ಹಾಸನ: ಸಕಲೇಶಪುರ ತಾಲ್ಲೂಕಿನ ಕಿರೇಹಳ್ಳಿ, ಹಸಿಡೆ, ಹಲಸುಲಿಗೆ ಸುತ್ತಮುತ್ತ ಕಾಡಾನೆಗಳು ದಾಳಿ ನಡೆಸಿ, ಹಲವು ಕಾಫಿ ತೋಟಗಳಲ್ಲಿ ಬೆಳೆ ನಾಶಪಡಿಸಿವೆ.
ಹದಿನಾಲ್ಕು ಕಾಡಾನೆಗಳ ಹಿಂಡು ಹಸಿಡೆ, ಹಲಸುಲಿಗೆ, ಮಾಸುವಳ್ಳಿ ಸುತ್ತ ಸಂಚರಿಸುತ್ತಿದ್ದು,ಕಾಫಿ ತೋಟಗಳಲ್ಲಿ ಕಾಫಿ ಗಿಡಗಳನ್ನು ತುಳಿದು ನಾಶಪಡಿಸಿವೆ. ಗುರುವಾರ ಹಲಸುಲಿಗೆಯಲ್ಲಿ ಆನೆಗಳ ಹಿಂಡು ರಸ್ತೆ ದಾಟಿದ್ದು, ನಡೆದು ಹೋಗುತ್ತಿದ್ದ ಜನರು ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ತಂಡದಲ್ಲಿದ್ದ ಆನೆಗೆ ರೇಡಿಯೋ ಕಾಲರ್ ಅಳವಡಿಸಿರುವುದು ಕಂಡು
ಬಂದಿದೆ.
ಅರಣ್ಯ ಇಲಾಖೆ ಸೂಕ್ತ ಕ್ರಮವಹಿಸಿ ಆನೆ ಹಾವಳಿನಿಯಂತ್ರಣಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಆಲೂರು ತಾಲ್ಲೂಕಿನ ಕೆ.ಹೊಸಕೋಟೆ, ಕುಂದೂರು ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಕಾಡಾನೆಗಳು ಬೆಳ್ಳಂಬೆಳಗ್ಗೆ ಗ್ರಾಮಗಳಲ್ಲಿ ಪ್ರತ್ಯಕ್ಷವಾಗುತ್ತಿದ್ದು, ಸ್ಥಳೀಯರಲ್ಲಿಆತಂಕದ ವಾತಾವರಣ ನಿರ್ಮಿಸಿದೆ.
ಮಲ್ಲಾಪುರ ಗ್ರಾಮ ಪಂಚಾಯಿತಿಗೆ ಸೇರಿದ ವಾಟೆಪುರ ಗ್ರಾಮದಲ್ಲಿ ಬೆಳಗ್ಗೆ ಒಂಟಿ ಸಲಗ ಬೀದಿಗಳಲ್ಲಿ ಸಂಚಾರ ನಡೆಸಿದಾಗ ಭಯಭೀತಗೊಂಡ ಗ್ರಾಮಸ್ಥರು ಓಡಿ ಹೋಗಿ ಮನೆ ಬಾಗಿಲುಹಾಕಿಕೊಂಡರು.
‘ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ಮತ್ತು ಪರಿಸರವನ್ನು ನಾಶ ಮಾಡುತ್ತಿರುವುದು ಕಾಡಾನೆಸಮಸ್ಯೆಗೆ ಕಾರಣವಾಗಿದೆ. ಹಾಸನ - ಮಂಗಳೂರು ರೈಲ್ವೆ ಮಾರ್ಗವನ್ನು ಸುಮಾರು 30ಕಿಲೋ ಮೀಟರ್ ನಿರ್ಮಿಸಿದ್ದು, ಪಶ್ಚಿಮಘಟ್ಟದ ಪರಿಸರ ನಾಶಕ್ಕೆನಾಂದಿಯಾಯಿತು.ರೈಲ್ವೆ ಯೋಜನೆಯಿಂದ ಪ್ರಾರಂಭವಾಗಿ ಎತ್ತಿನಹೊಳೆ ಯೋಜನೆವರೆಗೂಕಾಡು ನಾಶವಾಗುತ್ತಲೇ ಬರುತ್ತಿದೆ’ ಎಂದು ಹಲಸುಲಿಗೆ ಗ್ರಾಮದ ಎಚ್. ವಿ. ಹರೀಶ್ ಆರೋಪಿಸಿದರು.
‘ಆನೆಗಳು ಆಹಾರ ಅರಸಿ ಕಾಡಿನಿಂದ ನಾಡಿಗೆ ಬರುತ್ತಿವೆ. ಬೆಳೆ ಮತ್ತು ಮನುಷ್ಯರ ಪ್ರಾಣ ಹಾನಿಯಾಗುತ್ತಿದೆ. ಆನೆಗಳ ಸಂತತಿ ಹೆಚ್ಚುತ್ತಿದೆ. ಕೂಡಲೇ ಆನೆಗಳ ಸ್ಥಳಾಂತರ ಮಾಡಬೇಕುಅಥವಾ ಮನುಷ್ಯ ಮತ್ತು ಕಾಡಾನೆ ಸಂಘರ್ಷ ತಡೆಗೆ ಆನೆಧಾಮ ನಿರ್ಮಾಣ ಶಾಶ್ವತಪರಿಹಾರ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.