ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್‌ ವಿರುದ್ಧ ಸುಪ್ರೀಂಕೋರ್ಟ್‌ನಲ್ಲೂ ಗೆಲುವಿಗೆ ಸಿದ್ಧತೆ: ಜಿ.ದೇವರಾಜೇಗೌಡ

Published 7 ಸೆಪ್ಟೆಂಬರ್ 2023, 17:22 IST
Last Updated 7 ಸೆಪ್ಟೆಂಬರ್ 2023, 17:22 IST
ಅಕ್ಷರ ಗಾತ್ರ

ಹಾಸನ: ‘ಸಂಸದರ ಸ್ಥಾನದಿಂದ ಅನರ್ಹತೆ ರದ್ದು ಕೋರಿ ಪ್ರಜ್ವಲ್‌ ರೇವಣ್ಣ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಅಲ್ಲಿಯೂ ನಮಗೇ ಜಯ ಸಿಗುವ ವಿಶ್ವಾಸವಿದೆ. ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯೆಟ್ ದಾಖಲಿಸಿರುವೆ’ ಎಂದು ದೂರುದಾರ ವಕೀಲ ಜಿ. ದೇವರಾಜೇಗೌಡ ಹೇಳಿದರು.

‘ತೀರ್ಪು ಅಮಾನತು ಕೋರಿ ಪ್ರಜ್ವಲ್‌ ಹೈಕೋರ್ಟ್‌ ಮೊರೆ ಹೋಗಿದ್ದಾರೆ. 30 ದಿನದೊಳಗೆ ಸುಪ್ರೀಂ ಕೋರ್ಟ್‌ಗೂ ಹೋಗಬಹುದು. ನಾವು ಅದಕ್ಕೆ ಪೂರಕವಾದ ತಕರಾರು ಹಾಕಲು ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದ್ದೇವೆ’ ಎಂದರು.

‘ಹಲವಾರು ಆಮಿಷಗಳು ಬಂದರೂ ನನ್ನಲ್ಲಿ ಗುರಿಯಿತ್ತು. ಜಿಲ್ಲೆಯ ದೊಡ್ಡ ಕುಟುಂಬದ ವಿರುದ್ಧ ಜಯಶಾಲಿಯಾಗಿದ್ದು, ಇದು ನನ್ನ ಜಯವಲ್ಲ. ರಾಜಕೀಯ ಪ್ರಭಾವದ ಎದುರು, ಸಾಮಾನ್ಯ ವಕೀಲನಾಗಿ ನ್ಯಾಯದ ಪರ ನಡೆಸಿದ ಹೋರಾಟಕ್ಕೆ ‌‌‌ಸಿಕ್ಕ ಜಯ ಎಂಬುದಕ್ಕೆ ತೀರ್ಪು ಸಾಕ್ಷಿಯಾಗಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT