃಷಿ ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ತಿಳಿಸಿ ಬರಪೀಡಿತ ಪಟ್ಟಿಗೆ ಸೇರಿಸಲು ಒತ್ತಾಯಿಸಲಾಗುವುದು’ ಎಂದರು.
‘ಸಾಲ ವಸೂಲಾತಿಗಾಗಿ ನೋಟಿಸ್ ನೀಡದೆ ಸಮಯ ನೀಡಬೇಕು. ಬೆಳೆ ಚನ್ನಾಗಿ ಬಂದರೆ ರೈತರೇ ಬ್ಯಾಂಕ್‌ಗೆ ಸಾಲ ಕಟ್ಟುತ್ತಾರೆ’ ಎಂದರು.
ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಸೀಮಾ, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಕಾವ್ಯ, ರಕ್ಷಿತಾ, ಗ್ರಾಮ ಲೆಕ್ಕಾಧಿಕಾರಿ ಹನುಮಂತು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.