ಸಕಲೇಶಪುರ: ತಾಲ್ಲೂಕಿನ ಕುಂಬ್ರಳ್ಳಿಯಲ್ಲಿರುವ ಮಾಜಿ ಶಾಸಕ, ದಿವಂಗತ ಬಿ.ಬಿ. ಶಿವಪ್ಪ ಅವರ ಮನೆಗೆ ಬಿ.ಎಸ್. ಯಡಿಯೂರಪ್ಪ ಸೋಮವಾರ ಭೇಟಿ ನೀಡಿ, ಶಿವಪ್ಪನವರ ಪತ್ನಿ ಹಾಗೂ ರಾಜ್ಯ ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಸುಶೀಲಾ ಶಿವಪ್ಪ ಅವರ ಆರೋಗ್ಯ ವಿಚಾರಿಸಿದರು.
ಅನಾರೋಗ್ಯದಿಂದ ಕೆಲವು ತಿಂಗಳಿಂದ ಹಾಸಿಗೆ ಹಿಡಿದಿರುವ ಸುಶೀಲಾ ಅವರೊಂದಿಗೆ 30 ನಿಮಿಷ ಕಾಲ ಕಳೆದ ಯಡಿಯೂರಪ್ಪ, ಆರೋಗ್ಯ ವಿಚಾರಿಸಿದರು. ತೀವ್ರ ಅಸ್ವಸ್ಥರಾಗಿರುವ ಸುಶೀಲಾ ಅವರು ಯಡಿಯೂರಪ್ಪ ಅವರ ಗುರುತು ಹಿಡಿದು, ಮುಗುಳು ನಗೆಯಿಂದ ಪ್ರತಿಕ್ರಿಯಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ‘ಬಿ.ಬಿ. ಶಿವಪ್ಪ ಹಾಗೂ ನಾನೂ ಒಟ್ಟಿಗೆ ರಾಜಕಾರಣ ಮಾಡಿಕೊಂಡು ಬಂದವರು. ಸುಶೀಲಮ್ಮ ನಮಗೆ ತಾಯಿ ಪ್ರೀತಿ ನೀಡಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಬೇಗ ಚೇತರಿಸಿಕೊಳ್ಳಲಿ ಎಂದು ದೇವರನ್ನು ಬೇಡುತ್ತೇನೆ’ ಎಂದರು.
ಶಾಸಕ ಪ್ರೀತಂ ಗೌಡ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಮುಖಂಡಎಚ್.ಎಂ. ವಿಶ್ವನಾಥ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.