ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಲ ನಟಿಯಾಗಿ ಪ್ರಥಮ ಬಾರಿಗೆ ‘ಭೀಮಾ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಎರಡು ವರ್ಷಗಳ ಹಿಂದೆ ನಮ್ಮ ತಂದೆ ಸಂತೋಷ್ ಅವರ ರೆಸಾರ್ಟ್‌ಗೆ ಬಂದಿದ್ದ ದುನಿಯಾ ವಿಜಿ ಹಾಗೂ ಸ್ನೇಹಿತರಾದ ಪ್ರಶಾಂತ್ ಅವರು ಬಾಲ ನಟಿಯಾಗಿ ಮುಂದಿನ ಚಿತ್ರದಲ್ಲಿ ಅವಕಾಶ ನೀಡುವುದಾಗಿ ತಿಳಿಸಿದ್ದರು. ಅದರಂತೆ ನನಗೆ ಈ ಚಿತ್ರದಲ್ಲಿ ನಟನೆಗೆ ಅವಕಾಶ ದೊರೆತಿದ್ದು, ಚಿತ್ರ ಉತ್ತಮವಾಗಿ ಮೂಡಿ ಬಂದಿದೆ ಎಂದರು.